Sunday, September 8, 2024
spot_img
spot_img
spot_img
spot_img
spot_img
spot_img
spot_img

ರಾಜ್ಯದಲ್ಲಿ ಗೋಬಿ ಮಂಚೂರಿ ಬ್ಯಾನ್.? ಸೋಮವಾರ ಅಧಿಕೃತ ಘೋಷಣೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಮಕ್ಕಳಿಂದ ಹಿಡಿದು ವಯೋವೃದ್ದರ ಅಚ್ಚು ಮೆಚ್ಚಿನ ತಿನಿಸುಗಳಲ್ಲಿ ಗೋಬಿ ಮಂಚೂರಿಯೂ ಒಂದು. ಆದರೆ ಇನ್ನೇನು ಕೆಲ ದಿನಗಳಲ್ಲಿಯೇ ಗೋಬಿ ಮಂಚೂರಿ (Gobi Manchuri) ತಿನಿಸುಗಳ ಪಟ್ಟಿಯಿಂದ ಪಕ್ಕಕ್ಕೆ ಸರಿಯಲಿದೆ.

ಹಾಗಂದ್ರೆ ಏನಂತಿರಾ.?

ರಾಜ್ಯದಲ್ಲಿ ಜನರ ನೆಚ್ಚಿನ ತಿನಿಸುಗಳಲ್ಲಿ ಒಂದಾದ ಗೋಬಿ ಮಂಚೂರಿ ಶೀಘ್ರದಲ್ಲೇ ನಿಷೇಧವಾಗುವ ಸಾಧ್ಯತೆಯಿದೆ.

ಮಾಲೀಕನಿಗಾಗಿ ಆಸ್ಪತ್ರೆಯಲ್ಲೇ ಉಳಿದ ನಾಯಿ ; ಹೃದಯಸ್ಪರ್ಶಿ ವಿಡಿಯೋ Virul.!

ಏಕೆ ಅಂತಿರಾ.?

ನೂರಕ್ಕೂ ಅಧಿಕ ಬಗೆಯ ಗೋಬಿ ಮಂಚೂರಿ ತಿನಿಸುಗಳನ್ನು ಇತ್ತೀಚೆಗೆ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಅದರಲ್ಲಿ ಅಸುರಕ್ಷಿತ ಹಾಗೂ ಅಪಾಯಕಾರಿ ರಾಸಾಯನಿಕ ಸನ್‌ಸೆಟ್‌ ಎಲ್ಲೋ ಮತ್ತು ಥರ್ಟಜೈನ್‌ (Chemical Sunset is Elo and Tertzine/ಕ್ಯಾನ್ಸರ್ ಕಾರಕ) ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ರಾಜ್ಯ ಸರಕಾರವು ಅಸುರಕ್ಷಿತ ಗೋಬಿ ಮಂಚೂರಿಗಳನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ನಾಳೆ (ದಿ.11) ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪತ್ರಿಕಾಗೋಷ್ಠಿ ನಡೆಸಿ ಗೋಬಿ ಮಂಚೂರಿ ನಿಷೇಧಿಸುವ ಕುರಿತು ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ರಾಜ್ಯದಲ್ಲಿ ಕಾಟನ್‌ ಕ್ಯಾಂಡಿ (ಬಾಂಬೆ ಮಿಠಾಯಿ)ಯನ್ನೂ ನಿಷೇಧಿಸಲಾಗಿತ್ತು. ಇದರ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತೆ ಇಲಾಖೆಯು ಸಲ್ಲಿಸಿರುವ ವರದಿ ಆಧರಿಸಿ ಮಹತ್ವದ ನಿರ್ಧಾರ ಕೈಗೊಳ್ಳಲು ಸರಕಾರ ಮುಂದಾಗಿದೆ.

ಅಂಚೆ ಇಲಾಖೆಯಲ್ಲಿ 55,000 ಹುದ್ದೆಗಳ ನೇಮಕಾತಿ ; ಶೀಘ್ರದಲ್ಲಿ ಅರ್ಜಿ ಆಹ್ವಾನ.!

ಕೃತಕ ಬಣ್ಣ ಬೆರೆಸಿದ ಗೋಬಿಗೆ ಅವಕಾಶವಿಲ್ಲ.?

ಆರೋಗ್ಯ ಇಲಾಖೆಯು ಎಲ್ಲ ಜಿಲ್ಲೆಗಳಿಂದ ಮಾದರಿ ಸಂಗ್ರಹಿಸಿ ಟೆಸ್ಟ್‌ಗೆ ಕಳುಹಿಸಲು ಸೂಚನೆ ನೀಡಿತ್ತು. ನೂರಕ್ಕೂ ಹೆಚ್ಚಿನ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಹೀಗಾಗಿ ಈ ಎರಡು ರಾಸಾಯನಿಕ ಅಂಶಗಳನ್ನು ಗೋಬಿ ಮಂಚೂರಿಗಳಲ್ಲಿ ಬಳಸದಂತೆ ಸೂಚಿಸುವ ಸಾಧ್ಯತೆ ಇದೆ. ಕೃತಕ ಬಣ್ಣ ಬೆರೆಸುವುದಕ್ಕೂ ಅವಕಾಶವಿರುವುದಿಲ್ಲ. (ಎಜೇನ್ಸಿಸ್)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img