Friday, July 12, 2024
spot_img
spot_img
spot_img
spot_img
spot_img
spot_img

ವಿಡಿಯೋ : ಕೋರ್ಟ್‌ಗೆ ಹೋಗುವಾಗ ಖಾಲಿಯಾಯ್ತು ಡಿಸೇಲ್ ; ಪೊಲೀಸ್ ಗಾಡಿ ತಳ್ಕೊಂಡೆ ಸಾಗಿದ ಕೈದಿಗಳು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕೈದಿಗಳನ್ನು ಕೋರ್ಟಿಗೆ ಕರೆದುಕೊಂಡು ಹೋಗುವಾಗ ಇಂಧನ ಖಾಲಿಯಾಗಿ, ಬಳಿಕ ಕೈದಿಗಳೇ (prisoners) ಪೊಲೀಸರ ವ್ಯಾನ್ ಅನ್ನು ತಳ್ಳಿಕೊಂಡು ಹೋದ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

X ನಲ್ಲಿನ ಬಳಕೆದಾರರೊಬ್ಬ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಪೊಲೀಸ್ ವ್ಯಾನ್‌ನಲ್ಲಿ (police van) ಇಂಧನ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲಿರುವ ದೃಶ್ಯ :

ಬಿಹಾರದ (Bihar) ಭಾಗಲ್ಪುರದಲ್ಲಿ ಸಾರ್ವಜನಿಕರು ಮೊಬೈಲ್ ಕಳ್ಳನನ್ನು ಹಿಡಿದು, ನ್ಯಾಯಾಲಯದ ವಿಚಾರಣೆಗೆಂದು ಕರೆದೊಯ್ಯುವಾಗ ಪೊಲೀಸ್ ವ್ಯಾನ್‌ನಲ್ಲಿ ಇಂಧನ ಖಾಲಿಯಾಗಿದೆ.

ಸಾರ್ವಜನಿಕರು ಈ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಬಳಿಕ ಕೈದಿಗಳು ವಾಹನವನ್ನು ತಳ್ಳಿದರು. 10 ಸೆಕೆಂಡ್‌ಗಳ ವಿಡಿಯೋ ಕ್ಲಿಪ್‌ನಲ್ಲಿ (video) ಕೆಲವು ಕೈದಿಗಳು ಇಂಧನ ಖಾಲಿಯಾದ ನಂತರ ಪೊಲೀಸ್ ವಾಹನವನ್ನು ತಳ್ಳುತ್ತಿರುವುದನ್ನು ನೋಡಬಹುದು.

ನ್ಯಾಯಾಲಯದ ವಿಚಾರಣೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ವ್ಯಾನ್‌ನಲ್ಲಿ ಇಂಧನ ಖಾಲಿಯಾಗಿರುವುದು ಮಾತ್ರ ಅಚ್ಚರಿಯ ಸಂಗತಿ ಸುಮಾರು ಐನೂರು ಮೀಟರ್ ವರೆಗೂ ಕೈದಿಗಳು ವಾಹನವನ್ನು ದೂಡಿಕೊಂಡೆ ಹೋಗಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದೊಂದು ದೊಡ್ಡ ಪ್ರಮಾದ, ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಜರುಗಿಸುವುದಾಗಿ ಉನ್ನತ ಪೊಲೀಸ್ ಅಧಿಕಾರಿಗಳು (police officer) ತಿಳಿಸಿದ್ದಾರೆ

spot_img
spot_img
- Advertisment -spot_img