Sunday, December 8, 2024
HomeBelagavi NewsBelagavi : ಸಿಪಿಐ ವಿರುದ್ಧ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್.!
spot_img

Belagavi : ಸಿಪಿಐ ವಿರುದ್ಧ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ನಗರದ ಉದ್ಯಮಬಾಗ ಪೊಲೀಸ್ ಠಾಣೆಯ (Udhyamabag Police Station) ಸಿಪಿಐ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಯತ್ನಿಸಿದ್ದು (Attempted suicide), ಅವರನ್ನು ರಕ್ಷಣೆ ಮಾಡಲಾಗಿದೆ.

ಉದ್ಯಮಬಾಗ ಪೊಲೀಸ್ ಠಾಣೆಯ ಸಿಪಿಐ ಧರೇಗೌಡ ಪಾಟೀಲ ವಿರುದ್ಧ ಇಂತದ್ದೊಂದು ಆರೋಪ ಕೇಳಿ ಬಂದಿದೆ.

ಇದನ್ನು ಓದಿ : Health : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!

ಕಾನ್ಸ್‌ಟೇಬಲ್ ವಿಠ್ಠಲ ಮುನ್ನಾಳ ಎಂಬುವವರು ಐದು ಪುಟಗಳ ಪತ್ರ ಬರೆದು (Write a five page letter) ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಸಿಪಿಐ ಅವರು ರಜೆ (leave) ವಿಷಯದಲ್ಲಿ ತಾರತಮ್ಯ (Discrimination) ಮಾಡುತ್ತಾರೆ, ಠಾಣೆಯಲ್ಲಿ ವಿಪರೀತವಾಗಿ ಜಾತೀಯತೆ (casteism) ಮಾಡುತ್ತಾರೆ, ಹಫ್ತಾ ವಸೂಲಿ ಮಾಡಿ ಕೊಡುವ ಸಿಬ್ಬಂದಿಗೆ ರಾತ್ರಿ ಕರ್ತವ್ಯಕ್ಕೆ ಹಾಕಲ್ಲ, ಕರ್ತವ್ಯದಲ್ಲಿದ್ದರೂ ಗೈರು ಹಾಜರಾತಿ ಎಂದು ತೋರಿಸಿ ಪುಸ್ತಕದಲ್ಲಿ ಬರೆಯಲು ಹೇಳುತ್ತಾರೆ, ಅಲ್ಲದೇ ಮಹಿಳಾ ಸಿಬ್ಬಂದಿಯನ್ನು ನಿಂದಿಸುತ್ತಾರೆ (Abuses women staff), ತಾನು ಕಾರ್ಯಾಂಗದ ಅಧಿಕಾರಿಯೆಂಬುದನ್ನು ಮರೆತು ಸರ್ವಾಧಿಕಾರಿ (Dictator) ಎಂಬಂತೆ ವರ್ತಿಸುತ್ತಾರೆ ಎಂದು ಕಾನ್ಸ್‌ಟೇಬಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ (Mentioned).

ಇದನ್ನು ಓದಿ : ಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!

ಕರ್ತವ್ಯ ಸರದಿ ಪುಸ್ತಕ ಪ್ರತಿ, ವಿವಿಧ ಆದೇಶ ಪ್ರತಿಗಳ ಸಮೇತ 5 ಪುಟಗಳ ಪತ್ರವನ್ನು ಬರೆದಿರುವ ಕಾನ್ಸ್‌ಟೇಬಲ್ ಅವರು, ಡಿಜಿ ಐಜಿಪಿ, ಬೆಳಗಾವಿ ನಗರ ಪೊಲೀಸ್ ಆಯುಕ್ತರು (Belagavi City Police Commissioner), ಖಡೇ ಬಜಾರ್ ಎಸಿಪಿ, ಗೃಹ ಸಚಿವರ ಕಚೇರಿ, ಮಾನವ ಹಕ್ಕು ಆಯೋಗ (Human Rights Commission), ಪೊಲೀಸ್ ದೂರುಗಳ ಪ್ರಾಧಿಕಾರ ಘಟಕಕ್ಕೆ (Police Complaints Authority Unit) ಪತ್ರ ರವಾನೆ ಮಾಡಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments