Saturday, July 27, 2024
spot_img
spot_img
spot_img
spot_img
spot_img
spot_img

ಗೋಕಾಕ : ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ PSI ; ವಕೀಲರಿಂದ ಪ್ರತಿಭಟನೆ.!

spot_img

ಜನಸ್ಪಂದನ ನ್ಯೂಸ್, ಗೋಕಾಕ : ಬೆಳಗಾವಿ ಜಿಲ್ಲೆಯ ಗೋಕಾಕ (Gokak) ತಾಲ್ಲೂಕಿನ ಅಂಕಲಗಿ (Ankalagi) ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಲ್ಲಾಪೂರ ಗ್ರಾಮದಲ್ಲಿ ವಕೀಲರು ಮನೆ ಕಟ್ಟಿಸುತ್ತಿದ್ದ ಸಂದರ್ಭ ವಕೀಲರಿಗೂ ಹಾಗೂ ಗ್ರಾಮ ಪಂಚಾಯತಿ ಸದಸ್ಯನಿಗೂ ವಾಗ್ವಾದವಾಗಿದೆ.

ಈ ವೇಳೆ ಇಬ್ಬರ ಗಲಾಟೆ ವಿಕೋಪಕ್ಕೆ ತಿರುಗಿ ಹೊಡೆದಾಟವಾಗಿದೆ. ಆಗ ವಕೀಲರು (Lawyer) ದೂರು ಕೊಡಲು ಪೋಲಿಸ್ ಸ್ಟೇಷನ್ ಗೆ ಹೋದಾಗ ಅಲ್ಲಿನ ಪಿಎಸ್ಐ ಓರ್ವರು ಏಕವಚನದಲ್ಲಿ ಮಾತನಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಾನು ಕಂಪ್ಲೆಂಟ್ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.

ಇದನ್ನು ಓದಿ : ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ : 11 ಜನರ ಸಾವು ; ವಿಡಿಯೋ ನೋಡಿ.!

ಘಟನೆಯ ವಿರುದ್ಧ ಆಕ್ರೋಶಗೊಂಡ ನ್ಯಾಯವಾದಿಗಳು ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ (circle) ಜಮಾಯಿಸಿ ರಸ್ತೆ ತಡೆ ನಡೆಸಿ ಅಂಕಲಗಿ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನ್ಯಾಯವಾದಿಗಳು (lawyer’s) ಇರುವುದು ಜನರಿಗೋಸ್ಕರ, ಜನರಿಗೆ ನ್ಯಾಯ ನೀಡಲೇಂದೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂದು ನ್ಯಾಯವಾದಿ ಎಸ್.‌ ವಿ. ದೇಮಶೆಟ್ಟಿ ತಿಳಿಸಿದರು.

ಸಮಾಜದಲ್ಲಿ ನ್ಯಾಯವಾದಿಗಳಿಗೆ ಒಂದು ವಿಶೇಷವಾದ ಗೌರವವಿದೆ. ಇಂತಹ ಗೌರವವಿರುವ ನ್ಯಾಯವಾದಿಗಳಿಗೆ ಅಂಕಲಗಿ ಪಿಎಸ್‌ಐ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ವಕೀಲ ವೃತ್ತಿಗೆ ಅನ್ಯಾಯ ಮಾಡಿದ್ದಾರೆ. ಇಂತಹ ದುರ್ನಡತೆ ಪಿಎಸ್ಐ ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿ : ಹಾಕಿ ಸ್ಟಾರ್ ಆಟಗಾರನ ವಿರುದ್ಧ ಅತ್ಯಾಚಾರ ಆರೋಪ ; FIR ದಾಖಲು.!

ಒಬ್ಬ ನ್ಯಾಯವಾದಿಗೆ ಈ ಪರಿಸ್ಥಿತಿ ಅಂದರೆ ಇನ್ನೂ ಸಾಮಾನ್ಯ ಜನರ ಪಾಡೇನು ಎಂಬ ಮಾತುಗಳು ಸಾರ್ವಜನಿಕ (public) ವಲಯದಲ್ಲಿ ಕೇಳಿ ಬಂದಿದೆ.

spot_img
spot_img
- Advertisment -spot_img