Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಇವುಗಳನ್ನು ಹಸಿಯಾಗಿಯೇ ತಿನ್ನಿ ; ಆಮೇಲೆ ಚಮತ್ಕಾರ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತೀಯ ಅಡುಗೆ ಸಂಸ್ಕೃತಿಯಲ್ಲಿ ತರಕಾರಿಗಳಿಗೆ ವಿಶೇಷವಾದ ಸ್ಥಾನವಿದೆ. ಮಾಂಸಾಹಾರಿಗಳು ಸಹ ತರಕಾರಿಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಜನರು ಪ್ರತಿದಿನ ಉಪಹಾರಕ್ಕೆ, ಮಧ್ಯಾಹ್ನ ಊಟದ ಸಂದರ್ಭಕ್ಕೆ ಹಾಗೂ ರಾತ್ರಿಯ ಊಟಕ್ಕೆ ಒಂದಲ್ಲ ಒಂದು ವಿಧದಲ್ಲಿ ತಮಗೆ ಇಷ್ಟವಾದ ತರಕಾರಿಯನ್ನು ಬಳಕೆ ಮಾಡುತ್ತಾರೆ.

ತರಕಾರಿಗಳು ಪೌಷ್ಠಿಕಾಂಶದ ಉತ್ತಮ ಮೂಲವಾಗಿದ್ದು, ಉತ್ತಮ ಆರೋಗ್ಯಕ್ಕೆ ಅವಶ್ಯಕವಾಗಿದೆ. ತರಕಾರಿಗಳ ಸೇವನೆ ದಿನವಿಡೀ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ದೇಹವನ್ನು ಶಕ್ತಿಯುತವಾಗಿರಿಸುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ತೂಕ ಇಳಿಸುವ ಪ್ಲಾನ್‌ನಲ್ಲಿದ್ದವರಿಗೆ ಇದು ಅತ್ಯುತ್ತಮ ಆಹಾರವಾಗಿದೆ.

ಇದನ್ನು ಓದಿ : Health : ನಿಂಬೆಹಣ್ಣಿನೊಂದಿಗೆ ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ತಿನ್ನಲೇಬಾರದು.?

ಆದರೆ ಕೆಲವೊಂದು ತರಕಾರಿಗಳನ್ನು ಬೇಯಿಸಿಕೊಂಡು ತಿನ್ನುವುದಕ್ಕಿಂತ ಹೆಚ್ಚು ರುಚಿ ಇವುಗಳನ್ನು ಹಸಿಯಾಗಿ ತಿಂದಾಗಲೆ ಇರುತ್ತೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಹಸಿ ತರಕಾರಿಗಳನ್ನು ತಿನ್ನುವುದು ಉತ್ತಮ ಮಾರ್ಗವಾಗಿದೆ.

ಸೌತೆಕಾಯಿ :
ಹೆಚ್ಚಿನ ನೀರಿನಾಂಶವನ್ನು ಹೊಂದಿರುವ ಸೌತೆಕಾಯಿ ಸದಾ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಸೌತೆಕಾಯಿಯನ್ನು ಕತ್ತರಿಸಿಕೊಂಡು ಮೊಸರಿನಲ್ಲಿ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ತಿನ್ನಿರಿ.

ಸಿಹಿ ಆಲೂಗಡ್ಡೆ :
ಸಿಹಿ ಆಲೂಗಡ್ಡೆಯಲ್ಲಿ ಫೈಬರ್ ಅಂಶವು ಅಧಿಕವಾಗಿದ್ದು, ಇದು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುವುದರೊಂದಿಗೆ ಕರುಳಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣು, ಬಾದಾಮಿ, ಹಾಲಿನೊಂದಿಗೆ ಸೇರಿಸಿ ರುಚಿಕರವಾದ ಸ್ಮೂಥಿ ತಯಾರಿಸಿಕೊಳ್ಳಬಹುದು.

ಪಾಲಕ್ ಸೊಪ್ಪು :
ಹಸಿರು ಸೊಪ್ಪು ಪಾಲಕ್ ಕಬ್ಬಿಣಾಂಶವನ್ನು ಹೊಂದಿದ್ದು, ಉತ್ಕರ್ಷಣ ನಿರೋಧಕವನ್ನು ಸಹ ಇದು ಹೊಂದಿದೆ. ಪಾಲಕ್ ಸೊಪ್ಪನ್ನು ಬಳಸಿಕೊಂಡು ಇನ್ನಿತರೆ ಪದಾರ್ಥಗಳಾದ ಟೊಮೆಟೋ, ಚೆರ್ರಿ ಮತ್ತು ಚೀಸ್ ಬಳಸಿಕೊಂಡು ಪಾಲಕ್ ಸಲಾಡ್ ಮಾಡಿಕೊಳ್ಳಬಹುದು.

ಇದನ್ನು ಓದಿ : Special news : ಸಂತಾನೋತ್ಪತ್ತಿಗಾಗಿ ತಮ್ಮ ಲಿಂಗವನ್ನೇ‌ ಬದಲಾಯಿಸಿಕೊಳ್ಳುವ ಪ್ರಾಣಿಗಳಿವು..!

ಮೂಲಂಗಿ :
ಮೂಲಂಗಿ ವಿಟಮಿನ್ ಸಿ ಅಂಶವನ್ನು ಹೊಂದಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ವಿಟಮಿನ್ ಸಿ ಚರ್ಮದಲ್ಲಿನ ಕೊಲಾಜಿನ್ ಅಂಶವನ್ನು ಹೆಚ್ಚಿಸುವುದರೊಂದಿಗೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಸೌತೆಕಾಯಿ ಮತ್ತು ಮೂಲಂಗಿ ಸೇರಿಸಿಕೊಂಡು ಸಲಾಡ್ ಮಾಡಿಕೊಳ್ಳಬಹುದು.

ಕ್ಯಾರೆಟ್ :
ಕ್ಯಾರೆಟ್ ಬೆಟಾ-ಕೆರೋಟಿನ್ ಅಂಶವನ್ನು ಹೊಂದಿದ್ದು, ಕಣ್ಣಿನ ಆರೋಗ್ಯಕ್ಕೆ ಇದು ತುಂಬಾನೇ ಸಹಾಯಕವಾಗಿರುತ್ತದೆ. ಅಷ್ಟೇ ಅಲ್ಲದೆ ಕ್ಯಾರೆಟ್ ತಿನ್ನುವುದರಿಂದ ಪ್ರತಿರಕ್ಷಣಾ ವ್ಯವಸ್ಥೆ ಸಹ ಬಲಗೊಳ್ಳುತ್ತದೆ. ಕ್ಯಾರೆಟ್ ಅನ್ನು ತುರಿದುಕೊಂಡು ಅದಕ್ಕೆ ನಿಂಬೆಹಣ್ಣಿನ ರಸ, ಆಲಿವ್ ಎಣ್ಣೆ ಮತ್ತು ಚಿಟಿಕೆ ಉಪ್ಪನ್ನು ಸೇರಿಸಿಕೊಂಡು ಸಲಾಡ್ ಮಾಡಿಕೊಂಡು ತಿನ್ನಿ.

ಟೊಮೆಟೊ :
ಟೊಮೆಟೊ ಲೈಕೋಪೆನ್ ಅಂಶವನ್ನು ಹೊಂದಿದ್ದು, ಇದು ಉತ್ಕರ್ಷಣ ನಿರೋಧಕವಾಗಿದೆ. ಇದು ಅನೇಕ ಬಗೆಯ ಕ್ಯಾನ್ಸರ್ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಹೃದಯದ ಆರೋಗ್ಯವನ್ನು ಸಹ ಕಾಪಾಡಲು ಸಹಾಯ ಮಾಡುತ್ತದೆ.

ಬೀಟ್ರೂಟ್ :
ಬೀಟ್ರೂಟ್ ನೈಟ್ರೇಟ್ ಅಂಶವನ್ನು ಹೊಂದಿದ್ದು, ಇದು ಮುಖ್ಯವಾಗಿ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಇದನ್ನು ಓದಿ : ಪೊಲೀಸ್​ ಠಾಣೆ ಆವರಣದಲ್ಲಿಯೇ ಮಗನಿಂದ ಬೆಂಕಿಗಾಹುತಿಯಾದ ಹೆತ್ತ ತಾಯಿ ; ದೃಶ್ಯ CCTVಯಲ್ಲಿ ಸೆರೆ.!

ಹಸಿ ಮೆಣಸಿನಕಾಯಿ :
ಹಸಿ ಮೆಣಸಿನಕಾಯಿ ಕ್ಯಾಪ್ಸೈಸಿನ್ ಎಂಬ ಅಂಶವನ್ನು ಹೊಂದಿದ್ದು, ಇದು ಚಯಪಚಯ ಕ್ರಿಯೆಯನ್ನು ವೇಗಗೊಳಿಸುವುದರ ಜೊತೆಗೆ ದೇಹದ ತೂಕವನ್ನು ಸಹ ನಿಯಂತ್ರಿಸುತ್ತದೆ. ಅಲ್ಲದೆ ಇದು ಉರಿಯೂತ ವಿರೋಧಿ ಗುಣಗಳನ್ನು ಸಹ ಹೊಂದಿದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img