ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು (5th Additional District and Sessions Court, Mysore), ತನ್ನ ಹೆತ್ತ ತಾಯಿ, ಮಡದಿ ಮತ್ತು ಮಕ್ಕಳನ್ನು ಕೊಂದ ಅಪರಾಧಿಗೆ ಮರಣ ದಂಡನೆ (death penalty) ವಿಧಿಸಿ ತೀರ್ಪು ನೀಡಿದೆ.
ಸರಗೂರು ಪೊಲೀಸ್ ಠಾಣಾ (Saraguru Police Station) ವ್ಯಾಪ್ತಿಯಲ್ಲಿ 2021ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (Charge List) ಸಲ್ಲಿಸಿದ್ದರು.
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
ಪ್ರಕರಣದ ವಿವರ :
ಶಿಕ್ಷೆಗೊಳಗಾದ ಅಪರಾಧಿ (A convicted felon) ಮಣಿಕಂಠಸ್ವಾಮಿ ಎಂದು ತಿಳಿದು ಬಂದಿದೆ. ಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿಯಾದ ಮಣಿಕಂಠಸ್ವಾಮಿ ಅಲಿಯಾಸ್ ಕುಂಟ ವಿಶಿಷ್ಟ ಚೇತನನಾಗಿದ್ದು, ಈತ 2014ರಲ್ಲಿ ಮದುವೆಯಾಗಿದ್ದ (marriage). ದಂಪತಿಗೆ 4 ವರ್ಷದ ಮತ್ತು ಒಂದೂವರೆ ವರ್ಷದ ಇಬ್ಬರು ಗಂಡು ಮಕ್ಕಳಿದ್ದು, ಈತನ ಹೆಂಡತಿ 9 ತಿಂಗಳ ಗರ್ಭಿಣಿಯಾಗಿದ್ದಳು (pregnant).
ಆರೋಪಿ ಮಣಿಕಂಠಸ್ವಾಮಿ ಪತ್ನಿ ಮೇಲೆ ಸಂಶಯಗೊಂಡು (Suspicious) ಆಗಾಗ ಜಗಳ ಮಾಡುತ್ತಿದ್ದ. ಆತನಿಗೆ ಸಮಾಧಾನ ಹೇಳುತ್ತಿದ್ದ ತಾಯಿ ಜೊತೆಗೂ ಜಗಳ ಮಾಡುತ್ತಿದ್ದ.
2021ರ ಏ. 28ರಂದು ಸಂಜೆ ಮಣಿಕಂಠಸ್ವಾಮಿಯು ತನ್ನ ಹೆಂಡತಿಯ ಶೀಲವನ್ನು ಶಂಕಿಸಿ ಆಕೆ ಮತ್ತು ತಾಯಿಯೊಂದಿಗೆ ಗಲಾಟೆ ಮಾಡಿದ್ದ. ಬೆಳಿಗ್ಗೆ ಜಾವ 4ಗಂಟೆ ವೇಳೆ ಎಲ್ಲರೂ ಮಲಗಿದ್ದ ಸಮಯದಲ್ಲಿ ತಾನು ನಡೆದಾಡಲು ಉಪಯೋಗಿಸುತ್ತಿದ್ದ ಅಂಗವಿಕಲರ ಸಾಧನವಾದ ಕಬ್ಬಿಣದ ಊರುಗೋಲಿನಿಂದ (iron crutch) ತಾಯಿ, ಹೆಂಡತಿ, ಓರ್ವ ಮಗನನ್ನು ಹೊಡೆದು ಕೊಂದಿದ್ದ. ಬಳಿಕ ಇನ್ನೋರ್ವ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಅಲ್ಲದೇ ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣನಾಗಿದ್ದ ಈ ಪಾಪಿ.
ಇದನ್ನು ಓದಿ : Video : ಬೇರೊಬ್ಬನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿ ; ಗಿಪ್ಟ್ ಕೊಟ್ಟ ಸ್ಕೂಟಿ ವಾಪಸ್ ಕಿತ್ತುಕೊಂಡ ಬಾಯ್‌ಫ್ರೆಂಡ್.!
ಇನ್ನೂ ಘಟನೆಯ ಬಗ್ಗೆ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಯ ವಿರುದ್ಧ ಆಪಾದಿಸಲಾದ ಆರೋಪವು ಸಾಬೀತಾದ ಹಿನ್ನೆಲೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದಿನ ಸುದ್ದಿ : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!
ಜನಸ್ಪಂದನ ನ್ಯೂಸ್, ಆರೋಗ್ಯ : ಈ ಚಳಿಗಾಲದಲ್ಲಿ ಎಲೆಕೋಸು, ಹೂಕೋಸು (cabbage, Cauliflower) ಮುಂತಾದ ತರಕಾರಿಗಳು ಹೆಚ್ಚು ಸಿಗುತ್ತವೆ. ಏಕೆಂದರೆ ಈ ತರಕಾರಿಗಳು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಪೋಷಿಸುವುದಲ್ಲದೆ ಶೀತದಿಂದ ರಕ್ಷಿಸುತ್ತವೆ (Protects from cold).
ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು
ಆದರೆ ಇಂತಹ ತರಕಾರಿಗಳನ್ನು ತಿನ್ನುವಾಗ ಜಾಗರೂಕತೆ (Vigilance) ಅವಶ್ಯಕ. ಅಜಾಗರೂಕರಾಗಿದ್ದರೆ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ (negative effect) ಬೀರಬಹುದು. ಅದರಲ್ಲೂ ಎಲೆಕೋಸು ತಿನ್ನುವುದರಿಂದ ನಿಮ್ಮ ಮೆದುಳಿಗೆ ತೀವ್ರ ಹಾನಿಯನ್ನುಂಟು (Severe brain damage) ಮಾಡುತ್ತದೆ.
ಆರೋಗ್ಯ ತಜ್ಞರು ಮತ್ತು ಅನೇಕ ವೈದ್ಯಕೀಯ ವರದಿಗಳು ಎಲೆಕೋಸಿನಲ್ಲಿ ಕಂಡುಬರುವ ಹುಳುಗಳ ಬಗ್ಗೆ ಜನರಿಗೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ. ಈ ಹುಳು (worm) ಎಲೆಕೋಸು ಸೇವಿಸುವ ವ್ಯಕ್ತಿಯ ದೇಹಕ್ಕೆ ಸೇರಿ ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ ಎನ್ನಲಾಗಿದೆ.
ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!
ನಿಮಗೆ ಗೊತ್ತಿರುವ ಹಾಗೆ ಎಲೆಕೋಸು ನೆಲದ ಮೇಲೆ ಬೆಳೆಯುವ ತರಕಾರಿ. ಮಣ್ಣಿನಲ್ಲಿ ಇರುವ ಟೇನಿಯಾ ಸೋಲಿಯಮ್ (Taenia solium) ಎಂಬ ಕೀಟಗಳು ಈ ತರಕಾರಿಯ ಸಂಪರ್ಕಕ್ಕೆ ಬರುತ್ತವೆ.
ಈ ಕೀಟಗಳ ಮೊಟ್ಟೆಗಳು ಎಲೆಕೋಸಿಗೆ ಅಂಟಿಕೊಳ್ಳುತ್ತವೆ. ನೀವು ಹಲವಾರು ಬಾರಿ ನೀರಿನಿಂದ ಸ್ವಚ್ಛಗೊಳಿಸಿದ ಬಳಿಕವೂ ತರಕಾರಿಗೆ ಅಂಟಿಕೊಂಡಿರುತ್ತವೆ (Stick to it). ಈ ಕೀಟಗಳನ್ನು ಟೇಪ್ ವರ್ಮ್ ಎಂದೂ ಸಹ ಕರೆಯಲಾಗುತ್ತದೆ.
ಇದನ್ನು ಓದಿ : ಚಳಿಗಾಲದಲ್ಲಿ Brain ಸ್ಟ್ರೋಕ್ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?
ಈ ಹುಳು ತೆಳ್ಳಗಿನ ದಾರದ ರೀತಿಯ ಆಕಾರದಲ್ಲಿರುತ್ತದೆ (Thin threadlike shape), ಎಲೆಕೋಸಿನ ಪದರಗಳ ನಡುವೆ ಈ ಹುಳು ಅಡಗಿರುತ್ತದೆ. ತರಕಾರಿ ಚೆನ್ನಾಗಿ ಬೇಯಿಸಿದ ನಂತರವೂ ಈ ಹುಳು ಜೀವಂತವಾಗಿರುತ್ತದೆ ಎನ್ನಲಾಗಿದೆ. ಇಂತಹ ತರಕಾರಿಯನ್ನು ತಿನ್ನುವುದರಿಂದ ನಮ್ಮ ದೇಹದೊಳಗೆ ಈ ಹುಳು ಸೇರಿಕೊಂಡು ಮೆದುಳಿನಲ್ಲಿ ಊತವನ್ನು ಹೆಚ್ಚಿಸಬಹುದು (Increase in swelling in the brain). ಇದರಿಂದ ವ್ಯಕ್ತಿಯ ಮೆದುಳಿನಲ್ಲಿನ ನರಗಳು ಸಿಡಿಯಬಹುದು (Nerves can explode). ಈ ಸ್ಥಿತಿಯನ್ನು ನ್ಯೂರೋಸಿಸ್ಟಿಸರ್ಕೋಸಿಸ್ ಎಂದು ಕರೆಯುತ್ತಾರೆ.
ಎಲೆಕೋಸು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ.?
ಎಲೆಕೋಸನ್ನು ಸ್ವಚ್ಛಗೊಳಿಸುವಾಗ ಅದರ ಮೇಲಿನ ಮಣ್ಣು ಹಾಗೂ ಒಣಗಿದ ಪದರಗಳನ್ನು (dried flakes) ತೆಗೆದು ಹಾಕಬೇಕು. ಅಲ್ಲದೇ ಎಲೆಕೋಸಿನ ಪ್ರತಿ ಪದರವನ್ನು ಪ್ರತ್ಯೇಕಿಸಬೇಕು (Separate each layer). ಒಂದು ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರನ್ನು (lukewarm water) ತೆಗೆದುಕೊಂಡು ಅದರಲ್ಲಿ 3-4 ಚಮಚ ಉಪ್ಪನ್ನು ಸೇರಿಸಬೇಕು. ಎಲೆಕೋಸಿನ ಎಲ್ಲಾ ಪದರಗಳನ್ನು ನೀರಿನಲ್ಲಿ ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಬೇಕಾಗುತ್ತದೆ (Soaked). ಬಳಿಕ ತರಕಾರಿಯನ್ನು ತಣ್ಣನೆಯ ನೀರಿನಲ್ಲಿ (cold water) 2-3 ಸಲ ಚೆನ್ನಾಗಿ ತೊಳೆಯಿರಿ. ನಂತರ ಚೆನ್ನಾಗಿ ಉಜ್ಜುವ ಮೂಲಕ ಎಲೆಕೋಸನ್ನು ಸ್ವಚ್ಛಗೊಳಿಸಿರಿ. ಈಗ ಜಾಲರಿಯ ಪಾತ್ರೆಯಲ್ಲಿ ಈ ತರಕಾರಿಯನ್ನು ಸ್ವಲ್ಪ ಸಮಯದವರೆಗೆ ಇರಿಸಬೇಕು. ಎಲ್ಲಾ ನೀರು ಖಾಲಿಯಾದ (empty) ನಂತರ, ನೀವು ತರಕಾರಿಯನ್ನು ಕತ್ತರಿಸಿ ಅಡುಗೆ ಮಾಡಬಹುದು.