Saturday, July 27, 2024
spot_img
spot_img
spot_img
spot_img
spot_img
spot_img

Health : ತಬ್ಬಿಕೊಳ್ಳುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ದುಃಖ ತಡೆಯಲು ಸಾಧ್ಯವೇ ಇಲ್ಲವೆಂದಾಗ ಅಥವಾ ಪ್ರೀತಿ ಉಕ್ಕಿ ಬಂದಾಗ ಮತ್ತು ಸಂತೋಷ ಹಂಚಿಕೊಳ್ಳುವಾಗ ನಾವೆಲ್ಲರೂ ಹೆಚ್ಚಾಗಿ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುತ್ತೇವೆ (Hugging).

ಅಪ್ಪಿಕೊಳ್ಳುವಾಗ ಸಿಗುವಂತಹ ಭಾವನೆಯು ಅದ್ಭುತವಾಗಿರುವುದು (Being marvelous) ಎಂದು ವೈಜ್ಞಾನಿಕವಾಗಿಯೂ ಸಾಬೀತು ಆಗಿದೆ.

ಇನ್ನೂ ಅಪ್ಪಿಕೊಳ್ಳುವುದರಿಂದ ಆಗುವ ಪ್ರಯೋಜನಗಳೇನು ಅಂತ ತಿಳಿಯೋಣ ಬನ್ನಿ.

ಇದನ್ನು ಓದಿ : ಪತಿಯ ಕೈ-ಕಾಲು ಕಟ್ಟಿ ಸಿಗರೇಟ್‌ನಿಂದ ಪತಿಯ ಖಾಸಗಿ ಅಂಗ ಸುಟ್ಟ ಪತ್ನಿ ; ದೃಶ್ಯ CCTVಯಲ್ಲಿ ಸೆರೆ.!

* ತಬ್ಬಿ ಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದನ್ನು ಹಲವು ಸಂಶೋಧನೆಗಳು (research) ತೋರಿಸಿಕೊಟ್ಟಿವೆ.

* ನಾವು ತಬ್ಬಿಕೊಳ್ಳುವ ವ್ಯಕ್ತಿಯ ಮೇಲೆ ವಿಶೇಷ ಭಾವನೆ ನಂಬಿಕೆ ಹಾಗೂ ಬಾಂಧವ್ಯವನ್ನು ಬೆಳೆಯುತ್ತದೆ.

* ಒಬ್ಬರನ್ನ ತಬ್ಬಿಕೊಂಡ ತಕ್ಷಣ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು ಪ್ರೀತಿಯ ಹಾರ್ಮೋನ್ love hormone) ಅಥವಾ ಬಂಧನದ ಹಾರ್ಮೋನ್ ಎಂದೇ ಕರೆಯಲಾಗುತ್ತದೆ.

* ಅಪ್ಪಿಕೊಳ್ಳುವುದು ಮೆದುಳಿನ (brain) ಮೇಲು ಪರಿಣಾಮ ಬೀರುತ್ತದೆ.

* ಇದು ನರವ್ಯವಸ್ಥೆಯನ್ನು ಉತ್ತಮಪಡಿಸುವುದು.

* ಅಪ್ಪಿಕೊಳ್ಳುವುದರಿಂದ ಒತ್ತಡ (Stress) ಕಡಿಮೆಯಾಗುತ್ತದೆ.

* ಮಕ್ಕಳನ್ನು ಅಪ್ಪಿ ಮುದ್ದಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ (confidence) ಹೆಚ್ಚಾಗುತ್ತದೆ.

* ದೇಹದಲ್ಲಿ ಸಕಾರಾತ್ಮಕ ದೈಹಿಕ ಸಂವಹನಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ.

* ಇದು ಸಂತೋಷವನ್ನು (Happy) ಹೆಚ್ಚಿಸುತ್ತದೆ.

* ಅಪ್ಪಿಕೊಳ್ಳುವುದರಿಂದ ಸುಮಾರು 12 ಕ್ಯಾಲರಿಯಷ್ಟು ನಷ್ಟವಾಗುವುದು ಎಂದು ಹೇಳಲಾಗಿದೆ. ನೀವು ಪ್ರತೀ ಸಲ ಯಾರನ್ನಾದರೂ ಅಪ್ಪಿಕೊಂಡರೆ ಆಗ ಕ್ಯಾಲರಿ ದಹಿಸುವುದು ಖಚಿತ.

* ಅಪ್ಪಿಕೊಂಡ ವೇಳೆ ರಕ್ತನಾಳಗಳಲ್ಲಿ ಆಕ್ಸಿಟೋಸಿನ್ ಎನ್ನುವ ಹಾರ್ಮೋನ್ ಬಿಡುಗಡೆ ಆಗುವುದು. ಇದರಿಂದ ನೆನಪಿನ ಶಕ್ತಿಯು (memory power) ಹೆಚ್ಚಾಗುವುದು.

ಇದನ್ನು ಓದಿ : Double murder : ಪ್ರೀತಿಸುವಂತೆ ಪುತ್ರಿಯ ಹಿಂದೆ ಬಿದ್ದ ಯುವಕ ಹಾಗೂ ಆತನ ಸಹೋದರನ ಬರ್ಬರ ಹತ್ಯೆಗೈದ ತಂದೆ.!

* ಶಾಂತಿ ಹಾಗೂ ಚುರುಕುತನ ನೀಡುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img