Friday, October 4, 2024
spot_img
spot_img
spot_img
spot_img
spot_img
spot_img
spot_img

ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಯಾಣಿಕ : ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಲೇಡಿ ಕಂಡಕ್ಟರ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ವಿಜಯಪುರ : ವಿಜಯಪುರ ಜಿಲ್ಲೆಯ ಕೊಲ್ಹಾರ (Kolhar) ಪಟ್ಟಣಕ್ಕೆ ಬರುತ್ತಿದ್ದ ಬಸ್ ನಲ್ಲಿ ಚಿಲ್ಲರೆ ಹಣ ನೀಡುವ ವಿಷಯವಾಗಿ ಮಹಿಳಾ ಕಂಡಕ್ಟರ್ ಹಾಗೂ ಪ್ರಯಾಣಿಕನ ಮಧ್ಯೆ ಜಗಳ ನಡೆದಿದ್ದು, ಮಹಿಳಾ ಕಂಡಕ್ಟರ್ (Lady conductor) ಆತನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ.

ಘಟನೆಯನ್ನು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ಪ್ರಯಾಣಿಕ ಮಹಿಳಾ ಕಂಡಕ್ಟರ್ ಗೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾನೆ. ಇದರಿಂದ ಸಿಟ್ಟಾದ ಮಹಿಳಾ ಕಂಡಕ್ಟರ್, ಸಾರ್ವಜನಿಕರ (Public) ಮುಂದೆಯೇ ಚಪ್ಪಲಿಯಿಂದ ಹೊಡೆದಿದ್ದಾಳೆ.

ಬಸ್ ಇಳಿದು ಬೈಕ್ ಮೇಲೆ ಹೊರಟ ಪ್ರಯಾಣಿಕನನ್ನು ಬಸ್ ಚಾಲಕ ತಡೆದು, ತನ್ನ ಸಹೋದ್ಯೋಗಿಗೆ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದಕ್ಕೆ ಆಕ್ಷೇಪ (Objection) ವ್ಯಕ್ತಪಡಿಸಿ, ಪೊಲೀಸ್ ಠಾಣೆಗೆ ಬಾ ಎಂದಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪ್ರಯಾಣಿಕ, ತನ್ನಿಂದ ತಪ್ಪಾಯ್ತು ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾನೆ.

ಇಷ್ಟಾದರೂ ಸಿಟ್ಟು ತಣಿಯದ ಲೇಡಿ ಕಂಡಕ್ಟರ್, ತಾನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img