Thursday, September 19, 2024
spot_img
spot_img
spot_img
spot_img
spot_img
spot_img
spot_img

Health : ಅನಾನಸ್ ಹಣ್ಣು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹಣ್ಣುಗಳಲ್ಲಿ ಅನಾನಸು ಹಣ್ಣು ವಿಶೇಷ ವಿನ್ಯಾಸವನ್ನು ಹೊಂದಿದೆ. ಅದು ನೋಡಲು ಮುಳ್ಳು ಮತ್ತು ಒರಟಿನಿಂದ ಕೂಡಿದ್ದರೂ ಅನಾನಸು (pineapple) ಹಣ್ಣು ಆರೋಗ್ಯ ಮತ್ತು ರುಚಿಕರವಾದ ಒಂದು ಹಣ್ಣಾಗಿದೆ. ಇದು ಉಷ್ಣವಲಯದ ಹಣ್ಣಾಗಿದೆ.

ಇನ್ನೂ ಈ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಮ್ಯಾಂಗನೀಸ್ (Manganese), ನಾರಿನಂಶ ಹಾಗೂ ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಹೊಂದಿರುವ ಈ ಹಣ್ಣನ್ನು ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡಲಾಗುವುದು.

ಒಂದು ಕಪ್ ಅನಾನಸ್ ಹಣ್ಣಿನಲ್ಲಿ 82.5 ಕ್ಯಾಲೋರಿ, 1.7 ಗ್ರಾಂ ಕೊಬ್ಬು, ಪ್ರೋಟೀನ್ (protein) 1 ಗ್ರಾಂ, ಕಾರ್ಬ್ 21.6 ಗ್ರಾಂ, ನಾರಿನಂಶ 2.3 ಗ್ರಾಂ, ವಿಟಮಿನ್ ಸಿ ಮತ್ತು ಎ, ಮ್ಯಾಂಗನೀಸ್, ವಿಟಿನ್ ಬಿ6, ತಾಮ್ರ, ಫೋಲೇಟ್, ಪೊಟ್ಯಾಸಿಯಮ್, ಕಬ್ಬಿಣ, ರಂಜಕ (phosphorus), ಸತು, ಕ್ಯಾಲ್ಸಿಯಮ್ ಸೇರಿದಂತೆ ಇನ್ನಿತರ ಪೋಷಕಾಂಶಗಳನ್ನು ಹೊಂದಿದೆ.

ಇದನ್ನು ಓದಿ : Health : ಬೆಂಡೆಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

ಹಾಗಾದ್ರೆ ಬನ್ನಿ ಅನಾನಸ್‌ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಅಂತ ತಿಳಿಯೋಣ.

* ಅನಾನಸ್‌ನಲ್ಲಿ ಬೀಟಾ ಕೆರೋಟಿನ್ ಇದ್ದು ಇದು ಅಸ್ತಮಾ (Asthma) ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯಕ.

* ಅನಾನಸ್ ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂನಿಂದ (Calcium) ಸಮೃದ್ಧವಾಗಿದ್ದು, ಇದು ನಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

* ದೇಹದಲ್ಲಿರುವ ಬೇಡದ ಕಶ್ಮಲಗಳನ್ನು (filth) ಹೊರಹಾಕುವುದರಿಂದ ದೇಹದ ಆರೋಗ್ಯ ಹೆಚ್ಚಿಸುವುದು. ಅಲ್ಲದೇ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.

* ಹಣ್ಣಿನಲ್ಲಿ ಇರುವ ಕಾಲಜನ್, ವಿಟಮಿನ್ ಸಿ ಹಾಗೂ ಪೋಷಕಾಂಶಗಳು ಚರ್ಮದ ವಿನ್ಯಾಸ ರಚನೆ ಹಾಗೂ ಆರೋಗ್ಯ ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ.

* ಅನಾನಸ್ ರಸವನ್ನು ತೆಂಗಿನೆಣ್ಣೆ (coconut oil) ಜತೆ ಮಿಶ್ರ ಮಾಡಿ ತುಟಿಗೆ ಹಚ್ಚುವುದರಿಂದ ತುಟಿ ಒಡೆಯುವ ಸಮಸ್ಯೆ ಇಲ್ಲವಾಗುವುದು.

* ಅನಾನಸ್ ಸೇವಿಸುವುದರಿಂದ ನಮ್ಮ ಹಲ್ಲು ಮತ್ತು ಒಸಡುಗಳು (teeth & gums) ಗಟ್ಟಿಯಾಗುತ್ತವೆ.

* ಅನಾನಸ್ ಅನ್ನು ಪಾದಗಳಿಗೆ ಹಚ್ಚುವುದರಿಂದ ಪಾದ ಉರಿ, ನೋವು ಮುಂತಾದ ಸಮಸ್ಯೆಯನ್ನು ಪರಿಹರಿಸಿ ಪಾದಗಳ ಆರೈಕೆ ಮಾಡುವುದು.

* ಅನಾನಸ್ ಹಣ್ಣಿನಲ್ಲಿ ಇರುವ ಆರೋಗ್ಯಕರ ಅಂಶಗಳು ಮತ್ತು ಕೆಲವು ಸಂಯುಕ್ತಗಳು (Compounds) ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

* ಕೆಲವರಿಗೆ ಪ್ರಯಾಣ ಮಾಡುವಾಗ ತಲೆ ಸುತ್ತುತ್ತದೆ, ಸ್ವಲ್ಪ ಪೈನಾಪಲ್ ತುಂಡುಗಳನ್ನು ತಿನ್ನುವ ಮೂಲಕ ಪ್ರಯಾಣದಲ್ಲಿ ಕಾಡುವ ವಾಂತಿ ಸಮಸ್ಯೆ ತಡೆಗಟ್ಟಬಹುದು.

ಇದನ್ನು ಓದಿ : Health : ಸೋಂಪು ಕಾಳಿನ ಆರೋಗ್ಯ ಪ್ರಯೋಜನಗಳು.!

* ಅನಾನಸ್ ಹಣ್ಣಿನಲ್ಲಿ ಬ್ರೊಮಲೇನ್ ಕಿಣ್ವಗಳನ್ನು (Enzymes) ಒಳಗೊಂಡಿರುತ್ತದೆ. ಇದು ಸಣ್ಣ ಕರುಳಿನ ಕೆಲಸವನ್ನು ಸುಲಭವಾಗುವಂತೆ ಮಾಡುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img