ಜನಸ್ಪಂದನ ನ್ಯೂಸ್, ಆರೋಗ್ಯ : ಬಹಳಷ್ಟು ಜನರು ಸಾಮಾನ್ಯವಾಗಿ ಊಟದ ಬಳಿಕ ಎಲೆ ಅಡಿಕೆ ತಿನ್ನಲು ಇಷ್ಟಪಡುತ್ತಾರೆ. ಯಾಕೆಂದರೆ ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ (Help digest food) ಮಾಡುತ್ತದೆಯಂತೆ.
ಆರೋಗ್ಯ ತಜ್ಞರು (Health experts) ವೀಳ್ಯದೆಲೆಯನ್ನು (betel leaves) ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳುತ್ತಾರೆ.
ಇದನ್ನು ಓದಿ : ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ Rowdy Sheeter ಬರ್ಬರ ಹತ್ಯೆ.!
ವೀಳ್ಯದೆಲೆ ನೀರು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು :
* ಪಿತ್ತ ದೋಷಗಳನ್ನು (Bile defects) ಈ ನೀರು ನಿವಾರಿಸುತ್ತದೆ.
* ನೆಗಡಿ ಮತ್ತು ಕೆಮ್ಮಿಗೆ (cold and coughs) ವೀಳ್ಯದೆಲೆ ನೀರು ಒಳ್ಳೆಯದು.
* ತಲೆನೋವು (headache) ಕಡಿಮೆಯಾಗಲು ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯಬೇಕು.
* ಶ್ವಾಸಕೋಶದಲ್ಲಿ (lung’s) ಸಂಗ್ರಹವಾಗಿರುವ ಕಫವನ್ನು ಹೊರ ತೆಗೆಯಲು ಸಹಾಯಕ ಈ ನೀರು.
* ಉಸಿರಾಟದ ತೊಂದರೆಗಳನ್ನು (Breathing problems) ನಿವಾರಿಸುತ್ತದೆ.
* ಕೂದಲಿಗೂ ಸಹ ವೀಳ್ಯದೆಲೆ ನೀರು ಬಹಳಷ್ಟು ಉಪಯೋಗಕಾರಿಯಾಗಿದೆ. ಈ ನೀರು ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ (Darkens white hair).
ಇದನ್ನು ಓದಿ : Vitamin B Complex ಸೇರಿ ಈ 90 ಔಷಧಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್.!
ರಾತ್ರಿ ಮಲಗುವ ಮುಂಚೆ ನೀರಿನಲ್ಲಿ ವೀಳ್ಯದೆಲೆಯನ್ನು ನೆನೆಸಿಡಬೇಕು. ಬೆಳಗ್ಗೆ ಕುದಿಸಿ ಕುಡಿದರೆ ಉತ್ತಮ ರಿಸಲ್ಟ್ ಸಿಗುತ್ತದೆ. ಇದರಿಂದ ಬಿಳಿ ಕೂದಲು ಕ್ರಮೇಣವಾಗಿ ಕಪ್ಪಾಗುತ್ತವೆ ಎನ್ನಲಾಗಿದೆ. ಅಲ್ಲದೇ ಕೂದಲು ಉದುರುವಿಕೆ ಕಡಿಮೆಯಾಗಿ, ದಪ್ಪವಾಗಿ, ಉದ್ದವಾಗಿ (hair fall, thicker, longer) ಕೂದಲು ಬೆಳೆಯುತ್ತವೆ.
* ವೀಳ್ಯದೆಲೆಯ ನೀರು ಮಾಡುವ ವಿಧಾನ : 3-4 ವೀಳ್ಯದೆಲೆಗಳನ್ನು ತೊಳೆದು ಮೂರು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು (should be boiled). ಇದು ತಣ್ಣಗಾದ ನಂತರ ದಿನಕ್ಕೆ ಎರಡರಿಂದ ಮೂರು ಸಲ ಕುಡಿಯಬೇಕು.
ಹಿಂದಿನ ಸುದ್ದಿ : ವಿಟಮಿನ್ ಬಿ ಕಾಂಪ್ಲೆಕ್ಸ್ ಸೇರಿ ಈ 90 ಔಷಧಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್.!
ಜನಸ್ಪಂದನ ನ್ಯೂಸ್, ಬೆಂಗಳೂರು : ಕೇಂದ್ರದ ಆರೋಗ್ಯ ಸಚಿವಾಲಯವು (Ministry of Health) ಅಕ್ಟೋಬರ್ ತಿಂಗಳಲ್ಲಿ ದೇಶದ ವಿವಿಧೆಡೆ ಪರೀಕ್ಷೆಗೆ ಒಳಪಟ್ಟ 90 ಔಷಧಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ (Does not have standard quality) ಎಂದು ತಿಳಿಸಿದೆ.
ಇದನ್ನು ಓದಿ : ಹೆತ್ತಮ್ಮ, ಮಡದಿ, ಮಕ್ಕಳನ್ನು ಕೊಂದ ಅಪರಾಧಿಗೆ ಮರಣದಂಡನೆ ವಿಧಿಸಿದ Court.!
ಅಕ್ಟೋಬರ್ ತಿಂಗಳಿನಲ್ಲಿ ಕೇಂದ್ರದ ಔಷಧ ಪ್ರಯೋಗಾಲಯಗಳಲ್ಲಿ (laboratories) ಪರೀಕ್ಷಿಸಲಾದ 56 ಔಷಧ ಮಾದರಿಗಳು ಪ್ರಮಾಣಿತ ಗುಣಮಟ್ಟ (NSQ) ಹೊಂದಿಲ್ಲ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (Central Drug Quality Control Agency) ಪತ್ತೆ ಮಾಡಿದೆ ಎಂದು ವರದಿಯಾಗಿದೆ.
ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಸಾಫ್ಟ್ಜೆಲ್ (Vitamin B Complex and Vitamin C Softgel), ವಿಟಮಿನ್ ಸಿ ಮತ್ತು ಡಿ 3 ಮಾತ್ರೆಗಳು ಶೆಲ್ಕಾಲ್ (D3 Tablets Shellcol), ಅಧಿಕ ರಕ್ತದೊತ್ತಡ ಔಷಧ ಟೆಲ್ಮಿಸಾರ್ಟನ್, ಆಂಟಾಸಿಡ್ ಪ್ಯಾನ್ -ಡಿ (Antacid Pan- D), ಪ್ಯಾರೆಸಿಟಮಾಲ್ ಐಪಿ 500 ಮಿಗ್ರಾಂ, ಮಧುಮೇಹ ಔಷಧ ಗ್ಲಿಮೆಪಿರೈಡ್ (diabetes drug glimepiride) ಮುಂತಾದ ಔಷಧಿಗಳ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಈ ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ (failed) ಎಂದು ಘೋಷಿಸಲಾಗಿದೆ.
ಇದನ್ನು ಓದಿ : Video : ಬೇರೊಬ್ಬನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿ ; ಗಿಪ್ಟ್ ಕೊಟ್ಟ ಸ್ಕೂಟಿ ವಾಪಸ್ ಕಿತ್ತುಕೊಂಡ ಬಾಯ್‌ಫ್ರೆಂಡ್.!
ಕೇಂದ್ರದ ಆರೋಗ್ಯ ಸಚಿವಾಲಯವು, ರಾಜ್ಯ ಔಷಧ ನಿಯಂತ್ರಕರು (State drug regulators) ಪರೀಕ್ಷಿಸಿದ 34 ಔಷಧಿ ಮಾದರಿಗಳು ಸಹ ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂದು ತಿಳಿಸಿದೆ.
ಇನ್ನೂ ಬಿಹಾರ ಔಷಧ ನಿಯಂತ್ರಣ ಪ್ರಾಧಿಕಾರವು ನಡೆಸಿದ ಪರೀಕ್ಷೆಯಲ್ಲಿ 3 ಔಷಧಿಗಳು ನಕಲಿ ಎಂದು ಗುರುತಿಸಿದೆ. ಅನಧಿಕೃತ ಉತ್ಪಾದಕರು (Unauthorized producers) ಮತ್ತೊಂದು ಕಂಪನಿಯ ಬ್ರ್ಯಾಂಡ್ ಅನ್ನು ಬಳಸಿಕೊಂಡು ಈ ಔಷಧಗಳನ್ನು ತಯಾರಿಸಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಇನ್ನೂ ಈ ಬಗ್ಗೆ ತನಿಖೆ ಆರಂಭಗೊಂಡಿದೆ.
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
ನಕಲಿ ಔಷಧಗಳನ್ನು ಗುರುತಿಸಿ, ಮಾರುಕಟ್ಟೆಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯಗಳ ಔಷಧ ನಿಯಂತ್ರಣ ಪ್ರಾಧಿಕಾರಗಳ ಜೊತೆ ನಕಲಿ ಮತ್ತು ಪ್ರಮಾಣಿತ ಗುಣಮಟ್ಟವಿಲ್ಲದ (Substandard) ಔಷಧಗಳ ಪತ್ತೆ ಮಾಡುವ ಕಾರ್ಯವನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.
ಇನ್ನೂ ಒಂದು ಅಥವಾ ಎರಡು ಗುಣಮಟ್ಟ ಮಾನದಂಡಗಳಲ್ಲಿ ವಿಫಲವಾದ ಆಧಾರದ ಮೇಲೆ ಅಳೆಯಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.