Sunday, September 8, 2024
spot_img
spot_img
spot_img
spot_img
spot_img
spot_img
spot_img

ಠಾಣೆಯ ಆವರಣದಲ್ಲಿಯೇ ಹೆಡ್ ಕಾನ್ಸ್‌ಟೇಬಲ್ ಲೋಕಾಯುಕ್ತ ಬಲೆಗೆ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆ ತಾಲೂಕಿನ ಮಾಯಕೊಂಡ (Mayakond) ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಾಯಕೊಂಡ ಪೊಲೀಸ್ ಠಾಣೆ ಮುಖ್ಯಪೇದೆ ಹೊನ್ನೂರ ಸ್ವಾಮಿ ಲೋಕಾಯುಕ್ತ ಅಧಿಕಾರಿಗಳ (lokayukta officer’s) ಕೈಗೆ ಸಿಕ್ಕಿಬಿದ್ದಿದ್ದಾರೆ.

ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪ ಎಂಬುವರ ಅಪಘಾತಕ್ಕೀಡಾಗಿದ್ದ (accident) ಬೈಕ್ ಬಿಟ್ಟುಕೊಡಲು ಹೆಡ್ ಕಾನ್ಸಟೇಬಲ್ (head constable) ಹೊನ್ನೂರು ಸ್ವಾಮಿ 6,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಪೈಕಿ 1,000 ರೂ. ಹಣವನ್ನು ಮುಂಗಡವಾಗಿ ಪಡೆದುಕೊಂಡು, ಇನ್ನುಳಿದ 5,000 ರೂ. ಲಂಚದ (bribe) ಹಣವನ್ನು ಕೊಡುವಂತೆ ಹೊನ್ನೂರುಸ್ವಾಮಿ ತಿಳಿಸಿದ್ದರು.

ಮಾಯಕೊಂಡ ಪೊಲೀಸ್ ಠಾಣೆಯ ಹೊರಗೆ ಚಂದ್ರಪ್ಪ ಬಳಿ 5,000 ರೂ. ಲಂಚದ ಹಣ ಪಡೆಯುವಾಗ ಹೊನ್ನೂರುಸ್ವಾಮಿ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ. ಸಧ್ಯ ಆರೋಪಿ ಹೊನ್ನೂರುಸ್ವಾಮಿಯನ್ನು ದಸ್ತಗಿರಿ ಮಾಡಲಾಗಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬ.ಸೂರಿನ, ಸಿ.ಮಧುಸೂದನ್, ಹೆಚ್.ಎಸ್.ರಾಷ್ಟ್ರಪತಿ ನೇತೃತ್ವದ ಸಿಬ್ಬಂದಿ ತಂಡ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img