Friday, October 18, 2024
spot_img
spot_img
spot_img
spot_img
spot_img
spot_img
spot_img

Spa ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ : 6 ಜನ ಮಹಿಳೆಯರ ರಕ್ಷಣೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ಸ್ಪಾ (Space) ಹೆಸರಿನಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ಆರು ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆ ನಡೆದಿದೆ.

ಬಂಧಿತರು ಸ್ಪಾ ಮ್ಯಾನೇಜರ್ ನವೀನ್ (26) ಮತ್ತು ಸಹಾಯಕ ಭರತ್ ಸಿಂಗ್ (27) ಎಂದು ತಿಳಿದು ಬಂದಿದೆ. ಸ್ಪಾ ಮಾಲೀಕ ಭೀಮಾ ನಾಯಕ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ (arrest) ಶೋಧ ನಡೆಸಲಾಗಿದೆ.

ಇದನ್ನು ಓದಿ : Disease : ಒಂದೇ ಶಾಲೆಯಲ್ಲಿ 150 ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡ ಕಾಯಿಲೆ ; ಪೋಷಕರಲ್ಲಿ ಆತಂಕ.!

ಇನ್ನೂ ದಾಳಿ ವೇಳೆ ದೆಹಲಿ, ಪಶ್ಚಿಮ ಬಂಗಾಳ, ಅಸ್ಸಾಂ (Assam), ಥೈಲ್ಯಾಂಡ್ ಮೂಲದ ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಹೊರರಾಜ್ಯದ ಹುಡುಗಿರನ್ನು ಸ್ಪಾದಲ್ಲಿ ಇರಿಸಿಕೊಂಡು ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದು, ಈ ಹಿನ್ನೆಲೆ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಸ್ಪಾ ಮೇಲೆ ದಾಳಿ ಮಾಡಿದ್ದಾರೆ.

ಸ್ಪಾ ಮಾಲೀಕ ಭೀಮಾನಾಯಕ್, ನವೀನ್, ಭರತ್ ಸಿಂಗ್ ಹೊರರಾಜ್ಯದ ಅಮಾಯಕ ಮಹಿಳೆಯರಿಗೆ ಕೆಲಸದ (job) ಆಸೆ ತೋರಿಸಿ ಸ್ಪಾಗೆ ಕರೆದುಕೊಂಡು ಬರುತ್ತಿದ್ದರು. ಬಳಿಕ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿ ಅಕ್ರಮವಾಗಿ (illegal) ಹಣ ಸಂಪಾದಿಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಬಯಲಾಗಿದೆ.

ಇದನ್ನು ಓದಿ : Video : ಸರ್ಕಾರಿ ಆಸ್ಪತ್ರೆಯಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ; ವ್ಯಾಪಕ ಟೀಕೆ.!

ಮೂರು ಸಾವಿರ ರೂ. ನಗದು, ಎರಡು ವಾಕಿಟಾಕಿ, ಮೊಬೈಲ್, ಸ್ವಾಪಿಂಗ್ ಯಂತ್ರ, ಕಾಂಡೋಮ್ಸ್ ಸೇರಿ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img