ಜನಸ್ಪಂದನ ನ್ಯೂಶ್, ಡೆಸ್ಕ್ : ಯುವತಿಯೋರ್ವಳು ಸರಿಯಾಗಿ 6 ಯುವಕರೊಂದಿಗೆ ಡೇಟಿಂಗ್ (Dating) ನಡೆಸುತ್ತಿರುವ ಕುರಿತಾದ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
6 ಯುವಕರೊಂದಿಗೆ ಡೇಟಿಂಗ್ (Dating) :
ಓರ್ವ ಪ್ರಿಯಕರನ ಜೊತೆ ಅಪ್ಪಿ ಮುದ್ದಾಡುವಾಗಲೇ ಆ ಯುವತಿಯ ಇನ್ನುಳಿದ ಐವರು ಪ್ರಿಯಕರೆಲ್ಲರೂ ಸೇರಿ ರೆಸ್ಟೋರೆಂಟ್‌ಗೆ ಆಗಮಿಸುವ ಮೂಲಕ ಯುವತಿಗೆ ಶಾಕ್ ನೀಡಿದ್ದಾರೆ.
ಈ ಯುವತಿ ಏಕಕಾಳದಲ್ಲಿಯೇ 6 ಜನ ಯುವಕರ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಳೆಂದು, ಓರ್ವನ ಜೊತೆ ಮಸ್ತ ಮಜಾ ಮಾಡುವಾಗಲೇ ಹೋಟೆಲ್ ಆಗಮಿಸಿ ಯುವತಿಯ ಚಳಿ ಬಿಸಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಓದಿ :Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
ಇಂದಿನ ಯುವಜನತೆ ನಡುವೆ ಡೇಟಿಂಗ್ (Dating) ಒಂದು ಸಾಮಾನ್ಯ ಸಂಗತಿಯಾಗಿದೆ. ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಡೇಟಿಂಗ್ (Dating) ಇನ್ನೂ ಸುಲಭವಾಗಿದೆ. ಆನ್‌ಲೈನ್ ಆಪ್‌ಗಳು, ಮೆಸೇಜ್‌ಗಳು ಹಾಗೂ ವಿಡಿಯೋ ಕಾಲ್‌ಗಳು ಭಾವನಾತ್ಮಕ ಸಂಪರ್ಕ ಹೆಚ್ಚಿಸುತ್ತವೆ. ಆದರೆ ಈ ಎಲ್ಲದೊಂದಿಗೇ ನಿರೀಕ್ಷೆಗಳು, ನಂಬಿಕೆ ಮತ್ತು ಭದ್ರತೆಗೆ ಮಹತ್ವವಿರಬೇಕು.
ಕೆಲವೊಮ್ಮೆ ತಾತ್ಕಾಲಿಕ ಮನೋರಂಜನೆಗಾಗಿ ಡೇಟಿಂಗ್ (Dating) ಮಾಡುವವರು ಹೆಚ್ಚು ಇದ್ದಾರೆ, ಇದು ಭಾವನಾತ್ಮಕ ನೋವಿಗೆ ಕಾರಣವಾಗಬಹುದು. ಆದ್ದರಿಂದ, ಡೇಟಿಂಗ್‌ಗೆ ಸುರಕ್ಷಿತ, ಗೌರವಭರಿತ ಹಾಗೂ ಸ್ಪಷ್ಟತೆಯ ದೃಷ್ಟಿಯಿಂದ ನಿಲುಕುವುದು ಮುಖ್ಯ. ನಿಜವಾದ ಸಂಬಂಧವನ್ನು ಬೆಳೆಸುವ ಉದ್ದೇಶವಿದ್ದರೆ ಮಾತ್ರ ಡೇಟಿಂಗ್‌ಗೆ ಇಳಿಯುವುದು ಒಳ್ಳೆಯದು.
ಡೇಟಿಂಗ್‌ನಲ್ಲಿ ದೈಹಿಕ ಸಂಬಂಧ (physical relationship) ಇರಬಹುದಾ ಅಥವಾ ಇಲ್ಲವೇನೋ ಇರಬಹುದು. ಇದು ಪೂರ್ತಿ ವ್ಯಕ್ತಿಗಳ ವೈಯಕ್ತಿಕ ಆಯ್ಕೆ, ಸಂಸ್ಕೃತಿ, ನೈತಿಕ ಮೌಲ್ಯಗಳು ಮತ್ತು ಪರಸ್ಪರ ಒಪ್ಪಿಗೆ (mutual consent) ಮೇಲೆ ಅವಲಂಬಿತವಾಗಿದೆ.ಕೆಲ ಜೋಡಿಗಳು ಡೇಟಿಂಗ್ ಸಂದರ್ಭದಲ್ಲಿ ಪರಸ್ಪರ ಒಪ್ಪಿಗೆ ಇದೆ ಎಂಬ ಅರ್ಥದಲ್ಲಿ ದೈಹಿಕ ಸಂಬಂಧವನ್ನು ಹೊಂದಬಹುದು.
ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
ಕೆಲವರು ಇಂತಹ ರಿಲೇಶನ್‌ಶಿಪ್‌ಗಳನ್ನು ಸಹಜವಾಗಿ ಸ್ವೀಕರಿಸಿದ್ರೆ, ಮತ್ತೊಂದಿಷ್ಟು ಮಂದಿ ತುಂಬಾನೇ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ಇಲ್ಲಿಯವರೆಗೆ ಹುಡುಗರು ಮಾತ್ರ ಹಲವು ಹುಡುಗಿಯರ ಜೊತೆ ರಿಲೇಶನ್‌ಶಿಪ್ ಹೊಂದಿರುತ್ತಾರೆ ಎಂಬ ಆರೋಪವಿತ್ತು. ಆದರೆ ಇದೀಗ ಹುಡುಗಿಯೊಬ್ಬಳು ಆರು ಯುವಕರೊಂದಿಗೆ ಡೇಟಿಂಗ್ ಮಾಡಿ ತಗ್ಲಾಕೊಂಡಿದ್ದಾಳೆ.
ವಿಡಿಯೋದಲ್ಲೇನಿದೆ :
ಯುವತಿಯೋರ್ವಳು ರೆಸ್ಟೋರೆಂಟ್‌ನಲ್ಲಿ ಓರ್ವ ಯುವಕನ್ನು ಅಪ್ಪಿ ಮುದ್ದಾಡುತ್ತಿರುತ್ತಾಳೆ. ಈ ವೇಳೆ ಇದ್ದಕ್ಕಿದ್ದಂತೆ ಒಬ್ಬರಾದ ನಂತರ ಒಬ್ಬರಂತೆ ಐವರು ಯುವಕರು ಅಲ್ಲಿಗೆ ಬಂದು, ಮೋಜಿನಲ್ಲಿದ್ದ ಜೋಡಿಯನ್ನು ಸುತ್ತುವರಿಯುತ್ತಾರೆ. ಎಲ್ಲರನ್ನೂ ನೋಡುತ್ತಿದ್ದಂತೆ ಯುವತಿ ಜೊತೆಯಲ್ಲಿದ್ದ ಯುವಕ ಅಲ್ಲಿಂದ ಹೊರಟು ಹೊಗುತ್ತಾನೆ. ಇನ್ನು ಏಕಕಾಲದಲ್ಲಿ ಇದ್ದಕ್ಕಿದ್ದಂತೆ ಒಂದೇ ಸ್ಥಳದಲ್ಲಿ ತನ್ನೆಲ್ಲಾ (ಐದು) ಗೆಳೆಯರನ್ನು ನೋಡಿ ಶಾಕ್ ಆದ ಯುವತಿ ಕಣ್ಣೀರು ಹಾಕುತ್ತಾಳೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!
ಸದ್ಯ ಈ ವಿಡಿಯೋವನ್ನು ಆಕಾಂಕ್ಷ ಹೆಸರಿನ ಥ್ರೆಡ್ ಖಾತೆಯಲ್ಲಿ ಶೇರ್ ಹಂಚಿಕೊಳ್ಳಲಾಗಿದ್ದು, ಘಟನೆ ಬಾಂಗ್ಲಾದೇಶದಲ್ಲಿ ನಡೆದಿರುವ ಬಗ್ಗೆ ತಿಳಿದು ಬರುತ್ತದೆ. ಇಲ್ಲಿ ಯುವತಿ ಮೇಲೆ ಏಕಕಾಲದಲ್ಲಿ ಆರು ಜನರೊಂದಿಗೆ ಡೇಟಿಂಗ್ (Dating) ಮಾಡುತ್ತಿದ್ದಾಳೆ ಎಂದು ಆರೋಪಿಸಲಾಗಿದೆ.
ಯುವತಿಯ ಈ ವಿಚಾರ ಹೇಗೋ ಎಲ್ಲರಿಗೂ ಗೊತ್ತಾಗಿ ಡಾಕಾದ ರೆಸ್ಟೋರೆಂಟ್‌ಗೆ ಆಗಮಿಸಿ ಯುವತಿಗೆ ಶಾಕ್ ನೀಡಿದ್ದಾರೆ. ಒಂದೇ ಸ್ಥಳದಲ್ಲಿ ಎಲ್ಲರನ್ನು ನೋಡಿ ಏನನ್ನು ಹೇಳದೇ ದಿಗ್ಭ್ರಮೆಗೊಂಡು ಕಣ್ಣೀರು ಹಾಕಿದ್ದಾಳೆ.
ಈ ವಿಡಿಯೋಗೆ ಥ್ರೆಡ್‌ನಲ್ಲಿ 1.4 ಕ್ಕೂ ಅಧಿಕ ಬಾರಿ ಶೇರ್ ಜೊತೆ 6 ನೂರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ.
Courtesy : kannada.asianetnews
Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
Liver : ಈ ತರಕಾರಿಗಳನ್ನು 3 ತಿಂಗಳು ತಿನ್ನಿರಿ ; ಡ್ಯಾಮೇಜ್ ಆಗಿರುವ ಲಿವರ್‌ನಿಂದ ಮುಕ್ತಿ ಪಡೆಯಿರಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ನಿಮ್ಮ ಲಿವರ್ ಡ್ಯಾಮೇಜ್ (Liver damage) ಆಗಿದೇಯೇ.? ಹಾಗಾದ್ರೆ ಈ ತರಕಾರಿ 3 ತಿಂಗಳು ತಿನ್ನಿರಿ, ಡ್ಯಾಮೇಜ್ ಆಗಿರುವ ಲಿವರ್ (Liver) ಸರಿಯಾಗುತ್ತೇ.!
ಕೊಬ್ಬಿನ ಪಿತ್ತಜನಕಾಂಗ ಎಂದರೆ ಯಕೃತ್ತಿ (Liver) ನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದು. ಇದು ಸಾಮಾನ್ಯ ಸಮಸ್ಯೆಯಾಗಿದ್ದು, ಮಧುಮೇಹ ಮತ್ತು ಅಧಿಕ ತೂಕ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರೋಗವು ಯಾವುದೇ ಲಕ್ಷಣಗಳನ್ನು ಉಂಟುಮಾಡದೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಫ್ಯಾಟಿ ಲಿವರ್ (Liver) ರೋಗವು ಎರಡು ರೀತಿಯಲ್ಲಿ ಸಂಭವಿಸುತ್ತದೆ. ಮೊದಲನೆಯದಾಗಿ, ಅತಿಯಾದ ಮದ್ಯ ಸೇವನೆಯಿಂದ ಉಂಟಾಗುತ್ತದೆ. ಇದನ್ನು ಆಲ್ಕಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ. ಎರಡನೆಯದಾಗಿ, ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಿಂದ ಉಂಟಾಗುವ ಫ್ಯಾಟಿ ಲಿವರ್. ಇದನ್ನು ನಾನ್-ಆಲ್ಕಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ.
ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
ಫ್ಯಾಟಿ ಲಿವರ್ (Fatty liver) ರೋಗವನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ ಲಿವರ್ ಸಿರೋಸಿಸ್‌ನಂತಹ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಫ್ಯಾಟಿ ಲಿವರ್ ಗುಣಪಡಿಸಲು ಅನುಸರಿಸಬೇಕಾದ ಅಂಶ :
ಸಂಸ್ಕರಿಸಿದ ಆಹಾರ, ಸಕ್ಕರೆ, ಪಿಷ್ಟಯುಕ್ತ ಆಹಾರಗಳು, ಹುರಿದ ಆಹಾರಗಳಿಂದ ಸಂಪೂರ್ಣವಾಗಿ ದೂರವಿದ್ದರೆ, ನಮ್ಮ ಕೆಟ್ಟು ಹೋದ ಯಕೃತ್ತು (liver) ಮತ್ತೆ ತನ್ನ ಮೊದಲಿನ ಸ್ಥಿತಿಗೆ ಮರಳುತ್ತದೆ.
ಆಹಾರದಲ್ಲಿ ಇರಲೇಬೇಕಾದ ವಸ್ತುಗಳು :
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಹಿ ಕುಂಬಳಕಾಯಿ ಅಥವಾ ಬೀಟ್‌ರೂಟ್ ರಸವನ್ನು ಕುಡಿದರೆ, ನಿಮಗೆ ಕೊಬ್ಬಿನ ಯಕೃತ್ತು (liver) ಕಡಿಮೆಯಾಗುತ್ತದೆ.
ಹಾಗೇಯೇ ಮಧ್ಯಾಹ್ನ ಊಟಕ್ಕೆ ಬೇಳೆ, ಗಂಜಿ ಮತ್ತು ಸಾಕಷ್ಟು ಹಸಿರು ತರಕಾರಿಗಳನ್ನು ತಿನ್ನಬೇಕು. ಇದೆಲ್ಲದರ ಜೊತೆಗೆ, ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಅಂದರೆ ಯಕೃತ್ತಿನ ಮೇಲೆ ಹೊರೆಯಾಗದಂತೆ ಹಗುರವಾದ ಆಹಾರವನ್ನೇ ಸೇವಿಸಬೇಕು.
ದೈಹಿಕ ಚಟುವಟಿಕೆ :
ದೇಹದಿಂದ ವಿಷವನ್ನು ತೆಗೆದುಹಾಕುವ ಅಂಗವಾಗಿ ಈ ಯಕೃತ್ತು (liver) ಕೆಲಸ ಮಾಡುತ್ತದೆ. ಒಂದು ವೇಳೆ ದೈಹಿಕ ಚಟುವಟಿಕೆ ಕಡಿಮೆಯಾದಾಗ ದೇಹದಿಂದ ವಿಷವನ್ನು ತೆಗೆದುಹಾಕುವ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಆದ್ದರಿಂದ, ದಿನಕ್ಕೆ ಕನಿಷ್ಠ 30 – 45 ನಿಮಿಷಗಳ ಕಾಲ ವಾಕ್ ಮಾಡಬೇಕು. ಯೋಗವನ್ನು ಕೂಡಾ ಮರೆಯದೇ ಮಾಡಬೇಕು.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!
ಯಕೃತ್ತ (liver) ನ್ನು ಸಕ್ರಿಯವಾಗಿಡಲು ಹೊಟ್ಟೆಯ ಮೇಲೆ ಲಘು ಮಸಾಜ್ ಮಾಡಿ, ಇದೆಲ್ಲವೂ ತುಂಬಾ ಸಹಾಯಕವಾಗಿದೆ.
ನೈಸರ್ಗಿಕ ಗಿಡಮೂಲಿಕೆ :
ಯಕೃತ್ತಿನ ಕೊಬ್ಬನ್ನು ಕರಗಿಸುವಲ್ಲಿ ಆಯುರ್ವೇದದಲ್ಲಿ ಅನೇಕ ಗಿಡಮೂಲಿಕೆಗಳ ಔಷಧಿಗಳು ಪರಿಣಾಮಕಾರಿ ಎಂದು (ಪ್ರಯೋಜನಕಾರಿ) ಪರಿಗಣಿಸಲಾಗಿದೆ. ರಾತ್ರಿ ಮಲಗುವ ಮುನ್ನ ತ್ರಿಫಲ ಪುಡಿಯನ್ನು ಸೇವಿಸಬೇಕು. ಬೆಳಿಗ್ಗೆ ಎದ್ದ ತಕ್ಷಣ, ನೆಲ್ಲಿಕಾಯಿ ಚಹಾ ಕುಡಿಯಿರಿ. ತ್ರಿಫಲ ಪುಡಿ ಮತ್ತು ನೆಲ್ಲಿಕಾಯಿ ಗಿಡಮೂಲಿಕೆಗಳು ಯಕೃತ್ತಿ (liver) ನ ಉರಿಯೂತ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತವೆ.
ಒಟ್ಟಿನಲ್ಲಿ ಹೇಳುವುದೇನೆಂದರೇ, ಈ ಫ್ಯಾಟಿ ಲಿವರ್ ಗುಣಪಡಿಸಲಾಗದ ಕಾಯಿಲೆಯಲ್ಲ. ಸರಿಯಾದ ಸಮಯದಲ್ಲಿ ಗಮನಹರಿಸಿ ಔಷಧಿಗಳ ಬದಲಿಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿದರೆ ಕಂಡಿತ ಈ ರೋಗದಿಂದ ಮುಕ್ತಿ ಪಡೆಯಬಹುದು.
ಈ ಮೇಲೆ ನೀಡಲಾದ ಜೀವನಶೈಲಿಯನ್ನು ವರ್ಷಾನುಗಟ್ಟಲೇ ಮಾಡಬೇಕೆಂದಿಲ್ಲ, ಕೇವಲ 3 ತಿಂಗಳ ಕಾಲ ಮಾಡಿದರೆ ಸಾಕು ಈ ಸಮಸ್ಯೆಯನ್ನು ಮೂಲದಿಂದಲೇ ನಿರ್ಮೂಲನೆ ಮಾಡಬಹುದು.