ಜನಸ್ಪಂದನ ನ್ಯೂಸ್, ಡೆಸ್ಕ್ : UPSCಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಕೆಲ ಅಭ್ಯರ್ಥಿಗಳು ಛಲ ಬಿಡದೆ, ತಮ್ಮ ಕಠಿಣ ಪರಿಶ್ರಮದಿಂದ (hard work) ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗುವುದರ ಮೂಲಕ ತಮ್ಮ ಗುರಿಯನ್ನು ಸಾಧಿಸುತ್ತಾರೆ.
ಈ ರೀತಿ ಛಲ ಬಿಡದೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಡಾ. ನೇಹಾ ಅವರ ಯಶಸ್ಸಿನ ಕಥೆ (successful story) ಬಗ್ಗೆ ತಿಳಿಯೋಣ.
ಇದನ್ನು ಓದಿ : Health : ಈ ಹಣ್ಣಿನಲ್ಲಿದೆ ಮಧುಮೇಹ, ಕ್ಯಾನ್ಸರ್ ತಡೆಯುವ ಶಕ್ತಿ ; ಬೆಳಿಗ್ಗೆ ತಿಂದ್ರೆ ಆರೋಗ್ಯದಲ್ಲಿ ಚಮತ್ಕಾರ.!
ಡಾ. ನೇಹಾ ಅವರು ಮೂಲತಃ ದೆಹಲಿಯವರಾಗಿದ್ದು, ದಂತವೈದ್ಯರಾಗಿ (Dentist) ಯಶಸ್ವಿ ವೃತ್ತಿ ಜೀವನವನ್ನು ನಡೆಸುತ್ತಿದ್ದರು. ಇವರು ತಮ್ಮ ತವರೂರಿನ ಪ್ರತಿಷ್ಠಿತ ಸಂಸ್ಥೆಯಿಂದ ದಂತ ವೈದ್ಯಕೀಯ ಪದವಿಯನ್ನು (degree in dentistry from a reputed institution) ಪಡೆದಿದ್ದರು.
ಬಳಿಕ ಕನ್ಸಲ್ಟೆಂಟ್ ಡೆಂಟಿಸ್ಟ್ ಆಗಿ ಕೆಲಸ ಮಾಡಿದರು. ತನ್ನ ವೃತ್ತಿಪರ ಯಶಸ್ಸಿನ ಹೊರತಾಗಿಯೂ, ನೇಹಾ ಅವರಿಗೆ UPSC ಪರೀಕ್ಷೆ ಬರೆಯಬೇಕೆಂಬ ಕನಸು ಇತ್ತು.
ನೇಹಾ ಅವರು ತನ್ನ ಕೆಲಸದ ಜೊತೆಗೆ ಯುಪಿಎಸ್‌ಸಿಗಾಗಿ ತಯಾರಿ ನಡೆಸಿದರು. ಪ್ರತಿನಿತ್ಯ 4-5 ಗಂಟೆಗಳನ್ನು ಯುಪಿಎಸ್‌ಸಿ ಪರೀಕ್ಷೆಯ ಅಧ್ಯಯನಕ್ಕಾಗಿ ಮೀಸಲಿಡುತ್ತಿದ್ದರು. ಅಲ್ಲದೇ ವಾರಾಂತ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆಗಾಗಿ ಹೆಚ್ಚಿನ ಸಮಯ ಅಧ್ಯಯನದಲ್ಲಿ ತೊಡಗಿದರು.
ಇದನ್ನು ಓದಿ : BJP ಸಂಸದ ಪ್ರತಾಪ್ಗೆ ಗಾಯ ; ರಾಹುಲ್ ಗಾಂಧಿ ತಳ್ಳಿದ್ದು ಎಂದು ಆರೋಪ.!
ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಆಗಲು ನೇಹಾ ಅವರಿಗೆ ಸಾಧ್ಯವಾಗಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂಬ (Pass) ಗುರಿಯನ್ನು ಹೊಂದಿದ್ದ ಅವರು ಛಲ ಬಿಡದೆ, ಮತ್ತೆ ಪರೀಕ್ಷೆ ಬರೆದು ಪಾಸ್ ಆಗುವಲ್ಲಿ Success ಆಗುತ್ತಾರೆ. ಈ ಮೂಲಕ IAS ಅಧಿಕಾರಿಯಾಗುವಲ್ಲಿ ಅವರು ಯಶಸ್ವಿಯಾಗುತ್ತಾರೆ.
ಹಿಂದಿನ ಸುದ್ದಿ : ವೃದ್ಧರನ್ನು ಕಾಯುವಂತೆ ಮಾಡಿದ ಅಧಿಕಾರಿಗಳಿಗೆ ನಿಂತುಕೊಂಡು ಕೆಲಸ ಮಾಡುವ ಶಿಕ್ಷೆ; ಹೃದಯ ಗೆದ್ದ IAS ಅಧಿಕಾರಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುಗದಲ್ಲಿ ಸರ್ಕಾರಿ ಕಚೇರಿಗಳಲ್ಲಿ (government office) ಸರ್ವರ್ ಡೌನ್ ಅಂತೇಳಿ ಕಾಯಿಸುವುದನ್ನು ನೋಡಬಹುದು. ಇದೇ ರೀತಿ ವೃದ್ಧರನ್ನು (the elderly) ಕಾಯಿಸಿದ ತಪ್ಪಿಗೆ ಸಿಬ್ಬಂದಿಗೆ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಯನ್ನು ಕೊಟ್ಟ ಅಪರೂಪದ ಘಟನೆ ನಡೆದಿದೆ.
ಇದನ್ನು ಓದಿ : ನಗ್ನವಾಗಿ ರೈಲು ಹತ್ತಿದ ವ್ಯಕ್ತಿ : ಶಾಕ್ ಆದ ಮಹಿಳಾ ಪ್ರಯಾಣಿಕರು ; ವಿಡಿಯೋ ವೈರಲ್.!
ಕೌಂಟರ್ ಗಳಲ್ಲಿ ಬಹಳ ಹೊತ್ತಿನವರೆಗೆ ಜನರನ್ನು ಕಾಯಿಸುತ್ತಿದ್ದುದನ್ನು ಕಂಡು ಕೋಪಗೊಂಡ ವಸತಿ ಇಲಾಖೆಯ ಸಿಇಒ ಡಾ. ಲೋಕೇಶ್ ಎಂ (Housing Department CEO Dr. Lokesh M) 16 ಸಿಬ್ಬಂದಿಗಳಿಗೆ ನಿಂತು ಕೊಳ್ಳುವ ಶಿಕ್ಷೆ (punishment) ವಿಧಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
IAS ಅಧಿಕಾರಿ ಡಾ. ಲೋಕೇಶ್ ಎಂ ಅವರು ಕಳೆದ ವರ್ಷ ನೊಯ್ಡಾದಲ್ಲಿ (Noida) ಅಧಿಕಾರ ಸ್ವೀಕರಿಸಿದ್ದರು. ಅವರು ಆಗಾಗ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸುತ್ತಿದ್ದರು.
ಇದನ್ನು ಓದಿ : Triangle Love story : ಪ್ರಿಯಕರನಿಗಾಗಿ ನದಿ ಪಾಲಾದ ಗೃಹಿಣಿ ; ನೇಣಿಗೆ ಶರಣಾದ ಪ್ರಿಯಕರ.!
ಈ ವೇಳೆ ಕೌಂಟರ್ ಗಳ ಬಳಿ ಜನರು ಬಹಳ ಹೊತ್ತು ಕಾಯುತ್ತಿರುವುದನ್ನು (Waiting for a long time) ಗಮನಿಸಿದ್ದರು. ಮುಖ್ಯವಾಗಿ ಹಿರಿಯ ನಾಗರಿಕರು ಕಾಯುತ್ತ ನಿಂತಿರುವುದನ್ನು ಗಮನಿಸಿದ್ದರು.
ವಯಸ್ಸಾದ ವ್ಯಕ್ತಿಯನ್ನು ಹೆಚ್ಚು ಹೊತ್ತು ಕಾಯಿಸಬೇಡಿ ಎಂದು ಕೌಂಟರ್‌ನಲ್ಲಿದ್ದ ಮಹಿಳಾ ಅಧಿಕಾರಿಗೆ ತಿಳಿಸಿದ್ದಾರೆ. ಅವರ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ ಅದನ್ನು ಆ ವ್ಯಕ್ತಿಗೆ ಸ್ಪಷ್ಟವಾಗಿ ಹೇಳಿ ಎಂದು ಸೂಚನೆ ನೀಡಿದರು.
ಇದನ್ನು ಓದಿ : ವೃದ್ದರನ್ನು ಬಹಳ ಹೊತ್ತು ಕಾಯಿಸಿದ ಅಧಿಕಾರಿಗಳಿಗೆ ನಿಂತು ಕೆಲಸ ಮಾಡುವ ಶಿಕ್ಷೆ ನೀಡಿದ IAS ಆಫೀಸರ್.!
ಬಳಿಕವೂ ಆ ವೃದ್ಧ ಅದೇ ಕೌಂಟರ್ ಎದುರು ನಿಂತಿದ್ದನ್ನು ಗಮನಿಸಿದ ಅಧಿಕಾರಿ ಕೋಪಗೊಂಡು ಸ್ವತಃ ಕೌಂಟರ್ ಬಳಿಗೆ ಬಂದು ಸಿಬ್ಬಂದಿಗಳಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು.
ಅಷ್ಟೇ ಅಲ್ಲದೇ ಸಿಬ್ಬಂದಿಗಳಿಗೆ 20 ನಿಮಿಷಗಳ ಕಾಲ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದರು. ನಿಂತುಕೊಂಡೇ ಕೆಲಸ ಮಾಡಿ ಎಂದು ಶಿಕ್ಷೆ ನೀಡಿದ್ದು, ವಿಡಿಯೋ ವೈರಲ್ ಆಗಿದೆ. ಸಿಇಒ ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ