ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯಾಗುವ ಹುಚ್ಚು ಕೆಲವರನ್ನು ಅಪಾಯಕಾರಿ ಮಟ್ಟದ ಕ್ರಮಗಳತ್ತ ಎಳೆದುಕೊಂಡು ಹೋಗುತ್ತಿದೆ. ಕೆಲವು ಸೆಕೆಂಡ್‌ಗಳ “ವೈರಲ್ ವಿಡಿಯೋ”ಗಾಗಿ ಜೀವವನ್ನೇ ಪಣಕ್ಕಿಡುವ ಘಟನೆಗಳು ಹೆಚ್ಚಾಗುತ್ತಿವೆ.
ಇತ್ತೀಚಿನ ಘಟನೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತೆಯೊಂದಿಗೆ ಅಪಾಯಕಾರಿ ರೀತಿಯಲ್ಲಿ “ಬೈಕ್ ವ್ಹೀಲಿಂಗ್ (Bike Wheeling)” ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ಬೈಕ್ (Bike) ಸವಾರನೊಬ್ಬ ರಸ್ತೆಯ ಮಧ್ಯೆ ತನ್ನ ವಾಹನವನ್ನು ವೇಗವಾಗಿ ಚಲಾಯಿಸುತ್ತಿದ್ದಾನೆ. ಆತನ ಹಿಂದೆ ಯುವತಿಯೊಬ್ಬಳು ಕುಳಿತಿದ್ದಾಳೆ. ಕೆಲ ಕ್ಷಣಗಳ ಬಳಿಕ ಸವಾರನು ಸ್ಟಂಟ್ ಮಾಡಲು ಯತ್ನಿಸುತ್ತಾನೆ.
ಬೈಕ್‌ನ ಮುಂಭಾಗದ ಚಕ್ರವನ್ನು ನೆಲದಿಂದ ಎತ್ತಿ, ಕೇವಲ ಹಿಂಬದಿ ಚಕ್ರದ ಮೇಲೆ ಚಲಾಯಿಸಲು ಆರಂಭಿಸುತ್ತಾನೆ. ಯುವತಿಯು ಸಹ ಖುಷಿಯಿಂದ ಆತನ ಕೃತ್ಯಕ್ಕೆ ಸಹಕರಿಸುತ್ತಾ ಕೈಯನ್ನು ಮೇಲಕ್ಕೆತ್ತುತ್ತಾಳೆ, ಆದರೆ ಕ್ಷಣಾರ್ಧದಲ್ಲೇ ಪರಿಸ್ಥಿತಿ ಬದಲಾಗುತ್ತದೆ.
ಸಮತೋಲನ ಕಳೆದುಕೊಂಡ ಬೈಕ್ (Bike) ಇಬ್ಬರನ್ನೂ ಬಿಸಾಡಿ ಬಿಡುತ್ತದೆ. ಯುವಕ ಮತ್ತು ಯುವತಿ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರ ಹಿಂದೆ ಬರುತ್ತಿದ್ದ ಮತ್ತೊಂದು ಬೈಕ್‌ಗೂ (Bike) ಡಿಕ್ಕಿ ಸಂಭವಿಸಿದೆ. ಈ ದೃಶ್ಯ ನೋಡಿ ನೆಟ್ಟಿಗರು ಆಘಾತಗೊಂಡಿದ್ದಾರೆ.
ಈ ವಿಡಿಯೋ ಈಗ ಎಕ್ಸ್ (ಹಳೆಯ ಟ್ವಿಟರ್) ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಿಯುತ್ತಿದೆ. “ಈ ರೀತಿಯ ಮೂರ್ಖತನಕ್ಕೆ ಯಾವುದೇ ಪುರಾವೆ ಬೇಕಿಲ್ಲ” ಎಂಬ ಶೀರ್ಷಿಕೆಯಲ್ಲಿ ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿ ನೆಟ್ಟಿಗರು ತೀವ್ರ ಕೋಪ ವ್ಯಕ್ತಪಡಿಸಿದ್ದಾರೆ,
- “ಜನರ ಜೀವವನ್ನು ಪಣಕ್ಕಿಟ್ಟು ಕೆಲವು ಕ್ಷಣಗಳ ಖ್ಯಾತಿಗಾಗಿ ಇಂತಹ ಸ್ಟಂಟ್ ಮಾಡುವುದು ನಿಷೇಧಿಸಬೇಕು”,
- “ಪೊಲೀಸರು ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಕಾಮೆಂಟ್‌ಗಳ ಸುರಿಮಳೆ ಹರಿದಿದೆ.
ಈ ಘಟನೆ ಮತ್ತೊಮ್ಮೆ ರಸ್ತೆ ಸುರಕ್ಷತೆ ಮತ್ತು ಸಾಮಾಜಿಕ ಮಾಧ್ಯಮದ ‘ವೈರಲ್ ಸಂಸ್ಕೃತಿ’ ಕುರಿತಂತೆ ಗಂಭೀರ ಚಿಂತನೆಗೆ ಕಾರಣವಾಗಿದೆ. ಖ್ಯಾತಿಗಾಗಿ ಜೀವದ ಬೆಲೆಯಾಟ ಆಡುತ್ತಿರುವ ಯುವ ಜನತೆ ಇಂತಹ ಘಟನೆಗಳಿಂದ ಪಾಠ ಕಲಿಯಬೇಕೆಂಬ ಅಭಿಪ್ರಾಯ ಜನರಲ್ಲಿ ವ್ಯಕ್ತವಾಗಿದೆ.
ಬೈಕ್ (Bike) ವ್ಹೀಲಿಂಗ್ ವಿಡಿಯೋ :
https://twitter.com/i/status/1984268448172736616
ಕಿರುಕುಳ ನೀಡಿದ Police ನಿಗೆ ಮಧ್ಯರಸ್ತೆಯಲ್ಲೇ ಎಳೆದು ಯುವತಿಯಿಂದ ಏಟು ; ವಿಡಿಯೋ.!

ಜನಸ್ಪಂದನ ನ್ಯೂಸ್, ಕಾನ್ಪುರ್ : ಮಹಿಳಾ ಸುರಕ್ಷತೆಗೆ ಹೆಸರಾಗಿರುವ ಕಾನ್ಪುರ್ ಪೊಲೀಸ್ (Police) ಇಲಾಖೆಯ ಖ್ಯಾತಿಗೆ ಧಕ್ಕೆ ತಂದಂತಹ ಘಟನೆ ನಡೆದಿದೆ. ಮಹಿಳೆಯೊಬ್ಬಳಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಪೊಲೀಸ್ ಸಿಪಾಯಿಯೊಬ್ಬನನ್ನು ಅಮಾನತುಗೊಳಿಸಲಾಗಿದೆ. ಘಟನೆ ಕಾನ್ಪುರ್‌ನ ಗೋಲ್ ಚೌರಾಹಾ ಪ್ರದೇಶದಲ್ಲಿರುವ ಗುರುದೇವ ಪೋಲೀಸ್ ಚೌಕಿಯ ಹತ್ತಿರ ನಡೆದಿದೆ.
ವರದಿಗಳ ಪ್ರಕಾರ, ಮಹಿಳೆಯೊಬ್ಬಳು ಸ್ಟಾಂಪ್ ಪೇಪರ್ ಖರೀದಿಸಲು ಗೋಲ್ ಚೌರಾಹಾಕ್ಕೆ ತೆರಳಿದ್ದಾಗ, ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ (Police) ಸಿಬ್ಬಂದಿಯೊಬ್ಬನು ಹಿಂದಿನಿಂದಲೇ ಆಕೆಯ ಗಮನ ಸೆಳೆಯಲು ಅಶ್ಲೀಲ್ ಸನ್ನೆ ಮಾಡಲು ಪ್ರಯತ್ನಿಸಿದ್ದಾನೆ.
Rules ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸಿ, ತಾವೇ ನಿಯಮ ಮುರಿದ ಟ್ರಾಫಿಕ್ ಪೊಲೀಸ್ ; ವಿಡಿಯೋ ವೈರಲ್.!
ಬಳಿಕ, ಅವಳ ಮೊಬೈಲ್ ನಂಬರನ್ನು ಕೇಳಿ, ಬಲವಂತವಾಗಿ ಮಾತನಾಡಲು ಯತ್ನಿಸಿದ್ದಾನೆ. ಇದರಿಂದ ಬೇಸತ್ತ ಮಹಿಳೆಯರು ಮಧ್ಯರಸ್ತೆಯಲ್ಲೇ ಪ್ರತಿಭಟಿಸಿದ್ದು, ಆ ಪೊಲೀಸ್‌ನ ಕಾಲರ್ ಹಿಡಿದು ಗುರುದೇವ ಚೌಕಿಯವರೆಗೆ ಎಳೆದೊಯ್ದಿದ್ದಾರೆ.
ಸ್ಥಳದಲ್ಲಿದ್ದ ಹಲವರು ಈ ಘಟನೆಯ ದೃಶ್ಯಾವಳಿಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯಾವಳಿಯಲ್ಲಿ ಆರೋಪಿಯು ತನ್ನ ಪೋಲೀಸ್ (Police) ನೇಮ್ ಪ್ಲೇಟ್ ತೆಗೆದು ಜೇಬಿಗೆ ಇಡುವುದು ಕಾಣಿಸಿಕೊಂಡಿದೆ. ಮಹಿಳೆಯರು ನ್ಯಾಯಕ್ಕಾಗಿ ಪೋಲೀಸ್ ಠಾಣೆಯವರೆಗೂ ತೆರಳಿ ಹೋರಾಟ ಮುಂದುವರಿಸಿದ್ದಾರೆ.
School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!
ಘಟನೆ ಬಳಿಕ ಸ್ಥಳೀಯ ಪೋಲೀಸ್ (Police) ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿದರು. ಮಹಿಳೆಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯು ನಿಜವಾಗಿಯೂ ಅಸಭ್ಯ ವರ್ತನೆ ನಡೆಸಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಎಸಿಪಿ ರಾಮ್ ಠೇಕೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಆರೋಪಗಳ ಹಿನ್ನೆಲೆ ನೋಡಿದರೆ ಪೊಲೀಸ್ (Police) ಸಿಬ್ಬಂದಿಯ ವರ್ತನೆ ಅಸಭ್ಯವಾಗಿರಬಹುದು ಎಂಬ ಪ್ರಾಥಮಿಕ ಸುಳಿವುಗಳು ದೊರೆತಿವೆ.
ಆದ್ದರಿಂದ ಅವನನ್ನು ತಕ್ಷಣದ ಪರಿಣಾಮದಿಂದ ಅಮಾನತುಗೊಳಿಸಲಾಗಿದೆ. ಜೊತೆಗೆ ಲೈಂಗಿಕ ಕಿರುಕುಳ ಮತ್ತು ಶಿಸ್ತಿನ ಉಲ್ಲಂಘನೆ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಬೆಂಗಳೂರು Rave Party ಮೇಲೆ ಪೊಲೀಸರು ದಾಳಿ ; 35 ಯುವತಿಯರು ಸೇರಿದಂತೆ 115 ಮಂದಿ ವಶಕ್ಕೆ.!
ಈ ಘಟನೆಯು ಸ್ಥಳೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಿಳಾ ಸುರಕ್ಷತೆ ಕುರಿತಂತೆ ಪೊಲೀಸರ (Police) ಪಾತ್ರದ ಮೇಲೆ ಪ್ರಶ್ನೆಗಳು ಎದ್ದಿವೆ. ಉನ್ನತ ಅಧಿಕಾರಿಗಳು ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ವಿಡಿಯೋ :
https://twitter.com/i/status/1983512187177202174





