ಶುಕ್ರವಾರ, ನವೆಂಬರ್ 28, 2025

Janaspandhan News

HomeNational Newsಚುನಾವಣಾ ಪ್ರಚಾರ ವಾಹನದಲ್ಲಿ Liquor ಪತ್ತೆ ; ಲೂಟಿ ಮಾಡಿದ ಗ್ರಾಮಸ್ಥರು.
spot_img
spot_img
spot_img

ಚುನಾವಣಾ ಪ್ರಚಾರ ವಾಹನದಲ್ಲಿ Liquor ಪತ್ತೆ ; ಲೂಟಿ ಮಾಡಿದ ಗ್ರಾಮಸ್ಥರು.

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆಯ ವೇಳೆ, NDA ಬೆಂಬಲಿತ ಪ್ರಚಾರ ವಾಹನದಲ್ಲಿ ಪತ್ತೆಯಾಗಿದ್ದ 17 ಮದ್ಯ (Liquor) ದ ಪೆಟ್ಟಿಗೆಗಳನ್ನು ಗ್ರಾಮಸ್ಥರು ಹೊತ್ತೊಯ್ಯುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಹಾರದಲ್ಲಿ ಮದ್ಯಪಾನ ನಿಷೇಧಿತವಿದ್ದರೂ ಸಹ ಮತದಾರರ ಒಲಿಸಿಕೊಳ್ಳಲು ಮದ್ಯ (Liquor) ಹಂಚಲಾಗುತ್ತಿದೆ ಎಂಬ ಆರೋಪವು ಈ ಘಟನೆಯಿಂದ ಕೇಳಿ ಬರುತ್ತಿದೆ.

Attendance ಕೊರತೆಯಿಂದ ಪರೀಕ್ಷೆಗೆ ತಡೆ ಬೇಡ ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು.!

ಮಂಗಳವಾರ ಬೆಳಿಗ್ಗೆ ಗಯಾ ಜಿಲ್ಲೆ, ಗುರಾರು ಪೊಲೀಸ್ ಠಾಣೆ ವ್ಯಾಪ್ತಿಯ ರೌನಾ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಪ್ರಚಾರಕ್ಕೆ ಬಳಸಲಾಗುತ್ತಿದ್ದ ಪಿಕಪ್ ಟ್ರಕ್‌ವೊಂದು ಸ್ಥಳೀಯ ಮೋಟಾರ್‌ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಥಳೀಯರು ಪಿಕಪ್ ವಾಹನವನ್ನು ತಡೆದು ವಾಹನದಲ್ಲಿದ್ದವರ ಜೊತೆ ವಾಗ್ವಾದ ನಡೆಸಿದ್ದಾರೆ.

ಈ ವೇಳೆ ಪಿಕಪ್ ಟ್ರಕ್‌ ಪರಿಶೀಲನೆ ಮಾಡಿದಾಗ ಅದರಲ್ಲಿ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳ ಜೊತೆ ಪ್ಲಾಸ್ಟಿಕ್‌ನಿಂದ ಮುಚ್ಚಿದ 17 ಮದ್ಯ (Liquor) ದ ಪೆಟ್ಟಿಗೆಗಳು ಕಂಡುಬಂದವು. ಜನರು ವಾಹನವನ್ನು ಸುತ್ತುವರೆಯುತ್ತಿದಂತೆಯೇ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಇದೇ ವೇಳೆ ವಾಹನದಲ್ಲಿದ್ದ ಕೆಲವು ಮದ್ಯದ ಬಾಕ್ಸ್ ಗಳನ್ನು ಲೂಟಿ ಮಾಡಿದ್ದಾರೆ.

“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“

ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎನ್‌ಡಿಎ ಬೆಂಬಲಿತ ಎಚ್‌ಎಎಂ ಅಭ್ಯರ್ಥಿ ದೀಪಾ ಮಾಂಝಿ ಅವರಿಗೆ ಸೇರಿದ ಪಿಕಪ್ ಟ್ರಕ್‌ ಇದ್ದಾಗಿದೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಆಗಮಿಸಿದ ಗುರಾರು ಠಾಣಾಧಿಕಾರಿ ಅಖಿಲೇಶ್ ಕುಮಾರ್, ಪರಿಶೀಲನೆಯ ನಂತರ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಮಾಲೀಕರು, ಚಾಲಕ ಮತ್ತು ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”

ಬಿಹಾರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ಮಾಡುತ್ತಿದ್ದು, ಅದರಲ್ಲಿ ಮದ್ಯಪಾನ ನಿಷೇಧಿತವಿದ್ದರೂ ಸಹ ಮತದಾರರ ಒಲಿಸಿಕೊಳ್ಳಲು ಮದ್ಯ (Liquor) ಹಂಚಲಾಗುತ್ತಿದೆ ಎಂಬ ಆರೋಪವು ಕೇಳಿ ಬರುತ್ತಿದೆ.

ಮದ್ಯ (Liquor) ದ ಬಾಟಲ್‌ ಲೂಟಿ ಮಾಡುತ್ತಿರುವ ವಿಡಿಯೋ :

Courtesy : Kannada Prbha


ಭೀಕರ Train ಅಪಘಾತ ; ಪ್ರಯಾಣಿಕರ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ; 5 ಸಾವು, ಹಲವರು ಗಾಯ.

Train

ಜನಸ್ಪಂದನ ನ್ಯೂಸ್‌, ಬಿಲಾಸಪುರ : ಇತ್ತೀಚಿನ ದಿನಗಳಲ್ಲಿ ರಸ್ತೆ ಹಾಗೂ ರೈಲು (Train) ಅಪಘಾತಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಬಂದಿದೆ. ಅನೇಕರು ಜೀವ ಕಳೆದುಕೊಂಡು, ಹಲವರು ಗಾಯಗೊಂಡಿರುವ ಘಟನೆಗಳು ದೇಶದಾದ್ಯಂತ ಆತಂಕ ಮೂಡಿಸಿವೆ.

ಇದೀಗ ನಡೆದ ಮತ್ತೊಂದು ಭೀಕರ ಅಪಘಾತದಲ್ಲಿ ಭಾರತೀಯ ರೈಲ್ವೇಯ (68733) ಪ್ರಯಾಣಿಕರ ರೈಲು ಬಿಲಾಸಪುರ ಸಮೀಪ ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ನಡೆದಿದೆ.

ಬಿಲಾಸಪುರದಲ್ಲಿ ಭೀಕರ ರೈಲು ಅಪಘಾತ :

ಚತ್ತೀಸಗಢದ ಬಿಲಾಸಪುರ ಜಿಲ್ಲೆಯ ಲಾಲ್‌ಖಡನಾ ಪ್ರದೇಶದ ಬಳಿ ನಡೆದ ಈ ದುರಂತದಲ್ಲಿ ಪ್ರಯಾಣಿಕರ ರೈಲು (Train) ವೇಗವಾಗಿ ಸಂಚರಿಸುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಗೂಡ್ಸ್ ರೈಲಿ (Train) ಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಯಿಂದ ರೈಲಿನ ಮುಂಭಾಗದ ಬೋಗಿಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.

ಸ್ಥಳಕ್ಕೆ ಧಾವಿಸಿದ ಬಿಲಾಸಪುರ ಎಸ್‌ಪಿ ರಜನೀಶ್ ಸಿಂಗ್ ಅವರು, “ಇದುವರೆಗೆ ಐವರು ಮೃತಪಟ್ಟಿರುವುದು ದೃಢಪಟ್ಟಿದೆ. ಹಲವಾರು ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”
ಸ್ಥಳದಲ್ಲಿ ಭೀಕರ ದೃಶ್ಯ :

ರೈಲು (Train) ಅಪಘಾತದ ನಂತರ ಸ್ಥಳದಲ್ಲಿ ಶೋಕ ವಾತಾವರಣದ ಸ್ಥಿತಿ ನಿರ್ಮಾಣವಾಗಿದೆ. ಹಲವಾರು ಪ್ರಯಾಣಿಕರು ಬೋಗಿಗಳೊಳಗೆ ಸಿಲುಕಿಕೊಂಡಿದ್ದರು. ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ರಕ್ಷಣಾ ಪಡೆಗಳು ಸ್ಥಳದಲ್ಲಿ ಶ್ರಮಪಟ್ಟು ಕಾರ್ಯಾಚರಣೆ ನಡೆಸುತ್ತಿವೆ.

ಆಯಂಬುಲೆನ್ಸ್ ಹಾಗೂ ವೈದ್ಯರ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಒಂದು ಮಗುವನ್ನು ಬೋಗಿಯ ಅಡಿಯಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂಬ ವರದಿಯೂ ಬಂದಿದೆ.

ಅಪಘಾತದ ಸಾಧ್ಯ ಕಾರಣ :

ಪ್ರಾಥಮಿಕ ವರದಿಗಳ ಪ್ರಕಾರ, ಎಲೆಕ್ಟ್ರಿಕ್ ವೈಯರಿಂಗ್ ಹಾಗೂ ಸಿಗ್ನಲ್ ಸಿಸ್ಟಮ್ ವೈಫಲ್ಯ ಈ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ರೈಲ್ವೇ ಅಧಿಕಾರಿಗಳು ಈಗಾಗಲೇ ಘಟನೆಯ ತನಿಖೆ ಆರಂಭಿಸಿದ್ದು, ವಿಶೇಷ ತನಿಖಾ ತಂಡ ಸ್ಥಳಕ್ಕೆ ಧಾವಿಸಿದೆ.

ರೈಲು (Train) ಸಂಚಾರದಲ್ಲಿ ಅಡಚಣೆ :

ಈ ಅಪಘಾತದ ಪರಿಣಾಮವಾಗಿ ಬಿಲಾಸಪುರ–ಕತ್ನಿ ರೈಲು ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅನೇಕ ರೈಲು (Train) ಗಳು ರದ್ದಾಗಿದ್ದು, ಕೆಲವಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ತಾಂತ್ರಿಕ ಸಿಬ್ಬಂದಿಗಳು ಹಳಿಯನ್ನು ಶೀಘ್ರ ದುರಸ್ತಿ ಮಾಡಲು ತೊಡಗಿದ್ದಾರೆ.

ಸಹಾಯವಾಣಿ ತೆರೆದ ರೈಲ್ವೇ :

ಅಪಘಾತದ ಬೆನ್ನಲ್ಲೇ ಭಾರತೀಯ ರೈಲ್ವೇ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರು ಮತ್ತು ಅವರ ಕುಟುಂಬಗಳು ಈ ಸಂಖ್ಯೆಗಳ ಮೂಲಕ ಮಾಹಿತಿ ಪಡೆಯಬಹುದು:

  • ಬಿಲಾಸಪುರ: 9752485499, 8602007202
  • ಚಂಪಾ ಜಂಕ್ಷನ್: 808595652
  • ರಾಯಿಘಡ: 975248560
  • ಪಂದ್ರ ರಸ್ತೆ: 8294730162

ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆಗಳು ವೇಗವಾಗಿ ಮುಂದುವರಿದಿದ್ದು, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ರೈಲ್ವೇ ಇಲಾಖೆ ಈ ಘಟನೆಗೆ ಆಳವಾದ ವಿಷಾದ ವ್ಯಕ್ತಪಡಿಸಿದ್ದು, ಬಾಧಿತ ಕುಟುಂಬಗಳಿಗೆ ಪರಿಹಾರ ಘೋಷಿಸುವ ಸಾಧ್ಯತೆಗಳೂ ಇವೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments