ಜನಸ್ಪಂದನ ನ್ಯೂಸ್, ಡೆಸ್ಕ್ : ಮಧ್ಯಪ್ರದೇಶದ ಆಶೋಕ್ ನಗರ ಜಿಲ್ಲಾಸ್ಪತ್ರೆಯಲ್ಲಿ ದಂಪತಿಗಳು (Couple) ಆಸ್ಪತ್ರೆ ಆವರಣದಲ್ಲೇ ಅಸಭ್ಯವಾಗಿ ವರ್ತಿಸಿರುವ ಎರಡು ಸ್ಥಳೀಯ ಘಟನೆಗಳು ಬೆಳಕಿಗೆ ಬಂದಿದ್ದು, ಅವುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ಘಟನೆಗಳು ಆಸ್ಪತ್ರೆಯ ಭದ್ರತೆ ಮತ್ತು ಮೇಲ್ವಿಚಾರಣೆಯ ಮೇಲಿನ ದೊಡ್ಡ ಪ್ರಶ್ನೆಗಳನ್ನು ಎಬ್ಬಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವೇಯ್ಟಿಂಗ್ ರೂಮ್‌ನಲ್ಲಿ ನಡೆದ ಘಟನೆ ವಿಡಿಯೋ ವೈರಲ್ :
ಜಿಲ್ಲಾಸ್ಪತ್ರೆಯ ವೇಯ್ಟಿಂಗ್ ರೂಮ್ ಪ್ರದೇಶದಲ್ಲಿ ರಾತ್ರಿ ವೇಳೆ ಮಲಗಿದ್ದ ದಂಪತಿಗಳು (Couple) ಕಂಬಳಿ ಹೊದ್ದುಕೊಂಡು ಅಸಭ್ಯವಾಗಿ ವರ್ತಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಈ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ.
ಅಧಿಕಾರಿಗಳ ಪ್ರಕಾರ, ಘಟನೆ ಜನಸಂದಣಿ ಕಡಿಮೆ ಇರುವ ಸಮಯದಲ್ಲಿ ನಡೆದಿದೆ. ದಂಪತಿಗಳು (Couple) ಕಂಬಳಿ ಹೊದ್ದುಕೊಂಡು ಅಸಭ್ಯವಾದ ಕೃತ್ಯ ಆವರಣದಲ್ಲಿರುವ ಭದ್ರತಾ ಸಿಬ್ಬಂದಿ, ಆ ಸಮಯದಲ್ಲಿ ಗಸ್ತು ನಡೆಸದೆ ಇದ್ದ ಕಾರಣಕ್ಕೆ ನಡೆದಿದೆ ಎಂದಿದ್ದಾರೆ.
ಇದನ್ನು ಓದಿ : “Safari ವೇಳೆ ಮಹಿಳೆಯ ಮೇಲೆ ಚಿರತೆಯ ದಾಳಿ ; ವಿಡಿಯೋ ವೈರಲ್!”
ಉದ್ಯಾನವನದಲ್ಲೂ ಇದೇ ರೀತಿಯ ವರ್ತನೆ :
ಜಿಲ್ಲಾಸ್ಪತ್ರೆಯ ಮಾಧವ್ ಉದ್ಯಾನ (Gardon) ಪ್ರದೇಶದಲ್ಲೂ ಮತ್ತೊಂದು ದಂಪತಿ (Couple) ಪೊದೆಯೊಳಗೆ ಅಸಭ್ಯವಾಗಿ ವರ್ತಿಸಿರುವ ಮತ್ತೊಂದು ವಿಡಿಯೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಜನಸಾಮಾನ್ಯರಿಗೆ ಮುಕ್ತವಾಗಿರುವ ಈ ಪ್ರದೇಶದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಕಣ್ಣಿಗೆ ಬೀಳುತ್ತಿದೆ.
ಹಿಂದೆಯೂ ಮದ್ಯಪಾನ ಪ್ರಕರಣಗಳು ವರದಿಯಾಗಿದ್ದವು :
ಇದಕ್ಕೂ ಮೊದಲು ಇದೇ ಆವರಣದಲ್ಲಿ ಇಬ್ಬರು ವ್ಯಕ್ತಿಗಳು ಹಗಲಿನಲ್ಲೇ ಮದ್ಯಪಾನ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿದ್ದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ನಿರಂತರವಾಗಿ ಆಗುತ್ತಿರುವ ನಿಯಮ ಉಲ್ಲಂಘನೆಗಳು ಗಂಭೀರ ಭದ್ರತಾ ಕೊರತೆಯನ್ನು ತೋರಿಸುತ್ತಿವೆ.
ಅಧಿಕಾರಿಗಳ ಕೆಂಗಣ್ಣು – ಭದ್ರತಾ ಸಂಸ್ಥೆಗೆ ನೋಟಿಸ್ :
ಈ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಿವಿಲ್ ಸರ್ಜನ್ ಡಾ. ಭೂಪೇಂದ್ರ ಸಿಂಗ್, “ಆಸ್ಪತ್ರೆ ಆವರಣದಲ್ಲಿ ದಂಪತಿಗಳ (Couple) ಇಂತಹ ವರ್ತನೆ ತುಂಬಾ ಅಸಭ್ಯ ಮತ್ತು ವೈದ್ಯಕೀಯ ಸ್ಥಳಕ್ಕೆ ಸೂಕ್ತವಲ್ಲ. ಭದ್ರತಾ ಸಿಬ್ಬಂದಿ ಗಸ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ವಿವರವಾದ ತನಿಖೆ ಪ್ರಾರಂಭಿಸಲಾಗಿದೆ,” ಎಂದು ತಿಳಿಸಿದ್ದಾರೆ.
ಅದೇ ರೀತಿ, ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ವಿಚಾರಣೆಗೆ ಕರೆಸಲಾಗುವುದು. ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಹೆಚ್ಚುವರಿ ಕಣ್ಗಾವಲು ವ್ಯವಸ್ಥೆ ಅಳವಡಿಸಲಾಗುವುದು ಹಾಗೆಯೇ ಸಿಸಿಟಿವಿ ಮೇಲ್ವಿಚಾರಣೆ ಮತ್ತು ರಾತ್ರಿ ಗಸ್ತು ವಲಯವನ್ನು ಬಲಪಡಿಸಲಾಗುವುದು ಎಂದಿದ್ದಾರೆ.
ಇನ್ನು ಆಸ್ಪತ್ರೆ ಆವರಣದ ಭದ್ರತೆ ನೋಡಿಕೊಳ್ಳಲು ಜವಾಬ್ದಾರಿಯುತ ಖಾಸಗಿ ಭದ್ರತಾ ಸಂಸ್ಥೆಗೆ ಕೂಡ ನೋಟಿಸ್ ನೀಡಲಾಗಿದ್ದು, ತಪ್ಪಿಗೆ ಕಾರಣವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಚಲಿಸುವ ಕಾರಿನ ಕಿಟಕಿಯಿಂದ “Nude lady”ಯ ಅಪಾಯಕಾರಿ ಸಾಹಸ ; ವಿಡಿಯೋ ವೈರಲ್.!
ಜನರಲ್ಲಿ ಆಕ್ರೋಶ – ಭದ್ರತೆಯ ಮೇಲೆ ಗಂಭೀರ ಪ್ರಶ್ನೆಗಳು :
ಎರಡು ಘಟನೆಯ ವಿಡಿಯೋಗಳು ಎರಡು–ಮೂರು ದಿನಗಳ ಹಳೆಯದಾಗಿದ್ದರೂ, ಈಗ ವೈರಲ್ ಆಗುತ್ತಿರುವುದರಿಂದ ಆಸ್ಪತ್ರೆ ಆಡಳಿತ ಗಂಭೀರ ಟೀಕೆಗೆ ಗುರಿಯಾಗಿದೆ. ರೋಗಿಗಳು, ಬಂಧುಗಳು ಮತ್ತು ಸ್ಥಳೀಯರು ಆಸ್ಪತ್ರೆಯಂತಹ ಮಹತ್ವದ ಸ್ಥಳದಲ್ಲಿ ಈ ಮಟ್ಟದ ಭದ್ರತಾ ಕೊರತೆ ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ವಿಡಿಯೋ :
View this post on Instagram
Courtesy : KannadaPrabha
Vulgar ವರ್ತನೆ ತೋರಿದ ವ್ಯಕ್ತಿಗೆ ಪೊರಕೆಯಿಂದ ಹೊಡೆದ ನೈರ್ಮಲ್ಯ ಕಾರ್ಯಕರ್ತೆ ; ವಿಡಿಯೋ.

ಜನಸ್ಪಂದನ ನ್ಯೂಸ್, ಚೆನ್ನೈ : ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕಾಮುಕ ವ್ಯಕ್ತಿಯಿಂದ ಅಸಹ್ಯ ಹುಟ್ಟಿಸುವಂತೆ ಅಸಭ್ಯ (Vulgar) ವಾಗಿ ವರ್ತಿಸಿರುವ ಘಟನೆಯೊಂದು ನಡೆದಿದೆ.
ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ನೈರ್ಮಲ್ಯ ಕಾರ್ಯಕರ್ತೆ ಮುಂದೆ ಅಸಭ್ಯ (Vulgar) ವರ್ತನೆ ತೋರಿದ ಪರಿಣಾಮ, ಮಹಿಳೆ ಧೈರ್ಯದಿಂದ ಪ್ರತಿಕ್ರಿಯಿಸಿ ತಕ್ಕ ಶಾಸ್ತಿ ಮಾಡಿದ್ದಾಳೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






