Thursday, April 25, 2024
spot_img
spot_img
spot_img
spot_img
spot_img
spot_img

ಮಹಿಳಾ ರೋಗಿಗಳ ನಗ್ನ ಫೋಟೋ ತೆಗೆದು ವೈರಲ್ ಮಾಡಿದ ವೈದ್ಯ Arrest.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಚಿಕಿತ್ಸೆಗೆಂದು ಬರುವ ಮಹಿಳಾ ರೋಗಿಗಳ ನಗ್ನ ಫೋಟೋಗಳನ್ನು ತೆಗೆದು, ಅವರೊಂದಿಗೆ ಅಸಭ್ಯವಾಗಿ (rudely) ವರ್ತಿಸುವ ಆರೋಪದ ಮೇಲೆ ವಿಕಾರಾಬಾದ್ ಜಿಲ್ಲೆಯ ತಾಂಡೂರ್ ಪಟ್ಟಣದ ವೈದ್ಯನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಡಾ. ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ (arrested). ತಾಂಡೂರಿನ ಅಹ್ಮದ್ ಆರ್‌ಎಂಪಿ‌ ವೈದ್ಯರಾಗಿ ಸ್ಥಳೀಯ ಕ್ಲಿನಿಕ್ ನಡೆಸುತ್ತಿದ್ದು, ಅಲ್ಲಿಗೆ ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ.

HAL ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ; ಈ ಕೂಡಲೇ ಅರ್ಜಿ ಸಲ್ಲಿಸಿ.!

ಇನ್ನೂ ಮಹಿಳೆಯೊಬ್ಬರು ಚಿಕಿತ್ಸೆಗೆಂದು ಆತನ ಬಳಿಗೆ ಹೋದ ವೇಳೆ ಆಕೆಯನ್ನು ಪರೀಕ್ಷೆಯ ಹೆಸರಿನಲ್ಲಿ ಬೆತ್ತಲೆ (naked) ಮಾಡಿ ವಿಡಿಯೋ ಮಾಡಿದ್ದಾನೆ.

ಇದಲ್ಲದೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಇದರಿಂದ ಸಂತ್ರಸ್ತೆ (victim) ತೀವ್ರ ನೊಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಆತನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಡಾ. ಅಹ್ಮದ್ ಎಸ್ಕೇಪ್ ಆಗಿದ್ದ. ಕೊನೆಗೂ ಮಹಬೂಬ್‌ನಗರ ಜಿಲ್ಲೆಯ ಉದ್ದಾನಪುರದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ವರದಿಯಾಗಿದೆ.

ನೇಮಕಾತಿ 2024 : ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ..!

ತನಿಖೆ ನಡೆಸಿದಾಗ ಆತನನ್ನು ಆರ್‌ಎಂಪಿ ಎಂದು ಗುರುತಿಸುವ ಯಾವುದೇ ಗುರುತಿನ ದಾಖಲೆಗಳಿಲ್ಲ. ಇಷ್ಟು ದಿನಗಳವರೆಗೆ ಸ್ಥಳೀಯರನ್ನು ವಂಚಿಸಿದ್ದಾನೆ (Fraud) ಎಂದು ತಿಳಿದುಬಂದಿದೆ.

ಸದ್ಯ ಈ ನಕಲಿ ವೈದ್ಯನ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ವಂಚನೆ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ (investigation) ನಡೆಸುತ್ತಿದ್ದಾರೆ.

spot_img
spot_img
spot_img
- Advertisment -spot_img