Wednesday, May 22, 2024
spot_img
spot_img
spot_img
spot_img
spot_img
spot_img

Health : ಹಸುವಿನ ಹಾಲು ಅಥವಾ ಎಮ್ಮೆ ಹಾಲು – ಆರೋಗ್ಯಕ್ಕೆ ಯಾವುದು ಉತ್ತಮ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತ ಸಮಾನವಾದ ದ್ರವ ಒಂದಿದ್ದರೆ ಅದು ಹಾಲು (Milk). ಹಾಲಿನ ಉತ್ತಮ ಪ್ರಯೋಜನಗಳಿಂದ ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ.

ಆದರೆ ಹಸುವಿನ ಹಾಲು ಹೆಚ್ಚು ಪೌಷ್ಟಿಕವಾಗಿದೆಯೇ (Nutritious) ಅಥವಾ ಎಮ್ಮೆಯ ಹಾಲು ಪೌಷ್ಟಿಕವಾಗಿದೆಯೇ ಎಂಬ ಗೊಂದಲ ಅನೇಕ ಜನರಿಗಿದೆ. ಹಸು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು.? ಯಾವ ಹಾಲನ್ನು ಕುಡಿಯುವುದರಿಂದ ಏನು ಪ್ರಯೋಜನ ಇದೆ.? ಅಂತ ತಿಳಿಯೋಣ ಬನ್ನಿ.

ಇದನ್ನು ಓದಿ : ಲಾಡ್ಜ್’ನಲ್ಲಿ ಇಬ್ಬರೊಂದಿಗೆ ರೊಮ್ಯಾನ್ಸ್ ಮಾಡುವಾಗ ಪತಿಯ ಕೈಗೆ ಸಿಕ್ಕಿಬಿದ್ದ ವೈದ್ಯೆ ; ಮುಂದೆನಾಯ್ತು ಈ Video ನೋಡಿ.!

1) ಎಮ್ಮೆ ಹಾಲನ್ನು ಹೆಚ್ಚು ಸಮಯ ಇಡಬಹುದು :
ಎಮ್ಮೆ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಸಮಯ ಇಡಬಹುದು. ಎಮ್ಮೆ ಹಾಲು ಬೇಗನೆ ಹಾಳಾಗುವುದಿಲ್ಲ, ಆದರೆ ಹಸುವಿನ ಹಾಲನ್ನು 1-2 ದಿನದೊಳಗೆ ಬಳಸಬೇಕು. ಇಲ್ಲದಿದ್ದರೆ ಹಾಲು ಒಡೆದು ಹಾಳಾಗುವುದು.

2) ಹಸುವಿನ ಹಾಲಿನಲ್ಲಿ ಕ್ಯಾಲೋರಿ ಕಡಿಮೆ ಇದೆ :
ಹಸುವಿನ ಹಾಲಿನಲ್ಲಿ ಕ್ಯಾಲೋರಿ ತುಂಬಾನೇ ಕಡಿಮೆ ಇದೆ. ಆದ್ದರಿಂದ ಡಯಟ್‌ ಮಾಡುವವರೆಗೆ ಹಸುವಿನ ಹಾಲು ಒಳ್ಳೆಯದು. ಇದನ್ನು ಓದಿ :

3) ವಿಟಮಿನ್ಸ್ :
ಎಮ್ಮೆ ಹಾಲಿಗಿಂತ ಹಸುವಿನ ಹಾಲಿನಲ್ಲಿ ವಿಟಮಿನ್ ಎ ಅಧಿಕವಿದೆ, ವಿಟಮಿನ್‌ ಎ ಕಣ್ಣುಗಳ ಆರೋಗ್ಯಕ್ಕೆ, ಮೂಳೆಗಳ ಬೆಳವಣಿಗೆಗೆ, ರೋಗ ನಿರೋಧಕ ಶಕ್ತಿ (Immunity) ಹೆಚ್ಚಲು ತುಂಬಾನೇ ಅವಶ್ಯಕ. ಮಕ್ಕಳಿಗೆ ಹಸುವಿನ ಹಾಲು ತುಂಬಾನೇ ಒಳ್ಳೆಯದು.

4) ಕೊಲೆಸ್ಟ್ರಾಲ್ ಕಡಿಮೆ :
ಹಸುವಿನ ಹಾಲಿನಲ್ಲಿ ಎಮ್ಮೆ ಹಾಲಿಗಿಂತ ಕೊಲೆಸ್ಟ್ರಾಲ್ ತುಂಬಾ ಕಡಿಮೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಕೊಬ್ಬಿನಂಶ ಹೆಚ್ಚಾಗುವುದು. ಇದರಿಂದ ಹೃದಯಾಘಾತದ (Heart Attack) ಅಪಾಯ ಹೆಚ್ಚು. ಹೃದಯ ಸಮಸ್ಯೆ ಇರುವವರು ಎಮ್ಮೆ ಹಾಲಿಗಿಂತ ಹಸುವಿನ ಹಾಲು ಕುಡಿಯುವುದು ಒಳ್ಳೆಯದು.

5) ಉತ್ತಮ ನಿದ್ದೆ :
ಎಮ್ಮೆ ಹಾಲು ಕುಡಿದರೆ ತುಂಬಾ ಚೆನ್ನಾಗಿ ನಿದ್ದೆ ಬರುತ್ತದೆ, ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಹಸುವಿನ ಹಾಲಿಗಿಂತ ಎಮ್ಮೆ ಹಾಲು ಕುಡಿದರೆ ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು.

6) ಪೋಷಕಾಂಶಗಳು :
ಹಸುವಿನ ಹಾಲಿನಲ್ಲಿ ಎಮ್ಮೆ ಹಾಲಿಗಿಂತ ಪ್ರೊಟೀನ್‌, ಕೊಬ್ಬು, ಕಾರ್ಬೋಹೈಡ್ರೇಟ್ಸ್ ಎಲ್ಲವೂ ಸಮ ಪ್ರಮಾಣದಲ್ಲಿ ಇರುತ್ತದೆ.

7) ಜೀರ್ಣಕ್ರಿಯೆ :
ಎಮ್ಮೆ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಮಂದವಿರುತ್ತದೆ, ಆದ್ದರಿಂದ ಬೇಗನೆ ಜೀರ್ಣವಾಗುವುದಿಲ್ಲ. ಅದರಲ್ಲೂ ಕೆಲವರಿಗೆ ಎಮ್ಮೆ ಹಾಲು ಕುಡಿದರೆ ಅಜೀರ್ಣ (Indigestion) ಸಮಸ್ಯೆ ಉಂಟಾಗುವುದು. ಹಸುವಿನ ಹಾಲು ಬೇಗನೆ ಜೀರ್ಣವಾಗುವುದು.

ಇದನ್ನು ಓದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸೇವಿಸುವುದರಿಂದ ಏನಾಗುವುದು.?

8) ಅಲರ್ಜಿ ಕಡಿಮೆ :
ಕೆಲವರಿಗೆ ಲ್ಯಾಕ್ಟೋಸ್‌ ಅಲರ್ಜಿ (Allergy) ಸಮಸ್ಯೆ ಇರುತ್ತದೆ, ಅಂಥವರಿಗೆ ಹಾಲು ಕುಡಿದರೆ ಆಗುವುದಿಲ್ಲ. ಅದರಲ್ಲೂ ಎಮ್ಮೆ ಹಾಲು ಕುಡಿದರೆ ತುಂಬಾನೇ ಅಲರ್ಜಿ ಉಂಟಾಗುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
spot_img
- Advertisment -spot_img