Tuesday, September 17, 2024
spot_img
spot_img
spot_img
spot_img
spot_img
spot_img
spot_img

ದ್ವಿತೀಯ PUC ಪಾಸಾಗಿದ್ದೀರಾ.? ಗ್ರಾ. ಪಂ.ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ (ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಸೇವಾ) ನಿಯಮಗಳು, 2022 ರ ನಿಯಮಗಳನ್ವಯ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಎಲ್ಲಾ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ  ಈ ಲೇಖನದಲ್ಲಿ ಪಡೆಯಬಹುದಾಗಿದೆ.

ಇದನ್ನು ಓದಿ : ಇನ್ಮುಂದೆ ಕಣ್ಣಿಗೆ ಕನ್ನಡಕ ಬೇಕಿಲ್ಲ, ಈ Eye drops ಸಾಕು.!

ನೇಮಕಾತಿ ಪ್ರಾಧಿಕಾರ : ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ.
ಹುದ್ದೆ ಹೆಸರು :
ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರು.
ಹುದ್ದೆಗಳ ಸಂಖ್ಯೆ :
21.

ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ – 9, ಎಸ್‌ಸಿ – 3, ಎಸ್‌ಟಿ – 2, ಪ್ರವರ್ಗ 3B – 1, ಪ್ರವರ್ಗ 2A – 1, ಪ್ರವರ್ಗ 2B – 1, ಪ್ರವರ್ಗ 2A – 1 ಹುದ್ದೆ ಮೀಸಲಾತಿ ಪ್ರಕಾರ ಹಂಚಿಕೆಯಾಗಿದೆ.

ವಿದ್ಯಾರ್ಹತೆ :

  1. ದ್ವಿತೀಯ ಪಿಯುಸಿ ಪಾಸಾಗಿರಬೇಕು.
  2. ಗ್ರಂಥಾಲಯ ವಿಜ್ಞಾನ ಕೋರ್ಸ್‌ ಪ್ರಮಾಣಪತ್ರ ಪಡೆದಿದ್ದು, ಹಾಗೂ ಕನಿಷ್ಟ 3 ತಿಂಗಳ ಕಂಪ್ಯೂಟರ್ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.
  3. ಈ ವಿದ್ಯಾರ್ಹತೆ ಹೊರತು ಹೆಚ್ಚಿನ ವಿದ್ಯಾರ್ಹತೆ ಇದ್ದರೂ ಪರಿಗಣಿಸಲಾಗುವುದಿಲ್ಲ.

ಇದನ್ನು ಓದಿ : Health : ಈ ಎಲೆಯಲ್ಲಿದೆ ಅಮೃತದ ಗುಣ; ಎಲ್ಲೆ ಕಂಡರೂ ಬಿಡಬೇಡಿ.!

* ಕನಿಷ್ಠ ವಯೋಮಿತಿ : 18 ವರ್ಷ.
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ಗರಿಷ್ಠ : 35 ವರ್ಷ.
* ಪ್ರವರ್ಗ 2A, 2B, 3A, 3B ಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ : 38 ವರ್ಷ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ : 40 ವರ್ಷ.
(ಮೀಸಲಾತಿ ಕೋರುವವರು, ಅಗತ್ಯ ದಾಖಲೆ ಮಾಹಿತಿಗಳನ್ನು ಆನ್‌ಲೈನ್‌ ಅರ್ಜಿ ಸಲ್ಲಿಕೆ ವೇಳೆ ಕಡ್ಡಾಯವಾಗಿ ತಪ್ಪದೇ ನೀಡಬೇಕು.)

ಆಯ್ಕೆ ವಿಧಾನ :

ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಗರಿಷ್ಠ ಅಂಕಗಳು/ಮೆರಿಟ್‌ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ :
* ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು : ರೂ.500.
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : ರೂ.300.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳು : ರೂ.200.
* ವಿಶೇಷ ಚೇತನ ಅಭ್ಯರ್ಥಿಗಳು : ರೂ.100.

(ಅರ್ಜಿ ಶುಲ್ಕವನ್ನು ಜಿಲ್ಲಾ ಪಂಚಾಯತ್ ಗ್ರಂಥಾಲಯ ಖಾತೆ, ಚಿಕ್ಕಬಳ್ಳಾಪುರ, ಬಿಬಿ ರಸ್ತೆ ಶಾಖೆ, ಕೆನರಾ ಬ್ಯಾಂಕ್‌ ಖಾತೆ ಸಂಖ್ಯೆ – 110165352339, IFSC CODE CNRB0000487 ಗೆ ಪಾವತಿಸಿ, ಚಲನ್‌ ಪ್ರತಿಯನ್ನು ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಅಪ್‌ಲೋಡ್‌ ಮಾಡುವುದು.)

ಇದನ್ನು ಓದಿ : ಕರ್ತವ್ಯದಲ್ಲಿದ್ದ ಮಹಿಳಾ ಡಿಎಸ್ಪಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ; ವಿಡಿಯೋ Viral.!

ಪ್ರಮುಖ ದಿನಾಂಕಗಳು :

ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : ಸಪ್ಟಂಬರ್‌ 02,2024.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಸಪ್ಟಂಬರ್‌ 21, 2024.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ : https://chikkaballapur.nic.in/

ಸೂಚನೆಗಳು :
* ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು.
* ಶಾರ್ಟ್‌ ಲಿಸ್ಟ್‌ ಆದವರನ್ನು ಮೆರಿಟ್‌ ಆಧಾರದಲ್ಲಿ ಸಂದರ್ಶನ ನಡೆಸಿ ಸ್ಥಳ ನಿಯೋಜನೆ ಮಾಡಲಾಗುತ್ತದೆ.
* ಅರ್ಜಿ ಸಲ್ಲಿಸುವಾಗ ಸರಿಯಾದ ಮೊಬೈಲ್ ನಂಬರ್, ಇ-ಮೇಲ್‌ ವಿಳಾಸ, ಪೂರ್ಣ ವಿಳಾಸ ನೀಡಬೇಕು.
* ಮೀಸಲಾತಿ ನಿಯಮ ಅನ್ವಯವಾಗಲಿದ್ದು, ವಿವಿಧ ನಿಯಮಗಳಡಿ ಮೀಸಲಾತಿ ಕೋರುವವರು ಸಂಬಂಧಿತ ಪ್ರಮಾಣ ಪತ್ರ ಸಲ್ಲಿಸುವುದು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img