Sunday, September 8, 2024
spot_img
spot_img
spot_img
spot_img
spot_img
spot_img
spot_img

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕವಲ್ಲ, ಚರಂಡಿಯಲ್ಲಿ ಬಿದ್ದು ಬಾಕ್ಸಿಂಗ್ ಮಾಡುವ ತನಕ ; Video viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ (Proverb). ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ಜಗಳ ಬೀದಿಗೆ ಬರುವುದೇ ಹೆಚ್ಚು.

ಅದರಂತೆ ಬೀದಿಯಲ್ಲಿಯೇ ಗಂಡ ಹೆಂಡತಿ ಇಬ್ಬರು ಜಗಳ ಮಾಡಿಕೊಂಡಿದ್ದು, ಜಗಳವಾಡುತ್ತಾ ಚರಂಡಿಗೆ (gutter) ಬಿದ್ದಿದ್ದು, ಅಲ್ಲಿಯೂ ಇಬ್ಬರೂ ಒಬ್ಬರಿಗೊಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದೆ.

ಘಟನೆಯ ಕುರಿತು ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಶಾಕ್ (shock) ಆಗಿದ್ದಾರೆ.

ಇದನ್ನು ಓದಿ : Video : ನೋಡುಗರಿಗೆ ನಡುಕ ಹುಟ್ಟಿಸಿದ ಆರ್. ಮಾಧವನ್ ‘ಶೈತಾನ್’ ಟ್ರೇಲರ್.!

ವಿಡಿಯೋದಲ್ಲಿರುವ ದೃಶ್ಯ :
ಇವರಿಬ್ಬರು ಬೈಕ್‌ನಲ್ಲಿ ತೆರಳುವಾಗ ಬೈಕ್ ಹಾಳಾಗಿದ್ದು, ಬಹುಶಃ ಈ ವಿಷಯಕ್ಕೆ ಗಂಡ-ಹೆಂಡತಿ ಇಬ್ಬರು ರಸ್ತೆಯಲ್ಲಿಯೇ ಜಗಳ ಶುರು ಮಾಡಿರಬಹುದು.

ಈ ವಿಡಿಯೋದ ಪ್ರಾರಂಭದಲ್ಲಿ ಗಂಡ ಬೈಕ್‌ ಅನ್ನು ತಳ್ಳಿಕೊಂಡು ಹೋಗುತ್ತಿದ್ದಾನೆ. ಹೀಗಿರುವಾಗ ಹೆಂಡತಿಯು ಗಂಡದ ಬೆನ್ನಿಗೆ ಜೋರಾಗಿ ಗುದ್ದುತ್ತಾಳೆ (punch). ಅಲ್ಲಿಂದ ಜಗಳವು ಶುರುವಾಗಿದ್ದು, ಇಬ್ಬರೂ ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ಜೋರಾಗಿ ಹೊಡೆದಾಡುತ್ತಲೇ ಇಬ್ಬರೂ ಚರಂಡಿಗೆ ಬಿದ್ದಿದ್ದಾರೆ. ಅಲ್ಲಿಯೂ ಸಹ ಜಗಳ ಮಾಡಿದ್ದಾರೆ.

ಅಹ್ರಂತ್ ಶೆಲ್ಬೈ ಎನ್ನುವವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಮೊದಲು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಆ ಬಳಿಕ ಒಬ್ಬರಾದ ಮೇಲೆ ಒಬ್ಬರಂತೆ ಶೇರ್ (share) ಮಾಡಿಕೊಂಡಿದ್ದಾರೆ. ಇನ್ನೂ ವಿಡಿಯೋ ಹಲವು ಕಮೆಂಟ್ಸ್ ಗಳನ್ನು ಪಡೆದಿದೆ.

ಇದನ್ನು ಓದಿ : ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ ; Video viral.!

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬುದೆಲ್ಲ ಸುಳ್ಳು ಇಲ್ಲಿ ನೋಡಿ ಗಂಡ ಹೆಂಡತಿ ಜಗಳ ಚರಂಡಿಗೆ ಬೀಳುವ ತನಕ ಎಂದು ಒಬ್ಬರು ಕಮೆಂಟ್ (comments) ಮಾಡಿದರೆ, ಇಂತಹ ಆದರ್ಶ ದಂಪತಿ ಎಲ್ಲಿಯೂ ಸಿಗುವುದಿಲ್ಲ ಕೆಲವರು ಕಮೆಂಟ್ ಮಾಡಿದ್ದಾರೆ.ಆ ಗಂಡನ ಪರಿಸ್ಥಿತಿ ಯಾರಿಗೂ ಬಾರದಿರಲಿ ಎಂದಿದ್ದಾರೆ ಕೆಲವರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img