Saturday, July 27, 2024
spot_img
spot_img
spot_img
spot_img
spot_img
spot_img

Health : ಪಿತ್ತ ಆಗಲು ಕಾರಣಗಳೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ದೇಹದಲ್ಲಿ ಉಷ್ಣತೆ (warm) ಹೆಚ್ಚಾದರೆ ಪಿತ್ತ ಉಂಟಾಗುತ್ತದೆ. ಆದ್ದರಿಂದ ರಾತ್ರಿ ಊಟ ಮಾಡಿ 3-4 ಗಂಟೆಗಳ ನಂತರ ಮಲಗುವ ಅಭ್ಯಾಸವನ್ನಿಟ್ಟುಕೊಳ್ಳಬೇಕು.

ಲಕ್ಷಣಗಳು :
* ವಾಕರಿಕೆ ಸಮಸ್ಯೆ
* ಬಾಯಲ್ಲಿ ಕಹಿಯಾದ ಹಳದಿ ಬಣ್ಣದ ನೀರು ಬರುವುದು
* ಕೆಲವೊಮ್ಮೆ ವಾಂತಿ (vomit) ಆಗುವುದು.

ಇದನ್ನು ಓದಿ : Video : ಸೇತುವೆಯಿಂದ 20 ಅಡಿ ಕೆಳಗೆ ಬಿದ್ದು ಛಿದ್ರ ಛಿದ್ರವಾದ ಕಾರು ; ಮೂವರು ಭಾರತೀಯ ಯುವತಿಯರ ಸಾ*ವು ; ಓರ್ವ ಗಂಭೀರ.!

ಕಾರಣಗಳು (reason’s) :
ಅತಿಯಾದ ಕಾಫಿ ಮತ್ತು ಟೀ ಸೇವನೆ.
ಸರಿಯಾಗಿ ನೀರು ಕುಡಿಯದೇ ಇರುವುದು.
ಸರಿಯಾಗಿ ನಿದ್ದೆ ಮಾಡದಿರುವುದು.
ಅಧಿಕ ಒತ್ತಡ.
ಸರಿಯಾದ ಸಮಯಕ್ಕೆ ಊಟ ಮಾಡದಿರುವುದು.
ಧೂಮಪಾನ
ಮದ್ಯಪಾನ

ಮನೆಮದ್ದುಗಳು :
* ಅಕ್ಕಿಯನ್ನು ತೊಳೆಯಲು ಬಳಸುವ ನೀರಿನಿಂದ ಬಿಳಿಯ ದಪ್ಪ ದ್ರವ ಸಿಗುತ್ತದೆ. ಇದನ್ನು ಆಯುರ್ವೇದದಲ್ಲಿ ತಂಡುಲೋದಕ ಎಂದು ಕರೆಯಲಾಗುತ್ತದೆ. ಇದರ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಜೊತೆಗೆ ಪಿತ್ತ ನಿವಾರಣೆಯಾಗುತ್ತದೆ.

1 ಬೌಲ್‌ ಅಕ್ಕಿಯನ್ನು ತೆಗೆದುಕೊಂಡು ತೊಳೆಯಬೇಕು. ಅದರಲ್ಲಿ 60- 80 ಮಿಲಿ ನೀರನ್ನು ಸೇರಿಸಿ, ಅದನ್ನು ಮಣ್ಣಿನ ಪಾತ್ರೆಯಲ್ಲಿ / ಸ್ಟೇನ್‌ಲೆಸ್ ಸ್ಟೀಲ್ ಬಟ್ಟಲಿನಲ್ಲಿ 2 – 6 ಗಂಟೆಗಳ ಕಾಲ ಮುಚ್ಚಿಡಬೇಕು. ನಂತರ 2 – 3 ನಿಮಿಷಗಳ ಕಾಲ ನೀರಿನಲ್ಲಿ ಅಕ್ಕಿಯನ್ನು (rice) ಮೆಸೆರೇಟ್ ಮಾಡಿ ನಂತರ ಸೇವಿಸಬೇಕು. 2 ಅಥವಾ 3 ನೇ ಬಾರಿ ತೊಳೆದ ನೀರನ್ನು ಬಳಸುವುದು ಒಳ್ಳೆಯದು.

* ಸೋಂಪು ಮನಸ್ಸನ್ನು ರಿಫ್ರೆಶ್ ಮಾಡಲು ಮತ್ತು ಮಾನಸಿಕ ಜಾಗರೂಕತೆಯನ್ನು ಉತ್ತೇಜಿಸಲು ಉಪಯುಕ್ತ. ಇದು ಕಣ್ಣುಗಳಿಗೆ ಆರಾಮದಾಯಕ ಅನುಭವವನ್ನು (A comfortable experience) ನೀಡುತ್ತದೆ.

1 ಟೀಸ್ಪೂನ್ ಸೋಂಪಿನ ಕಾಳು ಅಥವಾ ಅದರ ಪುಡಿಯನ್ನು ತೆಗೆದುಕೊಂಡು ಅದನ್ನು 1 ಗ್ಲಾಸ್ ತಂಪಾದ ನೀರಿಗೆ 1 ಟೀಸ್ಪೂನ್ ಕಲ್ಲು ಸಕ್ಕರೆಯೊಂದಿಗೆ ಸೇರಿಸಿ ಸೇವಿಸಬೇಕು.

ಮಧ್ಯಾಹ್ನ ಊಟವಾದ ಮೇಲೆ 2 ಗಂಟೆಗಳ ನಂತರ ಇದನ್ನು ಕುಡಿಯಬಹುದು.

* ಕಪ್ಪು ಒಣದ್ರಾಕ್ಷಿಯೂ ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು (Antioxidants) ಹೊಂದಿದೆ. ಆದ್ದರಿಂದ ಪಿತ್ತದಿಂದ ಬೇಗನೆ ಗುಣವಾಗಬೇಕೆಂದರೆ ಒಣದ್ರಾಕ್ಷಿ ನೀರನ್ನು ಸೇವಿಸಬೇಕು.

ಒಂದು ಮುಷ್ಟಿ ಕಪ್ಪು ಒಣದ್ರಾಕ್ಷಿ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದ ನಂತರ ರಾತ್ರಿ 1 ಗ್ಲಾಸ್ ನೀರಿನಲ್ಲಿ ನೆನೆಸಬೇಕು. ಮರುದಿನ (the next day) ಬೆಳಿಗ್ಗೆ ನೆನೆಸಿದ ಒಣದ್ರಾಕ್ಷಿಯನ್ನು ನೀರಿನಲ್ಲಿ ರುಬ್ಬಿಕೊಳ್ಳಬೇಕು. ಆಬಳಿಕ ಇದನ್ನು ಕುಡಿಯಬೇಕು.

ಇದನ್ನು ಓದಿ : ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಮಹಿಳಾ Constable ; ರೋಚಕ ವಿಡಿಯೋಆಗುವುದು.

ಬೆಳಗ್ಗೆ ಆಹಾರ ಸೇವನೆಗಿಂತ ಒಂದು ಗಂಟೆ ಮೊದಲು ಅಥವಾ ಊಟದ ನಂತರ 1 ಗಂಟೆ ಬಿಟ್ಟು ಇದನ್ನು ಸೇವನೆ ಮಾಡಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img