ಜನಸ್ಪಂದನ ನ್ಯೂಸ್, ಮಂಗಳೂರು : ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದ ವೈದ್ಯೆ ವಿರುದ್ಧ FIR ದಾಖಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
“ನಾನು ಭಾರತವನ್ನು ದ್ವೇಷಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಿನ್ನಲೆಯಲ್ಲಿ ವೈದ್ಯೆಯ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಲಾಗಿದೆ.
ಇದನ್ನು ಓದಿ : ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆ*ತ್ಮಹ*ತ್ಯೆಗೆ ಶರಣಾದ Businessman.!
ಹೀಗೆ ದೇಶ ವಿರೋಧಿ ಫೋಸ್ಟ್ (Post) ಹಾಕಿದ ವೈದ್ಯೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೈದ್ಯೆ ಅಫೀಫಾ ಫಾತಿಮಾ ಎಂದು ತಿಳಿದು ಬಂದಿದೆ. ಅಲ್ಲದೆ ಈ ವ್ಯೆದ್ಯೆಯನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಿಂದ ವಜಾಗೊಳಿಸಲಾಗಿದೆ.
ವೈದ್ಯೆ ಅಫೀಫಾ ಫಾತಿಮಾ ದೇಶ ವಿರೋಧಿ ಪೋಸ್ಟ್ ಪೋಸ್ಟ್ ಮಾಡಿದ ಕಾರಣ ಆಸ್ಪತ್ರೆಯ ಮಾನವ ಸಂಪನ್ಮೂಲ ಅಧಿಕಾರಿ (HR) ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
ಹೈಲ್ಯಾಂಡ್ ಆಸ್ಪತ್ರೆಯ ಎಚ್.ಆರ್. ಮೊಹಮ್ಮದ್ ಅಸ್ಲಾಂ ಅವರ ದೂರಿನ ಆಧಾರದ ಮೇಲೆ ಬಿಎನ್ಎಸ್ ಸೆಕ್ಷನ್ 196(1)(ಎ), 353(2) ಅಡಿಯಲ್ಲಿ ವ್ಯೆದ್ಯೆಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವೈದ್ಯೆ ಸಾಮಾಜಿಕ ಮಾಧ್ಯಮದಲ್ಲಿ “ನನ್ನನ್ನು ಉಳಿಸಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ. ಹೌದು, ನಾನು ಭಾರತೀಯ, ಹೌದು, ನಾನು ಭಾರತವನ್ನು ದ್ವೇಷಿಸುತ್ತೇನೆ” ಎಂದು ಸಂದೇಶವನ್ನು ಪೋಸ್ಟ್ ಮಾಡಿದ ಹಿನ್ನಲೆಯಲ್ಲಿ ಸದ್ಯ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ : Revenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ವಾರದ ಹಿಂದಷ್ಟೆ (ಎ.22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲಿ ಮಂಗಳೂರಿನ ವೈದ್ಯೆಯ ಈ ರೀತಿಯ ಪೋಸ್ಟ್‌ಗೆ ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.
ಮಂಗಳೂರಿನ ಹೈಲ್ಯಾಂಡ್‌ನ ಖಾಸಗಿ ಆಸ್ಪತ್ರೆಯ ವ್ಯೆದ್ಯೆಯ ಈ ದೇಶ ವಿರೋಧಿ ಹಾಗು ಹಿಂದೂ ವಿರೋಧಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಎಚ್‌ಪಿ ನಾಯಕ ಶರಣ್ ಕುಮಾರ್ ಪಂಪ್‌ವೆಲ್ ಒತ್ತಾಯಿಸಿದ್ದಾರೆ.
ಹಿಂದಿನ ಸುದ್ದಿ : ಅತ್ಯಂತ ದುರ್ಬಲ ಪಾಸ್‌ವರ್ಡ್ ಗಳಿವು ; 1 ನಿಮಿಷ ಸಾಕು ಖಾತೆ ಹ್ಯಾಕ್ ಮಾಡಲು.!
ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮ್ಮ ಪ್ರಮುಖ ಖಾತೆಗಳ ಪಾಸ್‌ವರ್ಡ್ ಸ್ಟ್ರಾಂಗ್ ಇದೆಯಾ? ನಾರ್ಡ್ ಪಾಸ್ 2024 ಕೆಲ ಪಟ್ಟಿ ಮಾಡಿದೆ. ಈ 45 ಪಾಸ್‌ವರ್ಡ್ ನೀವು ಬಳಸುತ್ತಿದ್ದರೆ, 1 ನಿಮಿಷವೂ ಬೇಕಾಗಿಲ್ಲ ನಿಮ್ಮ ಖಾತೆ ಹ್ಯಾಕ್ ಮಾಡಲು. ಈ ಪಟ್ಟಿಯಲ್ಲಿ ನೀವಿದ್ದೀರಾ.? ಅಂತ ಚೆಕ್ ಮಾಡ್ಕೊಳ್ಳಿ.
ಸಾಮಾಜಿಕ ಜಾಲತಾಣ, ಇಮೇಲ್ ಖಾತೆ, ಬ್ಯಾಂಕ್ ಖಾತೆ, ಯುಪಿಐ ಪಾವತಿ ಸೇರಿದಂತೆ ಹಲವು ಡಿಜಿಟಲ್ ಖಾತೆಗಳಿಗೆ ಸ್ಟ್ರಾಂಗ್ ಪಾಸ್‌ವರ್ಡ್ ಹಾಕಿರಬೇಕು.
ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?
ಆದರೆ ಹಲವರು ನೆನಪಿಟ್ಟುಕೊಳ್ಳಲು ಸುಲಭವಾಗಲಿ ಅಂತ ದುರ್ಬಲ ಪಾಸ್‌ವರ್ಡ್ (Weak password) ಹಾಕುತ್ತಾರೆ. ಇದು ಅದೆಷ್ಟೋ ಡೇಂಜರ್ ಗೊತ್ತಾ.? ಡೇಟಾ, ಹಣ ಯಾವುದು ಲೀಕ್ ಆಗದಂತೆ ತಡೆಯುವ ಪಾಸ್‌ವರ್ಡ್ ಸ್ಟ್ರಾಂಗ್ ಇರಬೇಕು. ಆದರೆ ಭಾರತದಲ್ಲಿ ಬಹುತೇಕ ಜನರು ಈ 45 ಪಾಸ್‌ವರ್ಡ್ ಬಳಕೆ ಮಾಡುತ್ತಾರೆ.
ನಾರ್ಡ್‌ಪಾಸ್ 2024 ಇದೀಗ 45 ಪಾಸ್‌ವರ್ಡ್ ಪಟ್ಟಿ ನೀಡಿದ್ದು, ಇದು ಅತ್ಯಂತ ದುರ್ಬಲ ಪಾಸ್‌ವರ್ಡ್ಸ್ ಎಂದಿದೆ.
ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!
ಈ ಪಾಸ್‌ವರ್ಡ್ ಹ್ಯಾಕ್ ಮಾಡಲು ಒಂದು ನಿಮಿಷವೂ ಬೇಕಾಗಿಲ್ಲ. ಅಲ್ಲದೇ ಈ ಪಾಸ್‌ವರ್ಡ್ ಹ್ಯಾಕ್ ಮಾಡಲು ಭಾರಿ ತಂತ್ರಜ್ಞಾನ ಗೊತ್ತಿದ್ದ ಹ್ಯಾಕರ್ಸ್ ಬೇಕಿಲ್ಲ ಎಂದಿದೆ.
123456, 123456789, Password, 111111, dragon, Monkey, 123123123, 123321, Password 0 ಮತ್ತು 000000 ದುರ್ಬಲ ಪಾಸ್ ವರ್ಡ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ.
ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!
ಹೆಸರು , ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಇಟ್ಟುಕೊಳ್ಳುವುದು ಉತ್ತಮವಲ್ಲ. ಈ ರೀತಿಯ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದಂತೆ (Easily hackable).
ನಿಮ್ಮ ಸಾಮಾಜಿಕ ಜಾಲತಾಣದ ಖಾತೆ ಅಥವಾ ಇನ್ಯಾವುದೇ ಡಿಜಿಟಲ್ ಮೂಲಕ ವೈಯಕ್ತಿಕ ಮಾಹಿತಿ (Personal information through digital) ಪಡೆದು ಸುಲಭವಾಗಿ ಹ್ಯಾಕ್ ಮಾಡುತ್ತಾರೆ ಹ್ಯಾಕರ್ಸ್.
ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಬಹುದು.?
ಇದರ ಫ್ರೀಕೆನ್ಸ್ ಸುಲಭವಾಗಿ ಲಭ್ಯವಿದೆ. ಹೀಗಾಗಿ ಇವುಗಳನ್ನು ಯಾರು ಬೇಕಾದರೂ ಹ್ಯಾಕ್ ಮಾಡಬಹುದು. ಈ ರೀತಿಯ ಪಾಸ್‌ವರ್ಡ್ ನೀಡಿದ್ದರೆ ಬದಲಿಸುವುದು ಉತ್ತಮ.
ನೀವು ಬಳಸುವ ಪಾಸ್‌ವರ್ಡ್‌ನಲ್ಲಿ ಸ್ಪೆಷಲ್ ಕ್ಯಾರೆಕ್ಟರ್, ಸಂಖ್ಯೆ, ಅಲ್ಫಾಬೆಟ್ ಸೇರಿದಂತೆ ಕೆಲವು ಕ್ಯಾರೆಕ್ಟರ್ ಇರಲೇಬೇಕೆಂಬ ನಿಯಮವಿದೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಹೆಸರು, ಪೋಷಕರ ಹೆಸರು, ಮಕ್ಕಳ ಹೆಸರು, ಊರಿನ ಹೆಸರನ್ನು ಪಾಸ್‌ವರ್ಡ್ ಆಗಿ ಬಳಸಬೇಡಿ. ಇನ್ನು ಐಡಿ ಯನ್ನೇ ಪಾಸ್‌ವರ್ಡ್ ಆಗಿ ನೀಡುವುದು ಕೂಡ ಸರಿಯಲ್ಲ.