Monday, October 27, 2025

Janaspandhan News

HomeGeneral Newsಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದ Man : ತಪ್ಪಿಸಿಕೊಳ್ಳಲು ಹರಸಾಹಸ ; ವಿಡಿಯೋ ವೈರಲ್.!
spot_img
spot_img
spot_img

ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದ Man : ತಪ್ಪಿಸಿಕೊಳ್ಳಲು ಹರಸಾಹಸ ; ವಿಡಿಯೋ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವ್ಯಕ್ತಿ (A Man) ಯೋರ್ವ ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದಿದ್ದು, ಅಲ್ಲಿಂದ ತಪ್ಪಿಸಕೊಳ್ಳಲು ಹರ ಸಾಹಸ ಪಡುತ್ತಿರುವ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಣದಲ್ಲಿ ವೈರಲ್‌ ಆಗುತ್ತಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ಹಾಸ್ಯಾಸ್ಪದ ಘಟನೆಗೆ ಸಂಬಂಧಿಸಿದ ವಿಡಿಯೋ ವೇಗವಾಗಿ ಹರಿದಾಡುತ್ತಿದೆ. ಇದರಲ್ಲಿ ವ್ಯಕ್ತಿ (A Man) ಯೊಬ್ಬನು ಅರೆನಗ್ನ ಸ್ಥಿತಿಯಲ್ಲಿ ಕಟ್ಟಡದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ದೃಶ್ಯಗಳು ದಾಖಲಾಗಿವೆ.

Yallamma : ಸವದತ್ತಿ ಯಲ್ಲಮ್ಮದೇವಿ ಗುಡಿಗೆ ನುಗ್ಗಿದ್ದ ಮಳೆನೀರು ; ಹುಂಡಿಯಲ್ಲಿದ್ದ ತೊಯ್ದ ನೋಟುಗಳನ್ನು ಒಣ ಹಾಕಿದ ಸಿಬ್ಬಂದಿ.!

ಮಾಹಿತಿಯ ಪ್ರಕಾರ, ಆ ವ್ಯಕ್ತಿ (A Man) ತನ್ನ ಪರಿಚಿತ ಮಹಿಳೆಯನ್ನು ಭೇಟಿ ಮಾಡಲು ಆಕೆಯ ಮನೆಯಲ್ಲಿ ಹೋದಾಗ, ಆಕೆಯ ಗಂಡ ಅಕಸ್ಮಾತ್ ಮನೆಗೆ ಬಂದಿದ್ದಾನೆ. ಗಂಡನನ್ನು ಕಂಡ ವ್ಯಕ್ತಿ ತಡಬಡಾಯಿಸಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟುಕೊಂಡಿದ್ದಾನೆ. ಈ ಸಂದರ್ಭದಲ್ಲಿ, ಮಹಿಳೆಯ ಗಂಡನು ಆತನ ಬೆನ್ನಟ್ಟುತ್ತಿರುವುದೂ ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ಕಟ್ಟಡದ ಹೊರಗೆ ಜಮಾಯಿಸಿದ ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಆ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಘಟನೆ ಕೆಲಕಾಲ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

Astrology : ಹೇಗಿದೆ ಗೊತ್ತಾ.? ಅಗಷ್ಟ 12 ರ ದ್ವಾದಶ ರಾಶಿಗಳ ಫಲಾಫಲ.!

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕುರಿತು ಹಲವರು ಪ್ರತಿಕ್ರಿಯಿಸಿದ್ದು, “ಯಾವುದೇ ಕೆಲಸವನ್ನು ಮುಚ್ಚುಮರೆ ಮಾಡಿ ಮಾಡಿದರೆ, ಒಂದು ದಿನ ಸತ್ಯ ಹೊರಬರುತ್ತದೆ” ಎಂಬುದಾಗಿ ಟೀಕೆ ಮಾಡಿದ್ದಾರೆ.

ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದ ವ್ಯಕ್ತಿ (Man) ಯ ವಿಡಿಯೋ :

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.


Lion : ವ್ಯಕ್ತಿ-ಸಿಂಹ ಮುಖಾಮುಖಿ : ಇಬ್ಬರಿರೂ ಭಯ ; ಮುಂದೆನಾಯ್ತು ವಿಡಿಯೋ ನೋಡಿ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ :  ಒಂದು ಗ್ರಾಮದ ಸಿಮೆಂಟ್ ಕಾರ್ಖಾನೆಯ ಬಳಿ ವ್ಯಕ್ತಿ-ಸಿಂಹ (Lion) ಮುಖಾಮುಖಿಯಾಗಿದ್ದು, ಆಗ ಇಬ್ಬರೂ ಭಯ ಭೀತರಾಗಿದ್ದು, ಮುಂದೆನಾಯ್ತು ಅಂತ ವಿಡಿಯೋ ನೋಡಿ.!

ಗುಜರಾತ್‌ನ ಜುನಾಗಢ ಜಿಲ್ಲೆಯ ದುಂಗರ್‌ಪುರ್ ಗ್ರಾಮದಲ್ಲಿ ನಡೆದ ಘಟನೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಮೆಂಟ್ ಕಾರ್ಖಾನೆಯ ಬಳಿ ವ್ಯಕ್ತಿಯೊಬ್ಬನು ಅಕಸ್ಮಾತ್ ತನ್ನ ಎದುರಿಗೆ ಸಿಂಹ (Lion) ಬರುವುದನ್ನು ನೋಡಿ ಗಾಬರಿಗೊಂಡು ಎದ್ನೋ ಬಿದ್ನೋ ಎಂದು ಚೀರುತ್ತ ಓಡಲು ಪ್ರಾರಂಭಿಸಿದನು.

ಆಶ್ಚರ್ಯಕರವಾಗಿ, ಆ ಸಿಂಹವೂ ಕೂಡ ಈ ಆತನನ್ನು ಕಂಡ ತಕ್ಷಣ ಕಾಡಿನತ್ತ ಓಡಿ ಹೋಗಿದೆ.

SI ಸಾವಿನ ಪ್ರಕರಣಕ್ಕೆ ಹೊಸ ತಿರುವು ; ಮಹಿಳಾ ಇನ್ಸ್‌ಪೆಕ್ಟರ್ ಬಂಧನ.!

ಈ ಘಟನೆ ಕಾರ್ಖಾನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ರಾತ್ರಿ ಸುಮಾರು 10 ಗಂಟೆಗೆ ಸಂಭವಿಸಿದೆ. ವಿಡಿಯೋದಲ್ಲಿ ವ್ಯಕ್ತಿ ಭಯದಿಂದ ಕಾರ್ಖಾನೆಯ ಆವರಣದ ಕಡೆಗೆ ಓಡುವುದು ಹಾಗೂ ಸಿಂಹ (Lion) ವೂ ತಕ್ಷಣ ಕಾಡಿನತ್ತ ಹಿಂತಿರುಗುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಕಾರ್ಖಾನೆಯ ಮಾಲೀಕ ಸಾಗರ್ ಕೋಟೆಚಾ ಹೇಳುವ ಪ್ರಕಾರ, ಈ ಪ್ರದೇಶದಲ್ಲಿ ಹಲವಾರು ದಿನಗಳಿಂದ ಸಿಂಹಗಳ ಅಲೆದಾಟ ಕಾಣಿಸಿಕೊಂಡಿದೆ. ಅರಣ್ಯ ಪ್ರದೇಶವಾಗಿರುವುದರಿಂದ ರಾತ್ರಿ ಅಥವಾ ಮುಂಜಾನೆ ಅವುಗಳನ್ನು ನೋಡುವುದು ಸಾಮಾನ್ಯ, ಆದರೆ ಸಿಂಹವೋಂದು ಇಷ್ಟು ಹತ್ತಿರದಲ್ಲಿ ಎದುರಾಗುವುದು ಅಪರೂಪ.

ಹೈಕಮಾಂಡ್ ಕೆಂಗಣ್ಣಿಗೆ ಗುರಿ : KN ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ.?

@Nikhilsaini ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳಳಲಾಗಿದ್ದು, Man and lion sudden faceoff what would your reaction be? ಎಂದು ಬರೆದುಕೊಂಡಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಹಂಚಲಾದ ಈ ವಿಡಿಯೋ ಈಗಾಗಲೇ 22 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ವಿಡಿಯೋ ನೋಡಿದ ಅನೇಕ ಬಳೆಕೆದಾರರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದು, ಅದರಲ್ಲಿ ಓರ್ವ ಬಳಕೆದಾರರು ತಮಾಷೆಯಾಗಿ “ಮನುಷ್ಯನಿಗಿಂತ ಸಿಂಹವೇ ಹೆಚ್ಚು ಹೆದರಿತು” ಎಂಬ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, “ಇದು ರಾಷ್ಟ್ರೀಯ ಉದ್ಯಾನವನಗಳ ಬಳಿ ಸಾಮಾನ್ಯ ದೃಶ್ಯ” ಎಂದು ಪ್ರತಿಕ್ರಿಯಿಸಿದ್ದಾರೆ.

Celery : ಕೊಬ್ಬು ಕರಗಿಸಲು 30 ದಿನ ಈ ಜ್ಯೂಸ್‌ ಕುಡಿಯಿರಿ.!
ವ್ಯಕ್ತಿ-ಸಿಂಹ (Lion) ಮುಖಾಮುಖಿಯಾದ ವಿಡಿಯೋ :

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments