Friday, September 13, 2024
spot_img
spot_img
spot_img
spot_img
spot_img
spot_img
spot_img

Immoral-relationship : ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಮಾಡಿದ್ದೇನು ಗೊತ್ತೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೀದರ್ : ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದು ಪತಿ ಓವರ್ ಹೆಡ್ ಟ್ಯಾಂಕ್‌ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಆದರೆ ಈತ ಯಾವ ಓವರ್ ಹೆಡ್ ಟ್ಯಾಂಕ್‌ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡನೋ ಅದೇ ನೀರನ್ನು ಕುಡಿದ ಜನ ಇದೀಗ ಕಕ್ಕಾಬಿಕ್ಕಿ ಆಗಿದ್ದಾರೆ.

HAL ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ; ಈ ಕೂಡಲೇ ಅರ್ಜಿ ಸಲ್ಲಿಸಿ.!

ಗ್ರಾಮದ ರಾಜಕುಮಾರ್ ದಾಸ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಂಡ ಮೂರು ದಿನಗಳ ಬಳಿಕ ಶವ ಪತ್ತೆಯಾಗಿದ್ದು, ನಲ್ಲಿ ನೀರು ವಾಸನೆ ಬಂದ ಕಾರಣ ಓರ್ವ ಯುವಕ ಟ್ಯಾಂಕ್ ಹತ್ತಿ ನೋಡಿದಾಗ ಶವ ಇರುವುದು ಬೆಳಕಿಗೆ ಬಂದಿದೆ.

ಮೂರು ದಿನಗಳಿಂದ ನೀರು ಸೇವಿಸಿರುವ ಜನ ಈಗ ಆತಂಕಕ್ಕೆ ಒಳಗಾಗಿದ್ದು, ವೈದ್ಯರು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. 1.5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದಾಗಿದ್ದು, ಸುಮಾರು 300 ಜನ ಈ ನೀರನೇ ಅವಲಂಭಿಸಿದ್ದಾರೆ.

ನೇಮಕಾತಿ 2024 : ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ..!

ಗ್ರಾಮದ ಮನೆ-ಮನೆಗೆ ಸರಬರಾಜು ಆಗುತ್ತಿದ್ದ ನೀರು ಗಬ್ಬು ನಾರುತಿತ್ತು, ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರನ್ನು ಸಹ ನೀಡಿದ್ದರು. ಮೊದಲಿಗೆ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣ ಆಗಿರಬಹುದು ಎಂದು ಜನ ಅನುಮಾನಪಟ್ಟಿದ್ದರು. ಕೆಲ ವೇಳೆ ನೀರಲ್ಲಿ ಕೂದಲು ಬರುತ್ತಿತ್ತು. ಕುಡಿಯಲು ಆಗದಷ್ಟು ನೀರು ಗಬ್ಬು ನಾರುತ್ತಿತ್ತು. ಇದೀಗ ಸತ್ಯ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img