Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಚಹಾ ಕುಡಿದರೆ ತಲೆನೋವು ಕಡಿಮೆಯಾಗುವುದೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಟೀ ಅಥವಾ ಚಹಾ ಸೇವನೆ ಮಾಡುವ ಸಂದರ್ಭದಲ್ಲಿ ಕೆಲವು ಆಹಾರಗಳನ್ನು ಸೇವನೆ ಮಾಡಿದರೆ, ಆಗ ಅದರಿಂದ ವ್ಯತಿರಿಕ್ತ ಪರಿಣಾಮ ಬೀರುವುದು. ಹೀಗಾಗಿ ಇದರ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

ಇದನ್ನು ಓದಿ : Lokayukta trap : ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ..!

ಬಹಳಷ್ಟು ಜನರು ಚಹಾ ಇಲ್ಲದಿದ್ದರೆ ತಲೆನೋವು ಎಂದು ಗೊಣಗುತ್ತಾರೆ. ಕೆಲವರಿಗೆ ಮನೆಯಲ್ಲಿ ಮಾಡಿದ ಹದವಾದ ಚಹವೇ ಬೇಕೆಂದಿಲ್ಲ, ರಸ್ತೆ ಬದಿಯ ಗೂಡಂಗಡಿಯಲ್ಲಿನ ಬಿಸಿ ಚಹಾ ಆದರೂ ಸರಿ, ಅಂತೂ ಟೀ ಬೇಕು.

ವಾತಾವರಣ 45 ಡಿಗ್ರಿ ಸೆ. ನಷ್ಟು ಕುದಿಯುತ್ತಿದ್ದರೂ, ಚಹಾ ಪ್ರಿಯರು ಬಿಸಿ ಚಹಾ ಇರಲೇಬೇಕು. ಆದರೆ ಚಹಾ ಕುಡಿಯದಿರುವುದಕ್ಕೇ ತಲೆ ನೋಯುತ್ತಿದೆ ಎಂಬ ಅಪವಾದ ಎಷ್ಟು ಸರಿ? ತಲೆನೋವಿಗೂ ಚಹಾಗೂ ಇರುವ ಸಂಬಂಧವೇನು?

ಭಾರತೀಯರಿಗೆ ಚಹಾ ಎಂದರೆ ಹಾಲು ಹಾಕಿಯೇ ಮಾಡಿದ ಚಹಾ. ಈ ಹಾಲಿನ ಚಹಾಗೂ ತಲೆನೋವಿಗೂ ಏನಾದರೂ ಸಂಬಂಧ ಇದೆಯೇ?

ತಜ್ಞರ ಪ್ರಕಾರ ಚಹಾದಲ್ಲಿರುವ ಕೆಫೇನ್‌ನಿಂದಾಗಿ ಈ ಲಕ್ಷಣಗಳು ಕಾಣಬಹುದು. ಹಾಗೆಂದು ಚಹಾ ಕುಡಿಯುವುದನ್ನು ತಪ್ಪಿಸಿದ ಎಲ್ಲರಿಗೂ ತಲೆನೋವು ಬರುತ್ತದೆ ಎನ್ನುವಂತಿಲ್ಲ. ಹಾಗಾಗಿ ಯಾರ ಶರೀರ ಅದೊಂದು ಸಣ್ಣ ಡೋಸ್‌ ಕೆಫೇನ್‌ಗೆ ಹೊಂದಿಕೊಂಡಿರುತ್ತದೋ, ಅವರಿಗೆ ತಲೆನೋವು ಕಾಣುವುದು ಸಹಜ.

ಒಂದು ದೊಡ್ಡ ಕಪ್‌ (150ML) ಫಿಲ್ಟರ್‌ ಕಾಫಿಯಲ್ಲಿ ಸುಮಾರು 80-120 ಎಂ.ಜಿ. ಕೆಫೇನ್‌ ಇರುತ್ತದೆ. ಅಷ್ಟೇ ಪ್ರಮಾಣದ ಚಹಾದಲ್ಲಿ 30-16 mg ಕೆಫೇನ್‌ ದೇಹ ಸೇರುತ್ತದೆ. ಹೆಚ್ಚು ಕೆಫೇನ್‌ ದೇಹ ಸೇರಿದಷ್ಟೂ ಅದನ್ನು ನಾವು ಹೆಚ್ಚು ಅವಲಂಬಿಸುತ್ತೇವೆ. ಮಾಮೂಲಿ ಡೋಸ್‌ ಕೆಫೇನ್‌ ದೇಹ ಸೇರುತ್ತಿದ್ದ ಕೆಲವೇ ಹೊತ್ತಿನಲ್ಲಿ ತಲೆನೋವು ಮಾಯವಾಗುವುದಕ್ಕೆ ಇದೇ ಕಾರಣ ಇರಬಹುದು.

ಇದನ್ನು ಓದಿ : ಜಮೀನಿಗೆ ಹೋಗಿದ್ದ ಮಹಿಳೆಯರ ಜೀವಂತ ಸಮಾಧಿಗೆ ಯತ್ನ : ಎಲ್ಲೆಡೆ ಭಾರೀ ವಿರೋಧ ; ಹೃದಯ ವಿದ್ರಾವಕ ಘಟನೆಯ video ವೈರಲ್.!

ಯಾವುದೇ ಪಾನೀಯಗಳನ್ನು ಕುಡಿಯದೇ ಇದ್ದಾಗ ಆ ಹೊತ್ತಿನ ನಿಗದಿತ ನೀರಿನಂಶ ಕಡಿಮೆಯಾಗಿಯೂ ತಲೆನೋವು ಬರುವ ಸಾಧ್ಯತೆಯಿದೆ. ಆದರೆ ಟೀ ಬದಲಿಗೆ ಒಂದಿಡೀ ಗ್ಲಾಸ್‌ ಬಿಸಿನೀರನ್ನೋ ಕಷಾಯವನ್ನೋ ಕುಡಿದು ಪ್ರಯೋಗ ಮಾಡಿದ್ದರೆ, ನಮಗೆ ತಲೆನೋವು ಬಂದಿದ್ದು ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತಿತ್ತು.

ಶುಂಠಿ ಚಹಾ, ಏಲಕ್ಕಿ ಚಹಾ, ದಾಲ್ಚಿನ್ನಿ ಚಹಾ ಮುಂತಾದ ಮಸಾಲೆ ಚಹಾಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೋವು ಕಡಿಮೆ ಮಾಡುವ ಗುಣಗಳಿವೆ. ಅದರಲ್ಲೂ ಮೈಗ್ರೇನ್‌ ಕಾಡುತ್ತಿದ್ದರೆ ಈ ಚಹಾಗಳಲ್ಲಿರುವ ಘಮವೇ ಅರೋಮಥೆರಪಿಯ ರೀತಿಯಲ್ಲಿ ಕೆಲಸ ಮಾಡುತ್ತದೆ.

ಇದಕ್ಕೆ ನಿಂಬೆ ಚಹಾ, ಪುದೀನಾ ಚಹಾ, ಕ್ಯಾಮೊಮೈಲ್‌ ಚಹಾ ಮುಂತಾದ ಯಾವುದೇ ಪರಿಮಳದ ಚಹಾ ಪರಿಹಾರ ನೀಡಬಲ್ಲದು. ಇದು ಮೈಗ್ರೇನ್‌ಗೆ ಮಾತ್ರವೇ ಅಲ್ಲ, ಮಾನಸಿಕ ಒತ್ತಡದಿಂದ, ಜೀರ್ಣಾಂಗದ ಸಮಸ್ಯೆಯಿಂದ ತಲೆನೋವು ಕಾಡುತ್ತಿದ್ದರೂ ಅದಕ್ಕೆ ಉಪಶಮನ ನೀಡಬಲ್ಲದು.

ಚಹಾ ಕುಡಿಯುವುದರಿಂದ ತಲೆನೋವು ಹೋಗುವುದಷ್ಟೇ ಅಲ್ಲ, ಬರಲೂಬಹುದು ಕೂಡ. ಹೌದು, ಚಹಾ ಕುಡಿಯುವುದು ಮಿತಿಮೀರಿದರೆ ತೊಂದರೆಯನ್ನು ಆಹ್ವಾನಿಸಿದಂತೆ. ದಿನಕ್ಕೆ ಒಂದೆರಡು ಕಪ್‌ ಚಹಾ ಕುಡಿಯುವುದು ಸಮಸ್ಯೆಯಿಲ್ಲ.

ಇದನ್ನು ಓದಿ : WhatsApp ಬಳಕೆದಾರರಿಗೆ ಗುಡ್‌ ನ್ಯೂಸ್ ; ಇನ್ಮುಂದೆ ಇಂಟರ್ನೆಟ್ ಇಲ್ಲದೆಯೇ ಕಳುಹಿಸಬಹುದು ಫೋಟೋ, ಫೈಲ್.!

ಆದರೆ ಮೂರು ಕಪ್‌ಗಿಂತ ಹೆಚ್ಚು ಚಹಾ ಕುಡಿಯುವುದನ್ನು ನಿಯಮಿತವಾಗಿ ರೂಢಿಸಿಕೊಂಡರೆ, ಹೊಟ್ಟೆ ಹಸಿದಾಗ ಚಹಾ ಕುಡಿದರೆ, ನಿದ್ದೆಗೆಡುವುದಕ್ಕೆ ಚಹಾ ಕುಡಿದರೆ ಆಸಿಡಿಟಿ ಅಥವಾ ಗ್ಯಾಸ್ಟ್ರೈಟಿಸ್‌ ಸಂಬಂಧಿ ತೊಂದರೆಗಳನ್ನು ತರಬಹುದು. ಆಸಿಡಿಟಿ ಹೆಚ್ಚಾದರೂ ಮೈಗ್ರೇನ್‌ ರೀತಿಯ ತಲೆನೋವು ಕಾಡುತ್ತದೆ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img