ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಹುಡುಗರ ಹಾಸ್ಟೆಲ್‌ಗಳಲ್ಲಿ (hostels) ಮೋಜಿನ ಎಂದು ಪರಿಗಣಿಸುವುದರ ಬಗ್ಗೆ ಗಂಭೀರ ಕಳವಳ (serious concerns) ವನ್ನು ಹುಟ್ಟುಹಾಕಿದೆ. ವಿಶೇಷವಾಗಿ ಹುಟ್ಟುಹಬ್ಬದ ಆಚರಣೆಯ ಹೆಸರಿನಲ್ಲಿ ಸ್ನೇಹಿತರಿಗೆ ಈ ಚಿತ್ರಹಿಂಸೆ (torture) ನೀಡುವುದು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿಡಿಯೋವನ್ನು Instagram ಬಳಕೆದಾರರಾದ ನಿಮೀಲ್ ಎನ್ನುವವರು (@nimeeeeeel) ಪೋಸ್ಟ್ ಮಾಡಿದ್ದಾರೆ. ಅವರು 74,000 ಕ್ಕೂ ಹೆಚ್ಚು ಅನುಯಾಯಿ (followers) ಗಳನ್ನು ಹೊಂದಿದ್ದು, ಅವರು ಕಾಲೇಜು ವಿದ್ಯಾರ್ಥಿಗಳ (ಹುಡುಗರ) ಗುಂಪೊಂದು ತಮ್ಮ ಸ್ನೇಹಿತರೊಬ್ಬರ ಜನ್ಮದಿನವನ್ನು ಆಚರಿಸುತ್ತಿರುವುದನ್ನು ಗೊಂದಲ (mess) ಎಂದು ಕರೆದಿದ್ದಾರೆ.
ಇದನ್ನು ಓದಿ : ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವು ; ಭಯಾನಕ ವಿಡಿಯೋ Viral.!
ಕೇಕ್ ಮತ್ತು ನಗುವಿನೊಂದಿಗೆ ವಿಶಿಷ್ಟ (typical celebration) ಆಚರಣೆಯ ಬದಲಿಗೆ, ಹುಟ್ಟುಹಬ್ಬದ ಹುಡುಗನನ್ನು ಕ್ರೂರ ತಮಾಷೆ ಮಾಡಿದ್ದಾರೆ. ಹುಡುಗರು ಹಾಸ್ಟೆಲ್‌ನ ವಾಟರ್ ಕೂಲರ್ (hostel’s water cooler) ನಿಂದ ತೆಗೆದ ಮಂಜುಗಡ್ಡೆಯ ತಣ್ಣೀರಿನಿಂದ ಬಕೆಟ್‌ಗೆ ತುಂಬಿದರು ಮತ್ತು ಮಧ್ಯರಾತ್ರಿ (at midnight) ಯಲ್ಲಿ ಅದನ್ನು ತಮ್ಮ ಸ್ನೇಹಿತನ ಮೇಲೆ ಸುರಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ಘಟನೆಯಲ್ಲಿ ಇನ್ನಷ್ಟು ಆಘಾತಕಾರಿ ಸಂಗತಿಯೆಂದರೆ, ಹೊರಗಿನ ತಾಪಮಾನವು ಕೇವಲ 12 ಡಿಗ್ರಿ ಸೆಲ್ಸಿಯಸ್ (12 degrees Celsius) ಆಗಿದ್ದು, ತಣ್ಣಿರಿನ ಸ್ನಾನವು ಅಪಾಯಕಾರಿ (dangerous) ಯಾಗಿರುತ್ತದೆ. ಕೈಕಾಲು ಕಟ್ಟಿ, ಬಟ್ಟೆ ತೆಗೆದ ಹುಟ್ಟುಹಬ್ಬದ ಹುಡುಗ ಚಳಿ ತಡೆಯಲಾರದೆ ನಡುಗುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಹೆಪ್ಪುಗಟ್ಟುವ ನೀರಿನ ಸ್ನಾನದ (bath in freezing water) ನಂತರ, ಆತನನ್ನು ಸ್ವಲ್ಪ ಸಮಯದವರೆಗೆ ಹೊರಗೆ ಬಿಟ್ಟು ಮತ್ತೇ ಆಚರಣೆಯನ್ನು ಮುಂದುವರಿಸಲು ಹುಡುಗನನ್ನು ಒಳಗೆ ಕರೆತರುತ್ತಾರೆ.
ಇದನ್ನು ಓದಿ : ಹೆದ್ದಾರಿಗೆ ಅಪ್ಪಳಿಸಿ ಎರಡು ತುಂಡಾದ ವಿಮಾನ ; ದುರ್ಘಟನೆಯ ವಿಡಿಯೋ ವೈರಲ್.!
ಈ ಹುಚ್ಚಾಟದ ಅಗ್ನಿಪರೀಕ್ಷೆ (crazy ordeal) ಅಲ್ಲಿಗೇ ನಿಲ್ಲಲಿಲ್ಲ, ಬದಲಿಗೆ ಹುಡುಗರು ತಮ್ಮ ಸ್ನೇಹಿತನ ಹುಟ್ಟುಹಬ್ಬದ ಕೇಕ್‌ನ್ನು ಕತ್ತರಿಸಲು ಅವರು ಮಗುವಿನಂತೆ ಹುಡುಗನನ್ನು ಅಲಂಕರಿಸಲು ಬೇಬಿ ಪೌಡರ್ (Baby pouder) ಮತ್ತು ಅವನ ಕಣ್ಣುಗಳಿಗೆ ಕಾಜಲ್‌ನ್ನು ಹಚ್ಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಹುಟ್ಟುಹಬ್ಬದ ಹುಡುಗನನ್ನು ಕಂಬಳಿಯಲ್ಲಿ ಸುತ್ತಿ, ನಂತರ ಮತ್ತೆ ಹಾಸಿಗೆಯ ಮೇಲೆ ಇರಿಸಲಾಗುತ್ತದೆ. ಅಲ್ಲಿ ಸ್ನೇಹಿತರ ಗುಂಪು ಅವನನ್ನು ಮುದ್ದಿಸು (Kissing) ವುದನ್ನು ಮುಂದುವರುವುದು ವಿಡಿಯೋದಲ್ಲಿದೆ.
ಇದನ್ನು ಓದಿ : PDO ನೇಮಕಾತಿ : ಪ್ರಶ್ನೆಪತ್ರಿಕೆ ಸೀಲ್ ಓಪನ್ ಆಗಿರುವ ಫೋಟೋ ವೈರಲ್.!
ನಿರೀಕ್ಷೆಯಂತೆ, ವಿಡಿಯೋ ತ್ವರಿತವಾಗಿ ವೈರಲ್ ಆಗಿ, ಸದ್ಯ 73 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಮತ್ತು ವಿಡಿಯೋ ನೋಡಿ ನೆಟ್ಟಿಗರು ವ್ಯಾಪಕವಾದ ಪ್ರತಿಕ್ರಿಯೆ (reactions) ಗಳನ್ನು ನೀಡಿದ್ದಾರೆ. ಕೆಲವು ನೆಟ್ಟಿಗರು ಹುಡುಗರ ವರ್ತನೆಗಳಲ್ಲಿ ಹಾಸ್ಯವನ್ನು ಕಂಡುಕೊಂಡರೆ, ಅನೇಕರು ಹುಟ್ಟುಹಬ್ಬದ ಹುಡುಗನ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕಳವಳ (concerns) ವ್ಯಕ್ತಪಡಿಸಿದರು.
ವೈರಲ್ ವಿಡಿಯೋ ನೋಡಿ :
View this post on Instagram