Sunday, February 25, 2024
spot_img
spot_img
spot_img
spot_img
spot_img

ಹನುಮ ಧ್ವಜ ವಿವಾದ : ಗ್ರಾ.ಪಂ. ಪಿಡಿಓ ಅಮಾನತು.!

ಜನಸ್ಪಂದನ ನ್ಯೂಸ್, ಮಂಡ್ಯ : ಜಿಲ್ಲೆಯ ಕೆರಗೋಡು ಗ್ರಾಮದ ಹನುಮ ಧ್ವಜ ವಿವಾದ ಸಂಬಂಧಿಸಿದಂತೆ ಪಂಚಾಯ್ತಿ ಪಿಡಿಓ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಪ್ರತಿಭಟನೆ ವ್ಯಾಪಕವಾಗಿರುವಂತೆಯೇ ಇದೀಗ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕೆರಗೋಡು ಗ್ರಾಮ ಪಂಚಾಯಿತಿ ಪಿಡಿಓ ಜೀವನ್‌.ಬಿ.ಎಂ ಅವರನ್ನು ಅಮಾನತು ಮಾಡಿದೆ. ಐದು ಕಾರಣಗಳನ್ನು ನೀಡಿ ಪಿಡಿಓ‌ ಅವರನ್ನು ಅಮಾನತು ಮಾಡಿ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ ತನ್ವೀರ್ ಆಶೀಫ್ ಸೇಠ್ ಆದೇಶ ಹೊರಡಿಸಿದ್ದಾರೆ.

ಹನುಮ ಧ್ವಜ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಂತಾಗಿದ್ದು, ಮಂಡ್ಯ ಹನುಮ ಧ್ವಜ ವಿವಾದಕ್ಕೆ ಸಂಭದಿಸಿ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಂಟಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಅಲ್ಲದೆ ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿ ಕರ್ತವ್ಯ ಲೋಪ ಎಸಗಲಾಗಿದ್ದು, ಧ್ವಜ ಸ್ತಂಭದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಅನುಮತಿ ನೀಡಿ, ಷರತ್ತು ಉಲ್ಲಂಘಿಸಿದ್ರು ಕ್ರಮಕೈಗೊಳ್ಳದೆ ನಿರ್ಲಕ್ಷಿಸಲಾಗಿದೆ.

ರಾಷ್ಟ್ರ ಧ್ವಜದ ಬದಲು ಹನುಮ ಧ್ವಜ‌ ಹಾರಿಸಲು ಅವಕಾಶ ನೀಡಿರುವುದು ಮತ್ತು ಹನುಮ‌ ಧ್ವಜ‌ಹಾರಿಸಿದ್ದರು ಯಾವುದೇ ಕ್ರಮ ಕೈಗೊಳ್ಳದೇ ಕರ್ತವ್ಯ ಲೋಪ ಎಸಗಲಾಗಿದೆ ಎಂದು ಆರೋಪಿಸಿ ಅಮಾನತು ಮಾಡಲಾಗಿದೆ.

spot_img
- Advertisment -spot_img