Wednesday, May 22, 2024
spot_img
spot_img
spot_img
spot_img
spot_img
spot_img

Health : ನಿಂತು ನೀರು ಕುಡಿಯುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮನುಷ್ಯನಿಗೆ ನೀರು (Water) ಪ್ರಮುಖ ವಸ್ತುವಾಗಿದೆ. ದೇಹದಲ್ಲಿ ಎಲ್ಲಾ ಅಂಗಾಂಗಗಳ ಕ್ರಿಯೆ ಸಕ್ರಿಯವಾಗಿರಲು ನಾವು ನೀರು ಕುಡಿಯಲೇಬೇಕು.

ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ನಿರ್ಜಲೀಕರಣ, ನಿಶಕ್ತಿ ಸೇರಿದಂತೆ ಹಲವು ಅನಾರೋಗ್ಯ ಲಕ್ಷಣಗಳು ಎದುರಾಗುತ್ತದೆ.

ಇದನ್ನು ಓದಿ : ತಡವಾಗಿ ಬಂದ ಶಿಕ್ಷಕಿ : ಬಟ್ಟೆ ಹಿಡಿದೆಳೆದು ಥಳಿಸಿದ ಪ್ರಿನ್ಸ್‌ಪಾಲ್‌ ; ಕಿತ್ತಾಟದ ವಿಡಿಯೋ ವೈರಲ್.!

ಇನ್ನೂ ಉತ್ತಮ ಆರೋಗ್ಯಕ್ಕೆ (Good Health) ನೀರು ಹೆಚ್ಚು ಕುಡಿಯುವುದು ಬಹಳ ಮುಖ್ಯ ಎಂದು ಆಯುರ್ವೇದದಲ್ಲೂ (Ayurveda) ತಿಳಿಸಲಾಗಿದೆ. ಆದರೆ ಆಯುರ್ವೇದದಲ್ಲಿ ನೀರನ್ನು ಕುಡಿಯುವಾಗಲೂ ಹಲವು ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದೆ.

ಆಯುರ್ವೇದ ತಜ್ಞರು ಹೇಳುವ ಪ್ರಕಾರ ಕುಳಿತುಕೊಂಡು ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳು ಪಡೆಯಬಹುದು ಎಂದು ಹೇಳುತ್ತಾರೆ.

ಆಯುರ್ವೇದದಲ್ಲಿ ನಿಂತು ನೀರು ಕುಡಿದರೆ ಕೀಲುಗಳಲ್ಲಿ ನೀರು ಸಂಗ್ರಹವಾಗುತ್ತದೆ ಎನ್ನಲಾಗಿದೆ. ಇದರಿಂದ ಸಂಧಿವಾತದ ಸಮಸ್ಯೆ ಕಾಡುತ್ತದೆ. ಅಷ್ಟೇಅಲ್ಲ ಮೂಳೆಗಳು ಮತ್ತು ಕೀಲುಗಳಲ್ಲಿ ನೋವು, ಉರಿಯೂತವನ್ನು ಪ್ರಚೋದಿಸುವ ಟಾಕ್ಸಿನ್ ಶೇಖರಣೆಯನ್ನು ಹೆಚ್ಚಿಸುತ್ತದೆ.

ನಿಂತು ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ. ನೀರನ್ನು ಕುಡಿಯುವಾಗ ದೇಹಕ್ಕೆ ಬಹಳ ಬೇಗನೆ ತಲುಪುತ್ತದೆ. ಸರಾಗವಾಗಿ (smoothly) ದೇಹದೊಳಕ್ಕೆ ನೇರವಾಗಿ ಹೋಗುವುದರಿಂದ ಕುಡಿಯುವಾಗ ಗಮನ ವಹಿಸಬೇಕು. ನೀರು ನಿಂತು ಕುಡಿಯುವುದರಿಂದ ದ್ರವಗಳ ಸಮತೋಲಿತವನ್ನು ಹದಗೆಡಿಸುವ ಜೊತೆಗೆ ಜೀರ್ಣಶಕ್ತಿಯ (of digestion) ಮೇಲೆ ಪ್ರಭಾವ ಬೀರುತ್ತದೆ.

ನೀರು ಕುಡಿಯುವಾಗ ಇವುಗಳನ್ನು ಪಾಲಿಸಿ :
* ಬಾಯಾರಿಕೆಯಾದಾಗ ನೀರು ಕುಡಿಯುವುದು :
ನಿಮ್ಮ ದೇಹಕ್ಕೆ ನೀರು ಅಗತ್ಯವೆನಿಸಿದಾಗ ಬಾಯಾರಿಕೆಯಿಂದ ಸೂಚನೆ (notice) ಸಿಗುತ್ತದೆ. ಬಾಯಾರಿಕೆ ಆದ ಕೂಡಲೇ ನೀರನ್ನು ಕುಡಿಯುವುದರಿಂದ ನಿಮ್ಮ ದೇಹಾರೋಗ್ಯ ಉತ್ತಮವಾಗಿರುತ್ತದೆ.

* ನೀರು ಕುಡಿಯಲು ಬೆಳ್ಳಿ, ತಾಮ್ರದ ಲೋಟ ಬಳಸಿದರೆ ಉತ್ತಮ :
ಪ್ರಾಚೀನ ಕಾಲದಲ್ಲಿ ನೀರು ಕುಡಿಯುವುದಕ್ಕೆ ಬೆಳ್ಳಿ ಅಥವಾ ತಾಮ್ರದ (Silver or copper) ಲೋಟಗಳನ್ನು ಬಳಸುತ್ತಿದ್ದರು. ಏಕೆಂದರೆ ಈ ಲೋಟಗಳಲ್ಲಿ ನೀರು ಕುಡಿದರೆ ದೇಹಕ್ಕೆ ಅಗತ್ಯವಿರುವ ಖನಿಜಾಂಶಗಳನ್ನು ಒದಗಿಸುತ್ತದೆ. ಆ್ಯಂಟಿಆಕ್ಸಿಡೆಂಟ್, ಆ್ಯಂಟಿ ಬ್ಯಾಕ್ಟೀರಿಯಾದಿಂದ ರೋಗ ನಿರೋಧಕ ಶಕ್ತಿ ಸಹ ಹೆಚ್ಚಾಗುತ್ತದೆ.

* ತಣ್ಣನೆಯ ನೀರಿನಿಂದ ಮಲಬದ್ಧತೆ ಸಮಸ್ಯೆ ಹಾಗೂ ಚಯಾಪಚಯ ಕ್ರಿಯೆಯಲ್ಲಿ ಅಡ್ಡಿಯಾಗುತ್ತದೆ (will be hindered) ಎನ್ನಲಾಗಿದೆ. ತಜ್ಞರು ಹೇಳುವ ಪ್ರಕಾರ, ಕುಡಿಯುವ ನೀರು ಯಾವಾಗಲೂ ಮನೆಯಲ್ಲಿರುವ ವಾತಾವರಣಕ್ಕೆ ತಕ್ಕಂತೆ ಇರಬೇಕು ಎಂದು ಹೇಳುತ್ತಾರೆ.

* ತುಂಬಾ ತಣ್ಣಗಿರುವ ಕುಡಿಯಬಾರದು :
ತುಂಬಾ ತಣ್ಣನೆಯ ನೀರು ಕುಡಿಯುವುದರಿಂದಲೂ ಆರೋಗ್ಯ ಹದಗೆಡುತ್ತದೆ. ಬೇಸಿಗೆಗಾಲದಲ್ಲಿ ತಣ್ಣನೆಯ ನೀರು, ಐಸ್ ವಾಟರ್ ಕುಡಿಯುವುದನ್ನು ತಡೆಯುವುದು ಒಳ್ಳೆಯದು. ತುಂಬಾ ತಣ್ಣನೆಯ ನೀರನ್ನು ಕುಡುಯುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರಾಗುತ್ತದೆ (fluctuates). ವಿವಿಧ ಅಂಗಾಂಗಳಲ್ಲಿ ರಕ್ತಪರಿಚಲನೆಯಲ್ಲೂ ಏರಿಳಿತವಾಗುತ್ತದೆ ಎಂದು ವಿವರಿಸಲಾಗಿದೆ.

* ಒಂದೇ ಸಮನೇ ನೀರನ್ನು ಕುಡಿಯಬಾರದು :
ತಜ್ಞರು ಹೇಳುವ ಪ್ರಕಾರ ನೀರನ್ನು ನಿಧಾನವಾಗಿ ಸ್ವಲ್ಪ ಸ್ವಲ್ಪ ಸಿಪ್ ಮಾಡುತ್ತಾ ಕುಡಿಯಬೇಕು ಹಾಗೂ ಉಸಿರಾಡುತ್ತಾ ನೀರನ್ನು ಕುಡಿಯಬೇಕೆಂದು ಹೇಳುತ್ತಾರೆ.

* ಕುಳಿತು ನೀರು ಕುಡಿಯಬೇಕು :
ಕುಳಿತು ನೀರು ಕುಡಿಯುವುದರಿಂದ ಸ್ನಾಯುಗಳು ಮತ್ತು ನರಮಂಡಲವನ್ನು (Muscles and nervous system) ಉತ್ತಮಗೊಳಿಸುತ್ತದೆ. ಹಾಗೇ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀರನ್ನು ಗುಟುಕು ರೀತಿ ಕುಡಿಯುವುದು, ಒಂದೇ ಉಸಿರಿನಲ್ಲಿ ಹೆಚ್ಚಾಗಿ ನೀರನ್ನು ಕುಡಿಯುವಂತಹ ಅಭ್ಯಾಸಗಳನ್ನು ತಪ್ಪಿಸಬೇಕು.

ಇದನ್ನು ಓದಿ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ; ಪರಾರಿಯಾಗಲೆತ್ನಿಸಿದ ಆರೋಪಿಗೆ ಗುಂಡೇಟು ಕೊಟ್ಟ Police.!

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img