ಜನಸ್ಪಂದನ ನ್ಯೂಸ್, ಡೆಸ್ಕ್ : ಸುಪ್ರೀಂ ಕೋರ್ಟ್, ರಾಜಸ್ಥಾನದಲ್ಲಿ (Rajasthan) ಸರ್ಕಾರಿ ಕೆಲಸಗಳಿಗೆ (government jobs) ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ to (disqualify) ನಿಯಮವನ್ನು ಸಮರ್ಥಿಸಿದೆ.
ಸರ್ಕಾರಿ ಉದ್ಯೋಗದ ನಿರೀಕ್ಷೆ ಮಾಡುವ ಇದು ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಕುಟುಂಬ ಯೋಜನೆ ನೀತಿಯನ್ನು (Family Planning Policy) ಉತ್ತೇಜಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನು ಓದಿ : Health : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!
ನ್ಯಾಯಮೂರ್ತಿ (justice) ದೀಪಂಕರ್ ದತ್, ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ಪೀಠವು ಈ ತೀರ್ಪು (judgment) ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ರಾಜಸ್ಥಾನ ಸರ್ಕಾರ ಜಾರಿಗೆ ತಂದಿರುವ ಈ ನಿಯಮವನ್ನು ತಾರತಮ್ಯ ಎಂದು ಪರಿಗಣಿಸಿಲ್ಲ. ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ (If there are more than two children) ಸರ್ಕಾರಿ ನೌಕರಿ ನೀಡದಿರುವುದು ಅನ್ಯಾಯ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನು ಓದಿ : ಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!
2018 ರಲ್ಲಿ ಮಾಜಿ ಸೈನಿಕ (Ex- soldier) ರಾಮ್‌ಜಿ ಲಾಲ್ ಜಾಟ್ ಅವರು ರಾಜಸ್ಥಾನ ಪೊಲೀಸ್‌ನಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ (Constable Post) ಅರ್ಜಿ ಸಲ್ಲಿಸಿದ್ದರು. ಆದರೆ ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮಗಳು, 1989 ರ ನಿಯಮ 24 (4) ರ ಅಡಿಯಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು.
ಏಕೆಂದರೆ ಅವರಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರು. ರಾಜಸ್ಥಾನ ಹೈಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ ರಾಮ್‌ಜಿ ಲಾಲ್ ಜಾಟ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸದ್ಯ ಅದು ತಿರಸ್ಕೃತಗೊಂಡಿದೆ.
ಹಿಂದಿನ ಸುದ್ದಿ : ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?
ಜನಸ್ಪಂದನ ನ್ಯೂಸ್, ಆರೋಗ್ಯ : ಚಳಿಗಾಲ (winter) ಶುರುವಾದ ಕೂಡಲೇ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿಯೂ ಚಳಿಗಾಲದಲ್ಲಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಂತಹ (heart attack and brain stroke) ಕಾರಣಗಳಿಂದ ಸಾಯುವವರ ಸಂಖ್ಯೆಯೂ ಹೆಚ್ಚು ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಇದನ್ನು ಓದಿ : ಚಳಿಗಾಲದಲ್ಲಿ Brain ಸ್ಟ್ರೋಕ್ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?
ಹೃದ್ರೋಗ ಮತ್ತು ತಾಪಮಾನದ (Heart disease and temperature) ನಡುವಿನ ಸಂಬಂಧವನ್ನು ಸ್ವೀಡನ್ನ ಲುಂಡ್ ವಿಶ್ವವಿದ್ಯಾನಿಲಯದ (Lund University, Sweden) ಸಂಶೋಧನೆಯು ಮತ್ತೊಮ್ಮೆ ಸಾಬೀತುಪಡಿಸಿದೆ. ಅದರಲ್ಲಿಯೂ ಚಳಿಗಾಲದಲ್ಲಿ ತಾಪಮಾನವು ಶೂನ್ಯ ಡಿಗ್ರಿಗಿಂತ ಕಮ್ಮಿಯಾದಾಗ (Below zero degrees) ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತದೆ ಎಂಬುದನ್ನು ಸಂಶೋಧಕರು (Researchers) ಕಂಡು ಹಿಡಿದಿದ್ದಾರೆ.
ಈ ಸೀಸನ್ ನಲ್ಲಿ ರಕ್ತನಾಳಗಳು ಕಿರಿದಾಗುವುದರಿಂದ (Blood vessels narrow( ರಕ್ತದೊತ್ತಡವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಚಳಿಗಾಲದಲ್ಲಿ, ಬೆಳಿಗ್ಗೆ ತಾಪಮಾನ ಕುಸಿತದ ಹಿನ್ನೆಲೆ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾದಾಗ, ಹೃದಯಾಘಾತದ ಅಪಾಯವು ಒಂದೇ ದಿನದಲ್ಲಿ 5 ಬಾರಿ ಹೆಚ್ಚಾಗುತ್ತದೆ (The risk of heart attack increases 5 times in a single day) ಎಂದು ಸಂಶೋಧನೆಯಿಂದ ಕಂಡುಬಂದಿದೆ.
ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!
ಬಲವಾದ ಶೀತ ಗಾಳಿ, ಆರ್ದ್ರತೆ ಹೆಚ್ಚಳ ಹಾಗೂ ಸೂರ್ಯನ ಬೆಳಕಿನ ಕೊರತೆಯಿಂದ (Strong cold winds, increased humidity and lack of sunlight) ದೇಹದಲ್ಲಿ ತಾಪಮಾನವನ್ನು ಹೆಚ್ಚಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದು ನೇರವಾಗಿ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರಬಹುದು.
ರಕ್ತನಾಳಗಳು ಶೀತಕ್ಕೆ ಪ್ರತಿಕ್ರಿಯಿಸಿದಂತೆ ತೀವ್ರ ನಡುಕ ಮತ್ತು ಅಪಧಮನಿಗಳಲ್ಲಿ ರಕ್ತದೊತ್ತಡ ಹೆಚ್ಚಾಗುವುದರಿಂದ ಹೃದಯಾಘಾತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರಿಂದ ಹೃದಯ ಸಮಸ್ಯೆ ಇರುವವರು ಈ ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣದಲ್ಲಿ ಇರುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು (Health experts) ಅಭಿಪ್ರಾಯ ಪಡುತ್ತಾರೆ.
ಇದನ್ನು ಓದಿ : Health : ಕಾಲು ಸೆಳೆತದಿಂದ ಬಳಲುತ್ತಿದ್ದೀರಾ.? ಈ ರೀತಿ ಮಾಡಿ ನಿಮಿಷಗಳಲ್ಲಿ ಮಾಯವಾಗುತ್ತೆ ನೋವು.!
ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದಿಲ್ಲ ಬಹಳಷ್ಟು ಮಂದಿ. ಆದರೆ ಸಾಕಷ್ಟು ನೀರು ಸೇವಿಸಿದರೆ ನಿಮ್ಮ ಹೃದಯವು ಆರೋಗ್ಯವಾಗಿರುತ್ತದೆ. ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು (To expel impurities from the body) ಅವಶ್ಯಕವಾಗಿದ್ದು, ಹೃದಯವು ತನ್ನ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ನೀರು ಸಹಾಯ ಮಾಡುತ್ತದೆ.
ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ನಿಯಮಿತ ವ್ಯಾಯಾಮವು (Regular exercise) ಅವಶ್ಯಕವಾಗಿದೆ. ಅಲ್ಲದೇ, ನಿಮ್ಮ ಹೃದಯವು ಗಟ್ಟಿಮುಟ್ಟಾಗಿರುತ್ತದೆ.
ಇದನ್ನು ಓದಿ : Special news : ಮುಖಕ್ಕೆ ಬ್ಲಾಂಕೆಟ್ ಹೊದ್ದಿಕೊಂಡು ಮಲಗುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!
ಧೂಮಪಾನವನ್ನು (Quit smoking) ತ್ಯಜಿಸುವುದರಿಂದ ಹೃದಯ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.
ಈ ಚಳಿಗಾಲದಲ್ಲಿ ಜೀವಸತ್ವಗಳು, ಒಮೆಗಾ -3 ಉತ್ಕರ್ಷಣ ನಿರೋಧಕಗಳು (Antioxidants), ಖನಿಜಗಳು ಮತ್ತು ಕೊಬ್ಬಿನಾಮ್ಲ ಸಮೃದ್ಧವಾಗಿರುವ ಆಹಾರವನ್ನು (Food rich in minerals and fatty acids) ಸೇವಿಸುವುದು ಉತ್ತಮ.