Tuesday, September 17, 2024
spot_img
spot_img
spot_img
spot_img
spot_img
spot_img
spot_img

Health : ಈ 10 ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಸರಿಯಾದ ವೇಳೆಗೆ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಕೆಲವು ಮುನ್ನೆಚ್ಚರಿಕೆ ವಹಿಸಬೇಕು.

ಅತಿಯಾದರೆ ಅಮೃತವು ವಿಷ ಎನ್ನುವ ಗಾದೆ ಮಾತಿನಂತೆ ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ಈ ಹತ್ತು ಆಹಾರ ಪದಾರ್ಥಗಳನ್ನು ಅತಿಯಾಗಿ ಅಥವಾ ಹೆಚ್ಚು ಸೇವಿಸದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ.

ಹಾಗಾದರೆ ಆ ಹತ್ತು ಆಹಾರ ಪದಾರ್ಥಗಳು ಯಾವುವು ಅಂತ ತಿಳಿಯೋಣ

ಇದನ್ನು ಓದಿ : ಅಪ್ಪನನ್ನೇ ಬಂಧಿಸುವಂತೆ ಕಂಪ್ಲೆಂಟ್‌ ಕೊಟ್ಟ 5 ವರ್ಷದ ಮಗ ; ಅಂತ ಕಾರಣವಾದ್ರು ಏನು ಗೊತ್ತೇ.?

* ಉಪ್ಪಿಗಿಂತ ರುಚಿಯಿಲ್ಲ ಎಂದು ಉಪ್ಪನ್ನು ಹೆಚ್ಚು ಸೇವಿಸಿದರೆ ಅದರಿಂದ ಅನಾರೋಗ್ಯವೇ ಜಾಸ್ತಿ. ಉಪ್ಪಿನ ಅತಿಯಾದ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯ ನಾಳೀಯ ಸಮಸ್ಯೆಗಳಿಗೆ ಕಾರಣವಾಗಬಹುದು.

* ಆಲೂಗಡ್ಡೆ ಚಿಪ್ಸ್ ನಂತಹ ಹಾನಿಕಾರಕ ತಿಂಡಿಗಳನ್ನು ಅತಿಯಾಗಿ ಸೇವಿಸುವುದರಿಂದ ಹೆಚ್ಚಿನ ಮಟ್ಟದ ಕೊಬ್ಬಿನ ಅಂಶದಿಂದಾಗಿ ನಮ್ಮ ದೇಹದಲ್ಲಿ ಅನೇಕ ತೊಂದರೆಗಳು ಉಂಟಾಗಲು ಕಾರಣವಾಗಬಹುದು.

* ಬೆಳಿಗ್ಗೆ ಎದ್ದು ಕುಡಿಯುವ ಕಾಫಿಯನ್ನು ಪದೇ ಪದೇ ಸೇವಿಸಬಾರದು ಎಂದು WHO ತಿಳಿಸಿದೆ. ಕಾಫಿಯಲ್ಲಿ ಕೆಫೀನ್ ಅಧಿಕವಾಗಿರುತ್ತದೆ. ಇದು ತಲೆನೋವು, ಖಿನ್ನತೆ, ನಿದ್ರಾಹೀನತೆ ಮತ್ತು ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಕಾಫಿಯನ್ನು ಸಹ ಮಿತಿಯಾಗಿ ತೆಗೆದುಕೊಳ್ಳಬೇಕು.

ಇದನ್ನು ಓದಿ : ವಿದ್ಯುತ್‌ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!

* ಕರಿದ ಆಹಾರಗಳು ಕ್ಯಾಲೋರಿಗಳು, ಉಪ್ಪು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ಇದರಿಂದ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು.

* ತಾಳೆ ಎಣ್ಣೆ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಧಿಕ ಕೊಲೆಸ್ಟ್ರಾಲ್ ದೀರ್ಘಕಾಲೀನ ಸಮಸ್ಯೆಗಳನ್ನು ಉಂಟುಮಾಡಬಹುದು.

* ಪಿಜ್ಜಾ ಮತ್ತು ಬರ್ಗರ್ ಗಳನ್ನು ಸಹ ಹೆಚ್ಚು ತಿನ್ನುವುದನ್ನು ತಪ್ಪಿಸಬೇಕು. ಅಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

* ಚೀಸ್ ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ಹೃದಯದ ಸಮಸ್ಯೆಗಳು ಉಂಟಾಗಬಹುದು. ಇದು ಬೊಜ್ಜಿಗೆ ಕಾರಣವಾಗುವುದರಿಂದ ಇವುಗಳನ್ನು ತಪ್ಪಿಸಬೇಕು.

ಇದನ್ನು ಓದಿ : Prostitution : Spa ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ; ಇಬ್ಬರು ಯುವತಿಯರ ರಕ್ಷಣೆ.!

* ಸಕ್ಕರೆ ಬೊಜ್ಜಿಗೆ ಕಾರಣವಾಗಬಹುದು. ಅತಿಯಾದ ಸಕ್ಕರೆಯನ್ನು ಬಳಸುವುದರಿಂದ ಒತ್ತಡ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಅಜೀರ್ಣ ಸಮಸ್ಯೆಗಳು ಉಂಟಾಗಬಹುದು. ಸಕ್ಕರೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿಲ್ಲ. ಸ್ವಲ್ಪ ತೆಗೆದುಕೊಂಡರೆ ಸಾಕು.

* ಪಾಸ್ತಾ ಮತ್ತು ಬ್ರೆಡ್ ನಲ್ಲಿರುವ ಪದಾರ್ಥಗಳು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಅವು ಇನ್ಸುಲಿನ್ ಮಟ್ಟವನ್ನು ಸಹ ಹೆಚ್ಚಿಸುತ್ತವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img