Saturday, July 27, 2024
spot_img
spot_img
spot_img
spot_img
spot_img
spot_img

ಪಂದ್ಯದ ವೇಳೆ ಸಿಡಿಲು ಬಡಿದು ಪುಟ್ಬಾಲ್ ಆಟಗಾರ ಸಾವು ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಟ್ಟ ಹವಾಮಾನದ ನಡುವೆ ಫುಟ್ಬಾಲ್ (football) ಪಂದ್ಯ ನಡೆಯುತ್ತಿದ್ದ ವೇಳೆಯೇ ಸಿಡಿಲು (lightning) ಬಡಿದು ಆಟಗಾರನೋರ್ವ ಮೃತಪಟ್ಟ ಘಟನೆ ಇಂಡೋನೇಷ್ಯಾದ ಪಶ್ಚಿಮ ಜಾವಾದ ಸಿಲಿವಾಂಗಿ ಸ್ಟೇಡಿಯಂನಲ್ಲಿ (Stadium) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಸಾವನ್ನಪ್ಪಿದ ವ್ಯಕ್ತಿ ಎಫ್‌ಸಿ ಬಂಡುಂಗ್ ಎಂದು ವರದಿ ತಿಳಿಸಿದ್ದು, ತಂಡದ ಸಹ ಆಟಗಾರರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.

ಇದನ್ನು ಓದಿ : ಎಲ್ಲರ ಎದುರೇ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಬಿಗ್​ಬಾಸ್​ Winner ; Video Viral.!

ಈ ಸಂಪೂರ್ಣ ದೃಶ್ಯ ಕ್ರೀಡಾಂಗಣದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದೆ.

ಮೈದಾನದ (ground) ಒಂದು ಭಾಗದಲ್ಲಿ ನಿಂತಿದ್ದ ಆಟಗಾರನ ಮೇಲೆ ಏಕಾಏಕಿ ಪ್ರಖರ ಬೆಳಕಿನೊಂದಿಗೆ ಸಿಡಿಲು ಬಿದ್ದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವೇಳೆ ಬೆಂಕಿ ಕೂಡ ಹೊತ್ತಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇನ್ನೂ ಇಂಡೋನೇಷ್ಯಾದಲ್ಲಿ (Indonesia) ಇದು 2ನೇ ಘಟನೆಯಾಗಿದ್ದು, 2023 ರಲ್ಲಿ ಸೊರಾಟಿನ್ ಯು-13 ಕಪ್ ಸಮಯದಲ್ಲಿ ಪೂರ್ವ ಜಾವಾದ ಬೊಜೊಂಗೊರೊದಲ್ಲಿ ಫುಟ್ಬಾಲ್ ಆಟಗಾರನಿಗೆ ಸಿಡಿಲು ಬಡಿದಿತ್ತು.

ಇದನ್ನು ಓದಿ : ಫೇಸ್‌ಬುಕ್ ಲೈವ್‌ನಲ್ಲಿ ಗುಂಡಿನ ದಾಳಿ ನಡೆಸಿ ರಾಜಕೀಯ ನಾಯಕನ ಹತ್ಯೆ ; ವಿಡಿಯೋ Viral.!

ಹೃದಯ ಸ್ತಂಭನದಿಂದ ಬಳಲುತ್ತಿದ್ದ ಆಟಗಾರನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. 20 ನಿಮಿಷಗಳ ಪ್ರಯತ್ನದ ನಂತರ ವೈದ್ಯರು ಅವರನ್ನು ಪ್ರಜ್ಞೆಗೆ ತರುವಲ್ಲಿ ಯಶಸ್ವಿಯಾಗಿದ್ದರು (success). ಮೈದಾನದಲ್ಲಿದ್ದ ಇತರ ಆರು ಆಟಗಾರರು ಕೂಡ ಸಿಡಿಲು ಬಡಿದು ಆಸ್ಪತ್ರೆಯಲ್ಲಿ ಕಾಲ ಕಳೆಯಬೇಕಾಯಿತು.

ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಒತ್ತಿ.

This happened during a football match in Indonesia 🇮🇩 pic.twitter.com/JHdzafaUpV

— Githii (@githii) February 11, 2024

spot_img
spot_img
- Advertisment -spot_img