Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಹಳಷ್ಟು ಮಂದಿ ಟೀ-ಕಾಫಿ (tea-coffee) ಸೇವಿಸಲು ಇಷ್ಟಪಡುತ್ತಾರೆ. ಭಾರತದಲ್ಲಿ ಪ್ರತಿದಿನ ಬೆಳಗ್ಗೆ ಕಾಫಿ ಸೇವನೆಯ ಮೂಲಕವೇ ದಿನವನ್ನು ಪ್ರಾರಂಭಿಸುತ್ತಾರೆ. ತಲೆನೋವು, ಟೆನ್ಶನ್‌ನಿಂದ ಪರಿಹಾರ ಪಡೆಯಲು ಕಾಫಿ ಪ್ರಯೋಜನಕಾರಿ.

ಆದರೆ ಹಾಲು ಮತ್ತು ಸಕ್ಕರೆಯೊಂದಿಗೆ ತಯಾರಿಸಿದ ಕಾಫಿ ಆರೋಗ್ಯಕ್ಕೆ (health) ಹಾನಿಯನ್ನುಂಟು ಮಾಡುತ್ತದೆ. ಇದರ ಬದಲು ನೀವು ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.

ಇದನ್ನು ಓದಿ : Health : ಬಾಳೆಹಣ್ಣು ಮಾತ್ರವಲ್ಲ, ಕಾಯಿಯಿಂದ ಎಷ್ಟೊಂದು ಆರೋಗ್ಯ ಲಾಭಗಳಿವೆ ಗೊತ್ತಾ?

ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಆಗುವ ಲಾಭಗಳೇನು ಅಂತ ತಿಳಿಯೋಣ ಬನ್ನಿ.

ನಿಯಮಿತವಾಗಿ ಬ್ಲಾಕ್ ಕಾಫಿ ಸೇವನೆಯು ಪಾರ್ಕಿನ್ಸನ್ ಕಾಯಿಲೆ, ಆಲ್ಝೈಮರ್ ಕಾಯಿಲೆ ಮತ್ತು ಕ್ಯಾನ್ಸರ್ (cancer) ಸೇರಿದಂತೆ ಕೆಲವು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಬ್ಲಾಕ್ ಕಾಫಿಯು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ದೇಹದಲ್ಲಿನ ಹಾನಿಕಾರಕ ಸ್ವತಂತ್ರ ರಾಡಿಕಲ್​ಗಳನ್ನು ನಿಯಂತ್ರಿಸಲು (control) ಸಹಾಯ ಮಾಡುತ್ತದೆ.

ಇದು ದೇಹದಲ್ಲಿ ನೀರಿನ ತೂಕವನ್ನು ಕಡಿಮೆ ಮಾಡುವುದು. ಆದರೆ ವೈಜ್ಞಾನಿಕವಾಗಿ (Scientifically) ದೇಹದ ನೀರಿನಾಂಶವನ್ನು ಇದು ತೆಗೆಯುತ್ತದೆ ಎಂಬುದರ ಬಗ್ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲವೆಂದು ಅಧ್ಯಯನಗಳು ಹೇಳಿವೆ.

ಬ್ಲಾಕ್ ಕಾಫಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಕೆಫೀನ್ ನರಮಂಡಲವನ್ನು ಉತ್ತೇಜಿಸುವ ಮೂಲಕ ಚಯಾಪಚಯ (Metabolism) ದರವನ್ನು ಹೆಚ್ಚಿಸುತ್ತದೆ. ಇದು ತೂಕ ಕಡಿಮೆಯಾಗಲು ಸಹಕಾರಿಯಾಗಿದೆ.

ಬ್ಲಾಕ್ ಕಾಫಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ.

ಬ್ಲಾಕ್ ಕಾಫಿಯಲ್ಲಿ ಕಂಡುಬರುವ ನೈಸರ್ಗಿಕ ಉತ್ತೇಜಕವಾದ ಕೆಫೀನ್, ಮನಸ್ಥಿತಿಯನ್ನು ಸುಧಾರಿಸಲು ಮತ್ತು ಜಾಗರೂಕತೆಯನ್ನು (Vigilance) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಅಡೆನೊಸಿನ್ ಅನ್ನು ನಿರ್ಬಂಧಿಸುತ್ತದೆ.

ಇದನ್ನು ಓದಿ : Warning : ಪದೇ ಪದೇ ಮೂತ್ರ ವಿಸರ್ಜನೆ ಈ ರೋಗಗಳ ಲಕ್ಷಣವಾಗಿರಬಹುದು.!

ಬ್ಲಾಕ್ ಕಾಫಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img