ಜನಸ್ಫಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಆನೆ (Elephant) ಮತ್ತು ಅದರ ಮಾವುತನ ನಡುವಿನ ಬಾಂಧವ್ಯವನ್ನು ತೋರಿಸುವ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು ಭಾವುಕರಾಗಿದ್ದು, ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ವಿಡಿಯೋದಲ್ಲಿ, ಕಾಡಿನ ಮಧ್ಯೆ ಆನೆ (Elephant) ಯೊಂದು ತನ್ನ ಮಾವುತನೊಂದಿಗೆ ಸಾಗುತ್ತಿರುವುದು ಕಾಣಿಸುತ್ತದೆ. ಇದ್ದಕ್ಕಿದ್ದಂತೆ ಮಾವುತ ನೆಲಕ್ಕುರುಳಿದಂತೆ ನಟಿಸುತ್ತಾನೆ. ಇದನ್ನು ಗಮನಿಸಿದ ಆನೆ (Elephant) ತಕ್ಷಣವೇ ಆತಂಕಗೊಂಡು, ತನ್ನ ಸೊಂಡಿಲಿನಿಂದ ಮಾವುತನನ್ನು ಎಚ್ಚರಿಕೆಯಿಂದ ಎತ್ತಲು ಪ್ರಯತ್ನಿಸುತ್ತದೆ.
ಬಿಳಿ ಶರ್ಟ್ Collar ಕಲೆ ತೆಗೆಯಲು ಬ್ರಷ್-ಡಿಟರ್ಜೆಂಟ್ ಬೇಡ ; ಈ ಸರಳ ಟ್ರಿಕ್ ಪ್ರಯತ್ನಿಸಿ!
ಪ್ರಾಣಿಯು ತನ್ನ ಭಾರವಾದ ಕಾಲುಗಳು ಮಾಲೀಕನ ಮೇಲೆ ಬಿದ್ದರೆ ಅಪಾಯವಾಗಬಹುದು ಎಂಬ ಭಾವನೆ ಹೊಂದಿದಂತೆ, ವಿಶೇಷ ಜಾಗರೂಕತೆಯಿಂದ ವರ್ತಿಸುತ್ತದೆ.
ಈ ದೃಶ್ಯವನ್ನು Instagramನಲ್ಲಿ @s_d_entertainments ಪೇಜ್ ಹಂಚಿಕೊಂಡಿದ್ದು, ಇದುವರೆಗೆ 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷನೆ ಮಾಡಿದ್ದಾರೆ. ಜೊತೆಗೆ, 33 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದು, ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ.
School : ಶಾಲೆಯಲ್ಲಿಯೇ ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ ; ವಿಡಿಯೋ ವೈರಲ್.!
ನೆಟ್ಟಿಗರ ಪ್ರತಿಕ್ರಿಯೆಗಳು :
- ಕೆಲವರು ಆನೆಯ ನಿಷ್ಠೆಯನ್ನು ಮೆಚ್ಚಿಕೊಂಡಿದ್ದಾರೆ.
- ಇನ್ನೊಬ್ಬರು “ರೀಲ್ಸ್‌ಗಾಗಿ ಪ್ರಾಣಿಗಳ ಭಾವನೆಗಳೊಂದಿಗೆ ಆಟವಾಡಬೇಡಿ” ಎಂದು ಮಾವುತನಿಗೆ ತರಾಟೆ ತೆಗೆದುಕೊಂಡಿದ್ದಾರೆ.
- ಮತ್ತೊಬ್ಬರು “ಈ ಪ್ರಾಣಿಗಳು ನಿಜವಾಗಿಯೂ ಪ್ರೀತಿಸುತ್ತವೆ” ಎಂದು ಬರೆದಿದ್ದಾರೆ.
ಈ ವಿಡಿಯೋ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಅನನ್ಯ ಬಾಂಧವ್ಯಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ.
Ganesh ಮೆರವಣಿಗೆ ವೇಳೆ ಭೀಕರ ದುರಂತ : 6 ಸಾವು, 20ಕ್ಕೂ ಹೆಚ್ಚು ಮಂದಿ ಗಾಯ.!
ಹೃದಯ ಸ್ಪರ್ಶಿ ಆನೆ (Elephant) ಯ ವಿಡಿಯೋ :
View this post on Instagram
B12 : ವಿಪರೀತ ಮರೆವು, ಕಣ್ಣಿನ ದೃಷ್ಟಿ ಮಂದಾಗಲು ಕಾರಣವೇನು ಗೊತ್ತೇ.?
ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮ ದೇಹಕ್ಕೆ ಅಗತ್ಯವಾಗಿರುವ ಪ್ರಮುಖ ಪೌಷ್ಠಿಕಾಂಶಗಳಲ್ಲಿ ಒಂದೇ ವಿಟಮಿನ್ B12 (Vitamin B12). ಇದು ಡಿಎನ್‌ಎ ನಿರ್ಮಾಣದ ಜೊತೆಗೆ ಫೋಲಿಕ್ ಆಮ್ಲದ ಶೋಷಣೆಯಲ್ಲಿ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಈ ಪೌಷ್ಠಿಕಾಂಶದ ಕೊರತೆಯಿಂದ ದೇಹದಲ್ಲಿ ಹಲವು ಗಂಭೀರ ಆರೋಗ್ಯ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ.
ಖಾಸಗಿ ರೂಂ ಅಂತ ಭಾವಿಸಿ ರೈಲಿನಲ್ಲೇ ಜೋಡಿಯ Rude behavior ; ವಿಡಿಯೋ ವೈರಲ್.!
🔹 ಮರೆವು ಸಮಸ್ಯೆ :
ವಿಟಮಿನ್ B12 ಕೊರತೆಯಿಂದ ಜ್ಞಾಪಕ ಶಕ್ತಿ ಕುಂದುವುದು ಸಾಮಾನ್ಯ. ಸಣ್ಣಪುಟ್ಟ ವಿಷಯಗಳನ್ನೂ ನೆನಪಿಡಲು ಕಷ್ಟವಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.
🔹 ಕಣ್ಣಿನ ದೃಷ್ಟಿ ದುರ್ಬಲತೆ :
B12 ಕೊರತೆಯಿಂದ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಸಣ್ಣ ಅಕ್ಷರಗಳನ್ನು ಓದಲು ಕಷ್ಟವಾಗುವುದು, ದೃಷ್ಟಿ ಮಂದವಾಗುವುದು ಮತ್ತು ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣಗಳಾಗಿವೆ.
POCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!
🔹 ರಕ್ತಹೀನತೆ :
ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಗೆ ವಿಟಮಿನ್ B12 ಬಹಳ ಮುಖ್ಯ. ಇದರ ಕೊರತೆಯಿಂದ ರಕ್ತಹೀನತೆ (Anemia) ಉಂಟಾಗುವ ಸಾಧ್ಯತೆ ಹೆಚ್ಚು.
🔹 ಮೂಳೆ ಮತ್ತು ಬೆನ್ನು ನೋವು :
B12 ಮಟ್ಟ ಕಡಿಮೆಯಾಗಿದ್ರೆ ಮೂಳೆಗಳಲ್ಲಿ ನೋವು ತೀವ್ರಗೊಳ್ಳುತ್ತದೆ. ವಿಶೇಷವಾಗಿ ಬೆನ್ನು ಮತ್ತು ಸೊಂಟದಲ್ಲಿ ನೋವು ಹೆಚ್ಚಾಗುವುದು ಸಾಮಾನ್ಯ ಲಕ್ಷಣ.
School : ಶಾಲೆಯಲ್ಲಿಯೇ ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ ; ವಿಡಿಯೋ ವೈರಲ್.!
👉 ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್ B12 ಇರುವ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು ಅತ್ಯಂತ ಅಗತ್ಯ. ಮೀನು, ಮೊಟ್ಟೆ, ಹಾಲು, ಮಾಂಸ ಹಾಗೂ ಕೆಲವು ಧಾನ್ಯಗಳಲ್ಲಿ ಇದು ದೊರೆಯುತ್ತದೆ.