Sunday, September 8, 2024
spot_img
spot_img
spot_img
spot_img
spot_img
spot_img
spot_img

ಮಗನ marriage ಮಾತುಕತೆಗೆ ಬಂದು ವಧುವಿನ ತಾಯಿಯ ಜೊತೆ ಓಡಿಹೋದ ತಂದೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಗನ ಮದುವೆಯಾಗುತ್ತೆ, ಇನ್ನೇನು ಸೊಸೆ ಮನೆಗೆ ಬರ್ತಾಳೆ ಅಂತ ಲೆಕ್ಕಾಚಾರ ಹಾಕಿದ್ದ ಕುಟುಂಬಕ್ಕೆ ಬರಸಿಡಿಲೊಂದು ಬಡಿದಿದೆ. ಸೊಸೆಯ ತಾಯಿ ಜೊತೆ ಹುಡುಗನ ತಂದೆ ಪರಾರಿಯಾದ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ವಿಚಿತ್ರ ಘಟನೆಯ ವಿವರ :
ಅದು ದೊಡ್ಡ ಕುಟುಂಬವಾಗಿದ್ದು, ಮನೆಯಲ್ಲಿ ಒಬ್ಬ ಮಗನ ಮದುವೆ ಮಾತುಕತೆ ಆರಂಭಗೊಂಡಿದೆ. ತಂದೆ ಹಾಗೂ ತಾಯಿ ಮಗನಿಗೆ ಮದುವೆ ಮಾಡಿಸಲು ಹುಡುಗಿ ಹುಡುಕಾಟ ಶುರು ಮಾಡಿದ್ದಾರೆ.

ಇದನ್ನು ಓದಿ : SSLC ಪಾಸಾಗಿದ್ದೀರಾ.? ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಕೊನೆಗೆ ಒಂದು ಹುಡುಗಿಯ ಫೋಟೋ ಮಗನಿಗೆ ತೋರಿಸಿದಾಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮಗನಿಗೂ ಓಕೆ, ಅತ್ತ ಹುಡುಗಿಗೂ ಓಕೆ. ಹೀಗಾಗಿ ಹುಡುಗಿ ನೋಡುವ ಶಾಸ್ತ್ರ ಫಿಕ್ಸ್ ಮಾಡಿದ್ದಾರೆ.

ಅಂತೆಯೇ ಹುಡುಗ, ಆತನ ಪೋಷಕರು ಹಾಗೂ ಆಪ್ತರು ಹುಡುಗಿ ಮನೆಗೆ ಹೋಗಿ ಹುಡುಗಿ ನೋಡುವ ಶಾಸ್ತ್ರ ಮುಗಿಸಿದ್ದಾರೆ. ಎಲ್ಲರಿಗೂ ಒಪ್ಪಿಗೆಯಾಗಿದೆ. ಹುಡುಗ ಹಾಗೂ ಹುಡುಗಿ ಮಾತನಾಡಿಕೊಂಡಿದ್ದು, ಹುಡುಗಿ ನೋಡುವ ಶಾಸ್ತ್ರ ಯಾವುದೇ ಅಡೆತಡೆ ಇಲ್ಲದೇ ಮುಕ್ತಾಯಗೊಂಡಿದೆ.

ಇದನ್ನು ಓದಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ 44,228 ಹುದ್ದೆಗಳಿಗೆ ಇಂದಿನಿಂದ (ದಿ.15) ಅರ್ಜಿ ಆಹ್ವಾನ.!

ಈ ವೇಳೆ ಮದುವೆ, ಶಾಸ್ತ್ರ, ಮಾತುಕತೆಗಳಿಗೆ ಎರಡೂ ಮನೆಯವರ ಫೋನ್ ನಂಬರ್ ಎಕ್ಸೆಂಜ್ ಆಗಿವೆ. ಇತ್ತ ಹುಡುಗ, ಹುಡುಗಿ ಕೂಡ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ.

ಇನ್ನೂ ಹುಡುಗನ ಅಪ್ಪ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹುಡುಗಿ ನೋಡುವ ಶಾಸ್ತ್ರ ಮುಗಿದ ನಂತರ ಮುಂದಿನ ಶಾಸ್ತ್ರಕ್ಕಾಗಿ ಹುಡುಗನ ಅಪ್ಪ, ಹುಡುಗಿಯ ತಾಯಿಗೆ ಕಾಲ್ ಮಾಡಿದ್ದಾರೆ. ಬಳಿಕ ಎರಡು ಕುಟುಂಬಸ್ಥರು ಮದುವೆ ಶಾಸ್ತ್ರಗಳನ್ನು ನಡೆಸಿದ್ದಾರೆ.

ಇದನ್ನು ಓದಿ : ಈ ಗಿಡದಲ್ಲಿ ಸಂಗ್ರಹವಾದ ನೀರು Kidney stone ಗೆ ರಾಮಬಾಣ ; ಕುಡಿದ ತಕ್ಷಣ ಮೂತ್ರದ ಮೂಲಕ ಹೊರಬರುತ್ತೆ ಕಲ್ಲು.!

ಹುಡುಗನ ಅಪ್ಪ ಹಾಗೂ ಹುಡುಗಿಯ ತಾಯಿ ಮಾತುಕತೆ ಒಂದೆರೆಡು ದಿನಕ್ಕೊಮ್ಮೆ ನಡೆಯುತ್ತಿತ್ತು. ಬಳಿಕ ದಿನಕ್ಕೊಂದು ಬಾರಿಗೆ ತಿರುಗಿತ್ತು. ಮಗನ ಮದುವೆ ಮಾತುಕತೆಯ ನಡುವೆ ಹುಡುಗನ ಅಪ್ಪ ಹಾಗೂ ಹುಡುಗಿಯ ತಾಯಿ ನಡುವೆ ಪ್ರೀತಿ ಶುರುವಾಗಿದೆ. ಬಳಿಕ ಮಗನ ಮದುವೆ ಮಾತುಕತೆ ನೆಪದಲ್ಲಿ ಇವರಿಬ್ಬರ ಪ್ರೀತಿ, ಕುಚುಕುಚು ಕತೆಗಳು ಜೋರಾಗಿ ನಡೆದಿವೆ. ಈ ಫೋನ್ ಕಾಲ್‌ನಿಂದ ಇವರಿಬ್ಬರ ಪ್ರೀತಿ ಗಾಢವಾಗಿದೆ.

ಮಗನ ಮದುವೆಗೂ ಮೊದಲೇ ಹುಡುಗನ ತಂದೆ ಹಾಗೂ ಹುಡುಗಿಯ ತಾಯಿ ಪರಾರಿಯಾಗಿದ್ದಾರೆ. ಇಬ್ಬರು ನಾಪತ್ತೆಯಾದ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಹುಡುಗಿ ತಂದೆ ಅಪಹರಣ ದೂರು ನೀಡಿದ್ದಾರೆ. ಪೊಲೀಸರ ತನಿಖೆ ವೇಳೆ ಇವರಿಬ್ಬರ ಫೋನ್ ಕಾಲ್ ಲಿಸ್ಟ್ ತೆಗೆದಾಗ ಅಚ್ಚರಿಯಾಗಿದೆ. ಪರಾರಿಯಾಗಿರುವ ತಾಯಿಗೆ 6 ಮಕ್ಕಳಿದ್ದರೆ, ಹುಡುಗನ ತಂದೆಗೆ 10 ಮಕ್ಕಳಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img