Saturday, December 21, 2024
HomeHealth and FitnessHealth : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ.!
spot_img

Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುತ್ತೀರಾ? ಹಾಗಿದ್ರೆ ಈ ಸುದ್ದಿ ಓದಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳ್ಳುಳ್ಳಿ ಭಾರತೀಯ ಪಾಕಪದ್ಧತಿಯ ಮಸಾಲೆಯ (The spice component of Indian cuisine) ಒಂದು ಭಾಗವಾಗಿದೆ. ಇದನ್ನು ತರಕಾರಿಗಳು ಮತ್ತು ದಾಲ್‌ಗಳಿಗೆ ಸೇರಿಸಲಾಗುತ್ತದೆ.

ಕೆಲವರು ಬೆಳ್ಳುಳ್ಳಿ (Garlic) ಅಂದ್ರೆ ಸಾಕು, ಅದರ ವಾಸನೆಗೆ ಮೂಗು ಮುರೀತಾರೆ. ಆದರೆ ಬೆಳ್ಳುಳ್ಳಿ ಸೇವನೆಯಿಂದ ಅನೇಕ ಅಪಾಯಕಾರಿ ಕಾಯಿಲೆಗಳನ್ನು (Dangerous diseases) ಗುಣಪಡಿಸಬಹುದು ಎಂದು ವೈಜ್ಞಾನಿಕ ಅಧ್ಯಯನಗಳು ತೋರಿಸಿವೆ.

ಇದನ್ನು ಓದಿ : ತಾಕತ್ತಿದ್ದರೆ ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕರು, ಸಚಿವರನ್ನು ವಜಾ ಮಾಡಿ ; ಸ್ವಾಮೀಜಿ.!

ಇದು ದೇಹದಲ್ಲಿ ಸಂಗ್ರಹವಾಗುವ ವಿಷವನ್ನು ತೆಗೆದುಹಾಕುವುದಲ್ಲದೆ ರಕ್ತವನ್ನು ಶುದ್ಧೀಕರಿಸಲು ಮತ್ತು ಖಿನ್ನತೆಯ ವಿರುದ್ಧ ಹೋರಾಡಲು (To purify the blood and fight depression) ಸಹಾಯ ಮಾಡುತ್ತದೆ.

ಹಾಗಾದರೆ ಬೆಳಗ್ಗೆದ್ದು ಬೆಳ್ಳುಳ್ಳಿ ತಿನ್ನೋದ್ರಿಂದ ಆರೋಗ್ಯಕ್ಕೆಷ್ಟು ಪ್ರಯೋಜನವಿದೆ ಗೊತ್ತಾ.?

ಬೆಳ್ಳುಳ್ಳಿ ಕೂದಲು ಉದುರುವುದನ್ನು (hair fall) ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ತೂಕ ನಷ್ಟಕ್ಕೆ (weight loss) ಸಹಾಯ ಮಾಡುತ್ತದೆ. ಅಲ್ಲದೇ ಬೆಳ್ಳುಳ್ಳಿ ದೇಹದ ಕೊಬ್ಬನ್ನು ಕರಗಿಸುತ್ತದೆ.

ಬೆಳ್ಳುಳ್ಳಿ ಜೀರ್ಣಕಾರಿ ರಸದ ಸ್ರವಿಸುವಿಕೆಯನ್ನು (Secretion of digestive juices) ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೇ ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ವೈರಲ್ (Anti- bacterial, anti- fungal and anti -viral) ಗುಣಗಳು ಹೇರಳವಾಗಿವೆ. ಶೀತ, ಕೆಮ್ಮು ಮತ್ತು ಜ್ವರದಂತಹ ರೋಗಗಳನ್ನು ತಡೆಯುವುದು.

ಬೆಳ್ಳುಳ್ಳಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ (Prevents the growth of cancer cells).

ಉಸಿರಾಟ ಸಂಬಂಧಿ ಸಮಸ್ಯೆಗಳನ್ನು ತಡೆಯಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

ಇದನ್ನು ಓದಿ : Awareness : ಅಪ್ರಾಪ್ತರಿಗೆ ಬೈಕ್‌ ಕೊಡತ್ತೀರಾ.? ಹಾಗಾದ್ರೆ ಈ ಸುದ್ದಿ ಓದಿ.!

ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಸಂಯುಕ್ತವು (A compound called allicin) ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಸುಕ್ಕುಗಳು (Wrinkles the skin) ಮತ್ತು ಕಲೆಗಳಂತಹ ಸಮಸ್ಯೆಗಳಿಂದ ರಕ್ಷಿಸುತ್ತದೆ.

ಬೆಳ್ಳುಳ್ಳಿ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು (To control sugar level) ಸಹಾಯ ಮಾಡುತ್ತದೆ.

ಹಿಂದಿನ ಸುದ್ದಿ : ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನುವುದಕ್ಕಿಂತ ಮುಂಚೆ ಒಮ್ಮೆ ಯೋಚಿಸಿ.!

ಜನಸ್ಪಂದನ ನ್ಯೂಸ್, ಆರೋಗ್ಯ : ಬಾಳೆಹಣ್ಣು ಎಲ್ಲ ಕಾಲದಲ್ಲಿಯೂ ಸಿಗುವಂತಹ ಹಣ್ಣು. ಪೋಷಕಾಂಶಗಳಿಂದ ಸಮೃದ್ಧವಾಗಿರುವ (Rich in nutrients) ಇದರಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ.

ಈ ಬಾಳೆಹಣ್ಣನ್ನು ನಾವು ತಿನ್ನುವುದರಿಂದ ಅನೇಕ ರೀತಿಯ ದೀರ್ಘಕಾಲದ ಕಾಯಿಲೆಗಳಿಂದ (Chronic disease) ಮುಕ್ತಿ ಪಡೆಯಬಹುದಾಗಿದೆ. ಅಲ್ಲದೇ, ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಧಿಕವಾಗಿದ್ದು, ಪ್ರತಿದಿನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ತ್ವರಿತ ಶಕ್ತಿ (Quick power) ಸಿಗುತ್ತದೆ.

ಇದನ್ನು ಓದಿ : KSFES : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಹೀಗಾಗಿ ಜಿಮ್ ಹಾಗೂ ವ್ಯಾಯಾಮ ಮಾಡುವವರು (Gym goers and exercisers) ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯಕರ ಉಪಯೋಗವಿದೆ.

ಬಾಳೆಹಣ್ಣು ಮೆಗ್ನೀಸಿಯಮ್, ವಿಟಮಿನ್ ಬಿ6, ಪೊಟ್ಯಾಸಿಯಮ್, ರಂಜಕದಂತಹ ಜೀವಸತ್ವಗಳು ಮತ್ತು ಖನಿಜಗಳ (Vitamins and minerals like magnesium, vitamin B6, potassium, phosphorus) ಮೂಲವಾಗಿದೆ ಈ ಬಾಳೆಹಣ್ಣು.

ಬೆಳಿಗ್ಗೆ ಎದ್ದು ಈ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ದೊರಕುತ್ತದೆ. ಅಲ್ಲದೇ ಸ್ನಾಯುಗಳ ಬಲ (Muscle strength) ಕೂಡ ಹೆಚ್ಚುತ್ತದೆ.

ಇದನ್ನು ಓದಿ : Health : ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ.?

ಅಲ್ಲದೇ ಚಳಿಗಾಲದಲ್ಲಿ ಶಕ್ತಿ ಪಡೆಯಲು ಉತ್ತಮ ಮೂಲವೆಂದರೆ (A good source of energy) ಅದು ಬಾಳೆಹಣ್ಣು ಎಂದು ಹೇಳಬಹುದು. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆದ್ರೆ, ಈ ಕ್ರಿಯೆಗಳು ಚಳಿಗಾಲದಲ್ಲಿ ನಿಧಾನವಾಗಬಹುದು ಎನ್ನಲಾಗಿದೆ.

ಬಾಳೆ ಹಣ್ಣಿನ ಅತಿಯಾದ ಸೇವನೆಯು ಕೆಲವರಲ್ಲಿ ಗಂಟಲು ನೋವು ಅಥವಾ ಶೀತಕ್ಕೆ (Sore throat or cold) ಕಾರಣವಾಗಬಹುದು. ಓರ್ವ ವ್ಯಕ್ತಿಯು ಶೀತಕ್ಕೆ ಸಂಬಂಧಿಸಿದ ಅಲರ್ಜಿಯನ್ನೆನಾದರೂ ಹೊಂದಿದ್ದರೆ ಅವರು ಬಾಳೆ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸುವುದು ಒಳಿತು.

ನೀವು ಚಳಿಗಾಲದಲ್ಲಿಯೂ ಸಹ ವ್ಯಾಯಾಮ ಮಾಡುತ್ತಿದ್ದರೆ ಈ ಹಣ್ಣು ನಿಮಗೆ ಬಹಳ ಉಪಯುಕ್ತವಾಗಿದೆ. ಏಕೆಂದರೆ ಇದು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ.

ಇದನ್ನು ಓದಿ : ಹಾಸ್ಟೆಲ್‌ನಲ್ಲಿ ಹುಟ್ಟುಹಬ್ಬಕ್ಕೆ ಸ್ನೇಹಿತನಿಗೆ ಚಿತ್ರಹಿಂಸೆ ; ಎಂದೂ ನೋಡಿರದ Video ವೈರಲ್.!

ನೀವು ಬಾಳೆಹಣ್ಣನ್ನು ತಿನ್ನಬೇಕು ಎಂದ್ರೆ ಅದಕ್ಕೆ ಉತ್ತಮವಾದ ಸಮಯ ಯಾವುದೆಂದರೆ ಅದು ಬೆಳಿಗ್ಗೆ. ಬಾಳೆಹಣ್ಣುಗಳನ್ನು ಮುಂಜಾನೆ ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ (Eating in the morning helps in digestion). ಆದರೆ ರಾತ್ರಿ ವೇಳೆ ತಿನ್ನುವುದನ್ನು ನಿಲ್ಲಿಸಬೇಕು. ಏಕೆಂದರೆ ಅವು ಲೋಳೆಯ ಪ್ರಮಾಣವನ್ನು ಅಧಿಕ ಮಾಡಿ, ಶೀತ ಮತ್ತು ಕೆಮ್ಮಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇನ್ನೂ ಮಧುಮೇಹಿಗಳು ಬಾಳೆಹಣ್ಣನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬಹುದಾಗಿದೆ. ಏಕೆಂದರೆ ಈ ಹಣ್ಣು ನೈಸರ್ಗಿಕ ಸಕ್ಕರೆ ಅಂಶ (Natural sugar content) ಹೊಂದಿದೆ.

ಆದರೆ ರಾತ್ರಿ ಹೊತ್ತು ಅಥವಾ ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಲು ಸುರಕ್ಷಿತವಲ್ಲ ಎಂಬುದು ಕೆಲ ಆರೋಗ್ಯ ತಜ್ಞರ ಅಭಿಪ್ರಾಯ. ಬಾಳೆಹಣ್ಣು ಒಂದು ತೂಕವಿರುವ ಹಣ್ಣಾಗಿದ್ದು, ಜೀರ್ಣಿಸಿಕೊಳ್ಳಲು ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತದೆ.

 

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments