Sunday, October 26, 2025

Janaspandhan News

HomeViral Videoತಾನು ಕುಡಿಯೋದಲ್ದೆ ನಾಯಿಗೂ ಕುಡಿಸಿದ ಭೂಪ ; ತೂರಾಡುತ್ತಾ ನಡೆದ Dog ವಿಡಿಯೋ ವೈರಲ್.!
spot_img
spot_img
spot_img

ತಾನು ಕುಡಿಯೋದಲ್ದೆ ನಾಯಿಗೂ ಕುಡಿಸಿದ ಭೂಪ ; ತೂರಾಡುತ್ತಾ ನಡೆದ Dog ವಿಡಿಯೋ ವೈರಲ್.!

- Advertisement -

ಜನಸ್ಪಂದ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನ ವಿಚಿತ್ರ ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇದೀಗ ವೈರಲ್ ಆಗಿರುವ ಒಂದು ಕ್ಲಿಪ್‌ ನೋಡಿದರೆ “ಕೋತಿ ತಾನು ಕೆಡೋದಲ್ಲದೇ ವನನ್ನೇ ಕೆಡಿಸ್ತಂತೇ” ಎಂಬ ಹಳೆಯ ಮಾತು ನಿಜವೆಂದು ಅನಿಸುತ್ತದೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಸ್ವತಃ ಕುಡಿದದ್ದಲ್ಲದೆ, ತನ್ನ ಜೊತೆಯ ನಾಯಿಗೂ (Dog) ಮದ್ಯ ಕುಡಿಸಿದಂತ ಘಟನೆ ದಾಖಲಾಗಿದೆ. ಈ ಅಸಾಧಾರಣ ದೃಶ್ಯವನ್ನು ಕಂಡ ನೆಟ್ಟಿಗರು ನಗುವುದನ್ನು ತಡೆಯಲಾಗದೆ ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಈ ವಿಡಿಯೋವನ್ನು @raghumurthy77 ಎಂಬ ಎಕ್ಸ್‌ (ಹಳೆಯ ಟ್ವಿಟರ್‌) ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ಶೀರ್ಷಿಕೆಯಲ್ಲಿ “ಇವನ್ಯಾರ್ ಗುರು ತಾನ್ ಕುಡಿಯೋದಲ್ದೆ ನಾಯಿ (Dog) ಗೂ ಕುಡುಸ್ಕೊಂಡು!” ಎಂದು ಬರೆದಿದ್ದಾರೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಕೈಯಲ್ಲಿ ಎಣ್ಣೆ ಅಥವಾ ಮದ್ಯ ತುಂಬಿದ ಕವರ್ ಹಿಡಿದುಕೊಂಡು, ತನ್ನ ನಾಯಿ (Dog) ಯೊಂದಿಗೆ ತೂರಾಡುತ್ತಾ ಹೋಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಅಕ್ಟೋಬರ್ 13 ರಂದು ಹಂಚಲ್ಪಟ್ಟ ಈ ವಿಡಿಯೋ ಈಗಾಗಲೇ 16,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಜನರ ಕಾಮೆಂಟ್‌ಗಳಿಂದ ನಗುಮಳೆ ಸುರಿಯುತ್ತಿದೆ. ಒಬ್ಬ ಬಳಕೆದಾರ “ನಿಯತ್ತು ಅಂದ್ರೆ ಇದೇ ಬ್ರದರ್” ಎಂದು ಹಾಸ್ಯಾತ್ಮಕವಾಗಿ ಬರೆದರೆ, ಮತ್ತೊಬ್ಬರು “ನೋಡೋರಿಗೂ ಚೇಷ್ಟೆ ಆಗಬಹುದು, ಆದರೆ ಇದರಲ್ಲಿ ಏನೋ ಗಿಮಿಕ್ ಇದೆ ಅನಿಸುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರ “ಕೋತಿ ತಾನು ಕೆಡೋದಲ್ಲದೇ ವನನ್ನೆಲ್ಲಾ ಕೆಡಿಸ್ತು ಅಂತಾರೆ ಹೀಗೆ ಆಯ್ತು!” ಎಂದು ಹಾಸ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಹಲವರು ನಗುವ ಇಮೋಜಿ ಹಂಚಿಕೊಂಡು ನಾಯಿ (Dog) ಯ ವಿಡಿಯೋವನ್ನು ಟ್ರೆಂಡಿಂಗ್ ವಿಷಯವನ್ನಾಗಿ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹಂಚಿಕೊಳ್ಳಲಾಗುತ್ತಿದ್ದು, ಜನರು ಅದರ ಅಸಾಮಾನ್ಯ ದೃಶ್ಯವನ್ನು ನೋಡಿ ಮನರಂಜನೆ ಪಡೆಯುತ್ತಿದ್ದಾರೆ.

ತೂರಾಡುತ್ತ ನಡೆಯುತ್ತಿರುವ ನಾಯಿ (Dog) ವಿಡಿಯೋ :


Raju : ಉತ್ತರ ಕರ್ನಾಟಕದ ಹಿರಿಯ ರಂಗ ಕಲಾವಿದ, ಹಾಸ್ಯನಟ ರಾಜು ತಾಳಿಕೋಟೆ ನಿಧನ.!

Raju

ಜನಸ್ಪಂದನ ನ್ಯೂಸ್‌, ಉಡುಪಿ : ಉತ್ತರ ಕರ್ನಾಟಕದ ಪ್ರಸಿದ್ಧ ರಂಗಭೂಮಿ ಕಲಾವಿದ ಹಾಗೂ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ರಾಜು ತಾಳಿಕೋಟೆ (Raju Talikoti) ಅವರು ಅಕ್ಟೋಬರ್ 13, 2025ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಇತ್ತೀಚಿನ ವರ್ಷಗಳಲ್ಲಿ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು.

Police ಹಲ್ಲೆಯಿಂದ 22 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಆರೋಪ ; ಸಿಸಿಟಿವಿ ದೃಶ್ಯ ವೈರಲ್‌

ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿ ತಕ್ಷಣ ಮಣಿಪಾಲ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ನಿರಂತರ ಚಿಕಿತ್ಸೆಯ ಬಳಿಕವೂ ಅವರ ಸ್ಥಿತಿ ಸುಧಾರಿಸದೆ ಇಂದು ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಜು ತಾಳಿಕೋಟೆಯವರ (Raju Talikoti) ನಿಧನದಿಂದ ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದ ಕಲಾವಿದರಲ್ಲಿ ಆಳವಾದ ದುಃಖದ ವಾತಾವರಣ ನಿರ್ಮಾಣವಾಗಿದೆ. ಅನೇಕ ಕಲಾವಿದರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್‌ ಮಸಾಲೆ Water ಕುಡಿಯಿರಿ; ಬೊಜ್ಜು, ಮಧುಮೇಹ ಸೇರಿ 5 ಕಾಯಿಲೆಗಳಿಗೆ ಪರಿಹಾರ.!
ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲಿಕ :

ರಾಜು ತಾಳಿಕೋಟೆಯವರ (Raju Talikoti) ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ. ಅವರು ಕೇವಲ ನಟನಾಗಿರದೇ, ಉತ್ತರ ಕರ್ನಾಟಕದ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲಿಕರೂ ಆಗಿದ್ದರು. ಅವರು ತಮ್ಮ ಜೀವನದ ಬಹುಭಾಗವನ್ನು ರಂಗಭೂಮಿಗೆ ಸಮರ್ಪಿಸಿ, ಹಳ್ಳಿಹಳ್ಳಿಗೆ ತೆರಳಿ ನಾಟಕಗಳ ಮೂಲಕ ಸಮಾಜದಲ್ಲಿ ನಗು ಮತ್ತು ಸಂದೇಶಗಳನ್ನು ಹಂಚಿಕೊಂಡಿದ್ದರು.

ಕುಡುಕನ ಪಾತ್ರಗಳಿಂದ ಪ್ರೇಕ್ಷಕರ ಮನ ಗೆದ್ದ ಕಲಾವಿದ Raju Talikoti :

ರಾಜು ತಾಳಿಕೋಟೆಯವರು (Raju Talikoti) ವಿಶೇಷವಾಗಿ ಕುಡುಕನ ಪಾತ್ರಗಳಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ಅವರ ವಿಶಿಷ್ಟ ದೇಹಭಾಷೆ, ಮುಖಾಭಿನಯ ಮತ್ತು ನೈಸರ್ಗಿಕ ಹಾಸ್ಯಭಾವವು ಪ್ರೇಕ್ಷಕರ ಮನಸೆಳೆಯುತ್ತಿತ್ತು.

ಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಎಂಬ ನಾಟಕಗಳು ಅವರ ಅತ್ಯಂತ ಜನಪ್ರಿಯ ಕೃತಿಗಳಾಗಿದ್ದು, ಅವುಗಳ ಆಡಿಯೋ ಕ್ಯಾಸೆಟ್‌ಗಳು ಆ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಪ್ರಸಾರಗೊಂಡು ಮನೆಮಾತಾದುವು.

ನೀರು ಕಾಯಿಸಲು Rod ಬಳಸುತ್ತೀರಾ? ಹಾಗಾದರೆ ಈ ಎಚ್ಚರಿಕೆಯ ಸುದ್ದಿ ಓದಿ.!
ಚಿತ್ರರಂಗದಲ್ಲೂ ಗುರುತಿಸಿಕೊಂಡ ಹಾಸ್ಯನಟ :

ರಂಗಭೂಮಿಯಲ್ಲಿ ಅಪಾರ ಅನುಭವ ಗಳಿಸಿದ ನಂತರ ಅವರು ಕನ್ನಡ ಚಲನಚಿತ್ರರಂಗದಲ್ಲಿಯೂ ತಮ್ಮ ಗುರುತು ಮೂಡಿಸಿದರು.

ಯೋಗರಾಜ್ ಭಟ್ ನಿರ್ದೇಶನದ ‘ಮನಸಾರೆ’ (2009) ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ರಾಜು ತಾಳಿಕೋಟೆ, ತಮ್ಮ ಹಾಸ್ಯ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದರು. ನಂತರ ಅವರು ‘ಪಂಚರಂಗಿ’, ‘ಮತ್ತೊಂದ್ ಮದುವೇನಾ’, ಮತ್ತು ‘ಮೈನಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ರಾಜು  (Raju Talikoti) ಅಭಿನಯಿಸಿದರು.

ಅವರ ಹಾಸ್ಯ ಪಾತ್ರಗಳು, ಗ್ರಾಮೀಣ ಉಚ್ಚಾರಣೆ ಮತ್ತು ನೈಸರ್ಗಿಕ ಅಭಿನಯವು ಕನ್ನಡ ಚಲನಚಿತ್ರರಂಗದಲ್ಲಿ ವಿಭಿನ್ನ ಸ್ಥಾನ ಗಳಿಸಿತು.

IPPB ನಲ್ಲಿ 348 ಹುದ್ದೆಗಳ ನೇಮಕಾತಿ ; ಇಲ್ಲಿದೆ ಸಂಪೂರ್ಣ ವಿವರ.!
ಚಿತ್ರರಂಗದ ಶೋಕದ ಅಲೆ :

ರಾಜು ತಾಳಿಕೋಟೆಯವರ (Raju Talikoti) ನಿಧನದ ಸುದ್ದಿ ತಿಳಿದ ಕೂಡಲೇ ಹಲವಾರು ಕಲಾವಿದರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿ ಮತ್ತು ಹಾಸ್ಯ ಲೋಕಕ್ಕೆ ಇದು ದೊಡ್ಡ ನಷ್ಟವೆಂದು ಅವರು ಹೇಳಿದ್ದಾರೆ. ಅವರ ಅಂತಿಮ ವಿಧಿವಿಧಾನಗಳು ತಾಳಿಕೋಟಿ ನಗರದಲ್ಲಿ ನಡೆಯಲಿವೆ ಎಂದು ಕುಟುಂಬದವರು ತಿಳಿಸಿದ್ದಾರೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments