ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ (social media) ಪ್ರೇಮಿಗಳ ಹತ್ತು ಹಲವಾರು ಘಟನೆಗಳು ವೈರಲ್ ಆಗುತ್ತಿರುತ್ತವೆ. ಲವ್ ಪ್ರಪೋಸ್, ಪ್ರೇಮಿಗಳ ಹಗ್ಗಿಂಗ್, ಕಿಸ್ಸಿಂಗ್, ಲವರ್ ಇನ್ನೊಬ್ಬರ ಜೊತೆ ಸುತ್ತಾಡುತ್ತಿರುವುದನ್ನು ಕಂಡು ಪ್ರೇಮಿ ಗಲಾಟೆ ಮಾಡುತ್ತಿರುವ ಹೀಗೆ ಹಲವು ವಿಡಿಯೋಗಳು ಶೇರ್ ಆಗುತ್ತಿರುತ್ತವೆ.
ಸದ್ಯ ಯುವತಿಯೊಬ್ಬಳು ತನ್ನ ಪ್ರೇಮಿಗೆ ಗೊತ್ತಾಗದಂತೆ ಬೇರೊಬ್ಬ ಹುಡುಗನ ಜೊತೆ ಸುತ್ತಾಡುವಾಗ (walking around) ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದ್ದು, ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Shocking Incident : ಹೃದಯಾಘಾತಕ್ಕೆ ಬಲಿಯಾದ 10 ವರ್ಷದ ಬಾಲಕಿ.!
ಗರ್ಲ್‌ಫ್ರೆಂಡ್ ಮೋಸದಾಟ (Fraud) ತಿಳಿದ ಆ ಯುವಕ ಆಕೆಯನ್ನು ನಡು ರಸ್ತೆಯಲ್ಲಿಯೇ ನಿಲ್ಲಿಸಿ, ತಾನು ಆಕೆಗೆ ಗಿಫ್ಟ್ ಕೊಟ್ಟ ಸ್ಕೂಟಿಯನ್ನು ವಾಪಸ್ ಪಡೆದಿದ್ದಾನೆ (Got the scooty back).
ಇವರಿಬ್ಬರೂ ಆರು ವರ್ಷಗಳಿಂದ ಪ್ರೀತಿಸುತ್ತಿದ್ದು (In love for six years), ಆದರೆ ಯುವತಿ ಲವರ್ ಗೆ ಮೋಸ ಮಾಡಿ ಬೇರೊಬ್ಬ ಹುಡುಗನ ಜೊತೆ ಸ್ಕೂಟಿಯಲ್ಲಿ ಸುತ್ತಾಟ ನಡೆಸಿದ್ದಳು.
ಈ ವೇಳೆ ಆಕೆ ಬಾಯ್‌ಫ್ರೆಂಡ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಇದರಿಂದ ಕೋಪಗೊಂಡ ಗೆಳೆಯ ಆಕೆಗೆ ಬೈದು (scolding), ಸ್ಕೂಟಿಯಿಂದ ಕೆಳಗಿಳಿಯುವಂತೆ ಹೇಳಿದ್ದಾನೆ. ಬಳಿಕ ಸ್ಕೂಟಿಯನ್ನು ಆಕೆಯಿಂದ ಕಿತ್ತುಕೊಂಡು (Taking the scooty from her) ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : Special news : ಈ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರು ಉತ್ತಮರಂತೆ.!
ಎಕ್ಸ್ ಖಾತೆಯಲ್ಲಿ ಶೋನಿ ಕಪೂರ್ (ShoneeKapoor) ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಯುವಕ ತಾನೂ ಲವ್ ಮಾಡುತ್ತಿರುವ ಗರ್ಲ್‌ಫ್ರೆಂಡ್ ಬೇರೊಬ್ಬ ಯುವಕನ ಜೊತೆ ಸುತ್ತಾಡುತ್ತಿರುವುದನ್ನು ಕಂಡು ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿರುವ ದೃಶ್ಯವನ್ನು ನೋಡಬಹುದು.
ಆಕೆಯ ಸ್ಕೂಟಿಯನ್ನು ಅಡ್ಡಗಟ್ಟಿದ (obstructed) ಗೆಳೆಯ ಕೀ ಕಿತ್ತುಕೊಂಡು ಗಾಡಿಯಿಂದ ಆಕೆಯನ್ನು ಕೆಳಗಿಳಿಸಿ, ನಾನು ನಿನಗೆ ಕೊಟ್ಟ ಗಿಫ್ಟ್ (The gift I gave you) ಎಂದು ರಂಪಾಟ ನಡೆಸಿ, ತಾನು ಯುವತಿಗೆ ಕೊಟ್ಟ ಸ್ಕೂಟಿಯನ್ನು ಆಕೆಯಿಂದ ಕಿತ್ತುಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
ವೈರಲ್ ಆದ ವಿಡಿಯೋ ಇಲ್ಲಿದೆ :
Boyfriend catches girlfriend #cheating and takes back the scooty that he gifted her. pic.twitter.com/wa31lZHCNZ
— ShoneeKapoor (@ShoneeKapoor) November 18, 2024
ಹಿಂದಿನ ಸುದ್ದಿ : ಈ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರು ಉತ್ತಮರಂತೆ.!
ಜನಸ್ಪಂದನ ನ್ಯೂಸ್, ಆರೋಗ್ಯ : ಇತ್ತೀಚಿಗೆ ನಡೆಸಿದ ಅಧ್ಯಯನವೊಂದು ಮಹಿಳೆಯರಿಗಿಂತ ಪುರುಷರು ಹೆಚ್ಚು ನಿದ್ದೆ ಮಾಡುತ್ತಾರೆ (Men sleep more than women) ಎಂದು ಬಹಿರಂಗ ಪಡಿಸಿದೆ. ಪುರುಷರ ಮತ್ತು ಮಹಿಳೆಯರ ನಿದ್ರೆಯ ಮಾದರಿಗಳನ್ನು (Sleep patterns) ಗಮನಿಸಿದ್ದು, ಇದರಲ್ಲಿ ಹಲವು ವ್ಯತ್ಯಾಸಗಳನ್ನು ಈ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ (Researchers found in the study).
ಯಾಕೆ ಮಹಿಳೆಯರು ಪುರುಷರಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ?
ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು
ನಿದ್ರೆಯು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ (main objective of the research is). ಪುರುಷರು ಮತ್ತು ಮಹಿಳೆಯರಲ್ಲಿ ನಿದ್ರೆಯ ಬಗ್ಗೆ ಸಂಶೋಧನೆ ನಡೆಸಲಾಗಿದೆ.
ಅಲ್ಟ್ರಾ- ಸೆನ್ಸಿಟಿವ್ ಸೆನ್ಸರ್ ಗಳನ್ನು (Ultra- sensitive sensors) ಈ ಅಧ್ಯಯನದಲ್ಲಿ ಬಳಸಲಾಗಿದ್ದು, ವಿಶೇಷ ಪಂಜರಗಳಲ್ಲಿ 267 ಇಲಿಗಳ ಮೇಲೆ ಈ ಸಂಶೋಧನೆ ನಡೆಸಲಾಯಿತು. ಪೂರ್ತಿ ದಿನ ಅಥವಾ 24 ಗಂಟೆಗಳಲ್ಲಿ, ಗಂಡು ಇಲಿಗಳು (Male rats) ಸುಮಾರು 670 ನಿಮಿಷಗಳ ಕಾಲ ನಿದ್ರಿಸಿದವು. ಆದರೆ ಹೆಣ್ಣು ಇಲಿಗಳು (female rats) 1 ಗಂಟೆಗಿಂತಲೂ ಕಡಿಮೆ ಸಮಯ ಮಲಗಿರುವುದನ್ನು ಸಂಶೋಧಕರು ಕಂಡುಕೊಂಡರು.
ಇದನ್ನು ಓದಿ : ನೋ ಕೇಬಲ್, ನೋ ಸೆಟ್ಟಾಪ್ ಬಾಕ್ಸ್, ; ಉಚಿತ 500 ಚಾನೆಲ್ ಟಿವಿ ಸರ್ವೀಸ್ BSNL ನಿಂದ.!
ಮಹಿಳೆಯರಲ್ಲಿ ಹಾರ್ಮೋನುಗಳು ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತವೆ (Hormones in women change from month to month). ಹೀಗಾಗಿ ಮಹಿಳೆಯರು ನಿದ್ರೆಯನ್ನು ಸರಿಯಾಗಿ ಮಾಡುವುದಿಲ್ಲ. ಇದರಿಂದಾಗಿ ಅತಿಯಾದ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ ಎಂದು ಸಂಶೋಧನೆಯು ತನ್ನ ವರದಿಯಲ್ಲಿ ತಿಳಿಸಿದೆ.
ಋತುಚಕ್ರದ ವೇಳೆ ಮಹಿಳೆಯರು ನಿದ್ರೆಗೆ ಸಂಬಂಧಿಸಿದಂತೆ ಅನೇಕ ರೀತಿಯ ತೊಂದರೆಯನ್ನು ಅನುಭವಿಸುತ್ತಾರೆ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ಸಮಯದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳು ನಿದ್ರೆಗೆ ಭಂಗ ತರಬಹುದು.
ಇದನ್ನು ಓದಿ : Special news : ಯಾವುದೇ ಪ್ರಯೋಗಗಳನ್ನು ಮನುಷ್ಯರಿಗಿಂತ ಮುಂಚೆ ಇಲಿಗಳ ಮೇಲೆ ಮಾಡುವುದೇಕೆ.?
ಈ ಋತು ಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ಹೊಟ್ಟೆನೋವು, ಸೆಳೆತ ಮತ್ತು ಬೆವರುವಿಕೆಯಂತಹ (Abdominal pain, cramps and sweating) ಕೆಲವು ಅಹಿತಕರ ದೈಹಿಕ ರೋಗ ಲಕ್ಷಣಗಳನ್ನು ಅನುಭವಿಸುತ್ತಾರೆ. ಈ ಅಹಿತಕರ ದೈಹಿಕ ರೋಗ ಲಕ್ಷಣಗಳ ಕಾರಣಗಳಿಗಾಗಿ, ಮಹಿಳೆಯರು ಜೀವನದ ಈ ಹಂತಗಳಲ್ಲಿ ನಿದ್ರಾಹೀನತೆ, ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್, ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾದಂತಹ ಕೆಲವು ನಿದ್ರೆಯ ಅಸ್ವಸ್ಥತೆಗಳಿಂದ (from sleep disorders) ಬಳಲುತ್ತಾರೆ ಎಂದು ಸಂಶೋಧನೆಯು ತಿಳಿಸಿದೆ.