ಜನಸ್ಪಂದನ ನ್ಯೂಸ್, ಬಾಗ್‌ಪತ್ (ಉತ್ತರ ಪ್ರದೇಶ) : ಬಾಗ್‌ಪತ್ ಮೂಲದ ಪತ್ನಿಯೋರ್ವಳು ತನ್ನ ಪತಿ (Husband) ಹಾಗೂ ಪತಿಯ ಕುಟುಂಬ ಸದಸ್ಯರ ವಿರುದ್ಧ ತೀವ್ರ ಆರೋಪಗಳನ್ನು ಮಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ಹೇಳುವಂತೆ, ಪತಿ (Husband) ಮದ್ಯಪಾನ ಮತ್ತು ಜೂಜಾಟದ ವ್ಯಸನಕ್ಕೆ ಒಳಗಾಗಿದ್ದು, ಮದುವೆಯಾದ ಕೂಡಲೇ ತನ್ನ ಮೇಲೆ ದೈಹಿಕ ಹಲ್ಲೆ ಮತ್ತು ಮಾನಸಿಕ ಹಿಂಸೆ ಕೊಡಲು ಆರಂಭಿಸಿದ್ದನು ಎಂದಿದ್ದಾರೆ.
ಅಕ್ಟೋಬರ್ 24, 2024 ರಂದು ಮೀರತ್ ನ ಖಿವಾಯ್ ಗ್ರಾಮದ ಡ್ಯಾನಿಶ್ ಅವರೊಂದಿಗೆ ಮದುವೆಯಾಗಿದ್ದ ಈ ಮಹಿಳೆ, ಮದುವೆ ಬಳಿಕ ಪತಿ ಮತ್ತು ಪತಿ (Husband) ಯ ಕುಟುಂಬ ಸದಸ್ಯರಿಂದ ದೈಹಿಕ ಹಿಂಸೆ ಮತ್ತು ಕಿರುಕುಳ ಎದುರಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿ : ಮಹಿಳೆಗೆ ಬಲವಂತವಾಗಿ Drinks ಕುಡಿಸಿ ಸಾಮೂಹಿಕ ಅತ್ಯಾಚಾರ ; 4 ಜನರ ಬಂಧನ.
ಮಹಿಳೆ ಆರೋಪಿಸಿದಂತೆ, ಆಕೆಯ ಪತಿ (Husband) ಜೂಜಾಟದ ಸಮಯದಲ್ಲಿ ತನ್ನನ್ನು ಜೂಜುಕೋರರಿಗೆ ಪಣಕ್ಕಿಟ್ಟಿದ್ದನು. ಜೂಜಾಟದಲ್ಲಿ ಸೋತ ನಂತರ ತನ್ನ ಮೇಲೆ ಜೂಜುಕೋರರು ತಿಂಗಳುಗಟ್ಟಲೆ ಅತ್ಯಾಚಾರ, ಹಲ್ಲೆ, ಚಿತ್ರಹಿಂಸೆ ಮತ್ತು ಬಲವಂತದ ಗರ್ಭಪಾತಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ.
ಪತಿ (Husband) ಜೂಜಾಟದಲ್ಲಿ ಸೋತ ನಂತರ ಉಮೇಶ್ , ಮೋನು, ಅನ್ಶುಲ್, ಪತಿಯ ಅಣ್ಣ ಶಾಹಿದ್, ಅತ್ತಿಗೆಯ ಪತಿ ಶೌಕೀನ್ ಮತ್ತು ಮಾವ ಯಾಮಿನ್ ಸೇರಿ 8 ಮಂದಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.
ಸಂತ್ರಸ್ತೆ ತಾವು ಗರ್ಭಿಣಿಯಾಗಿದ್ದಾಗ ಬಲವಂತದ ಗರ್ಭಪಾತಕ್ಕೆ ಒಳಗಾಗಿದ್ದು, ಬಳಿಕ ಕಾಲಿಗೆ ಆ್ಯಸಿಡ್ ಸುರಿಯಲು ಪ್ರಯತ್ನ ಮಾಡಿರುವ ಬಗ್ಗೆ ಆಕೆಯ ಹೇಳಿಕೆಯಲ್ಲಿ ಪ್ರಸ್ತುತವಾಗಿದೆ. ಈ ವೇಳೆ ಯಾರೋ ತಕ್ಷಣ ನೆರವಿಗೆ ಬಂದ ಹಿನ್ನಲೆಯಲ್ಲಿ ತಾನು ಬಚಾವಾಗಿದ್ದಾಗಿ ಅವರು ತಿಳಿಸಿದ್ದಾರೆ.
ಇದನ್ನು ಓದಿ : ಆಸ್ಪತ್ರೆಯಲ್ಲಿ ಕಂಬಳಿ ಹೊದ್ದು Couple ‘ಅಸಭ್ಯ ಕೃತ್ಯ’ ; ವಿಡಿಯೋ ವೈರಲ್ – ವಿವಾದ ಸೃಷ್ಟಿ.
ಮಹಿಳೆ ಈಗ ಬಾಗ್‌ಪತ್ ಎಸ್‌ಪಿ ಕಚೇರಿಗೆ ದೂರು ನೀಡಿದ್ದಾರೆ ಮತ್ತು ಪ್ರಕರಣದ ಸಂಬಂಧ FIR ದಾಖಲಾಗಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು, ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಿ, ತಪ್ಪಿಗಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಮಹಿಳೆಗೆ ಬಲವಂತವಾಗಿ Drinks ಕುಡಿಸಿ ಸಾಮೂಹಿಕ ಅತ್ಯಾಚಾರ ; 4 ಜನರ ಬಂಧನ.

ಜನಸ್ಪಂದನ ನ್ಯೂಸ್, ಯಲಬುರ್ಗಾ : ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ 36 ವರ್ಷದ ಮಹಿಳೆಯೊಂದರ ಮೇಲೆ ಗ್ರಾಮ ಒಂದರಲ್ಲಿ ಮತ್ತು ಬರಿಸುವ ಡ್ರಿಂಕ್ಸ್ (Drinks) ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿ ಯಲಬುರ್ಗಾ ಪೊಲೀಸರು ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಲಕ್ಷ್ಮಣ , ಬಸವರಾಜ, ಭೀಮಪ್ಪ ಮತ್ತು ಶಾಹಿಕುಮಾರ ಎಂದು ಪೊಲೀಸರು ತಿಳಿಸಿದ್ದರು.
ಮಹಿಳೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರು. ಬಾಕಿ ಹಣವಿದ್ದುದರಿಂದ ಪರಿಚಯಸ್ಥನಾದ ಲಕ್ಷ್ಮಣ ಸಂತ್ರಸ್ತೆಯನ್ನು ಕುಷ್ಟಗಿಗೆ ಕರೆಸಿಕೊಂಡು, ನಂತರ ಇತರ ಮೂವರು ಆರೋಪಿಗಳ ಜೊತೆ ಸೇರಿ ಬೈಕ್‌ನಲ್ಲಿ ಗ್ರಾಮ ಒಂದರ ಕಡೆಗೆ ಕರೆದೊಯ್ದರು.
ಇದನ್ನು ಓದಿ : ಪೋಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿಗಳ ಕಾಲಿಗೆ Shot.
ಅಲ್ಲಿ ಅವರು ಮತ್ತು ಬರಿಸುವ ಜ್ಯೂಸ್ (Drinks) ಮತ್ತು ಇತರ ಪಾನೀಯ (Drinks) ಗಳನ್ನು ಬಲವಂತವಾಗಿ ಕುಡಿಸಿದರು. ನಂತರ ಪಾಳುಬಿದ್ದ ಮನೆಯೊಂದರಲ್ಲಿ ಮಹಿಳೆಗೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
ಸಂತ್ರಸ್ತೆಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸಂಬಂಧಿತ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದ್ದು, ಹೆಚ್ಚಿನ ಆರೋಪಿಗಳನ್ನು ಹಿಡಿಯಲು ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ತಿರುವಿನಲ್ಲಿ ಬಾಲಕನ ಮೇಲೆ ಹರಿದ Lorry ; ಮನಕಲಕುವ ವಿಡಿಯೋ ವೈರಲ್.!
ಸುರಕ್ಷತಾ ಸೂಚನೆ : ಅಧಿಕಾರಿಗಳು ನಾಗರಿಕರಿಗೆ ಯಾವುದೇ ಅನಿರೀಕ್ಷಿತ ಸ್ಥಳಗಳಲ್ಲಿ ಶಾರೀರಿಕ ಅಥವಾ ಪಾನೀಯ ಸಂಬಂಧಿತ ಅಪಾಯಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







