Sunday, December 22, 2024
HomeSpecial Newsಅಪ್ರಾಪ್ತ ಪತ್ನಿ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಸಹ ಅತ್ಯಾಚಾರಕ್ಕೆ ಸಮ; Highcourt.!
spot_img

ಅಪ್ರಾಪ್ತ ಪತ್ನಿ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಸಹ ಅತ್ಯಾಚಾರಕ್ಕೆ ಸಮ; Highcourt.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಅಪ್ರಾಪ್ತ ಹೆಂಡತಿಯೊಂದಿಗೆ (minor wife) ಒಪ್ಪಿತ ಲೈಂಗಿಕ ಕ್ರಿಯೆಯನ್ನು (Consensual sex) ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಅಂತಹ ಕೃತ್ಯವನ್ನು ಕಾನೂನಿನಡಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ (Bombay High Court) ಮಹತ್ವದ ತೀರ್ಪು ನೀಡಿದೆ.

ಈ ಮೂಲಕ ವ್ಯಕ್ತಿಯೊಬ್ಬನಿಗೆ 10 ವರ್ಷಗಳ ಶಿಕ್ಷೆ ನೀಡಿದ್ದ ಹೈಕೋರ್ಟ್‌ನ ನಾಗ್ಪುರ ಪೀಠದ ಆದೇಶವನ್ನು ಎತ್ತಿ ಹಿಡಿದಿದೆ.

ಇದನ್ನು ಓದಿ : Lokayukta Raid : ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆ ಮುಖ್ಯಾಧಿಕಾರಿ.!

ನ್ಯಾಯಮೂರ್ತಿ ಜಿ.ಎ. ಸನಪ್​ ಅವರಿದ್ದ ಏಕಸದಸ್ಯ ಪೀಠವು, ಲೈಂಗಿಕ ಸಂಬಂಧದ ಒಪ್ಪಿಗೆಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಿದೆ. ಅದಕ್ಕಿಂತ ಕಡಿಮೆ ವಯಸ್ಸಿನವರೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಅತ್ಯಾಚಾರಕ್ಕೆ ಸಮ (Equal to ra*e) ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ :
ಮಹಾರಾಷ್ಟ್ರದ (Maharashtra) ವಾರ್ಧಾದಲ್ಲಿ ಸಂತ್ರಸ್ತೆಯು ತನ್ನ ತಂದೆ, ಸಹೋದರಿಯರು ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದಾಳೆ. ಇನ್ನೂ ಆರೋಪಿ ಆಕೆಯ ನೆರೆಯವನಾಗಿದ್ದ. 2019ರಲ್ಲಿ ದೂರು ದಾಖಲಾಗುವ ಮುನ್ನ ಸಂತ್ರಸ್ತೆ ಮತ್ತು ಆರೋಪಿ 3 ರಿಂದ 4 ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ಈ ವೇಳೆ ಆರೋಪಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದರೂ (force) ಸಂತ್ರಸ್ತೆ ಒಪ್ಪಿರಲಿಲ್ಲ.

ಇದನ್ನು ಓದಿ : ಈ blood ಗುಂಪು ಇರುವವರು ಅದೃಷ್ಟವಂತರು; ಇವರಿಗೆ ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆ.!

ಆಬಳಿಕ ಆರೋಪಿಯು ನಿನ್ನನ್ನು ಮದುವೆಯಾಗ್ತೀನಿ ಎಂದು ಭರವಸೆ ನೀಡಿ, ಅಕ್ಕಪಕ್ಕದ ಮನೆಯವರ ಸಮ್ಮುಖದಲ್ಲಿ ಬಾಡಿಗೆ ಕೋಣೆಯಲ್ಲಿ ನಕಲಿ ವಿವಾಹ (fake marriage) ಕಾರ್ಯಕ್ರಮವನ್ನು ಹಮ್ಮಿಕೊಂಡು, ಮದುವೆ ಬಳಿಕ ಆರೋಪಿ, ಸಂತ್ರಸ್ತೆಯ ಮೇಲೆ ತುಂಬಾ ಸಲ ದೌರ್ಜನ್ಯವೆಸಗಿದ್ದಾನೆ.

ಇದರಲ್ಲಿ ಗರ್ಭಪಾತ ಮತ್ತು ದೈಹಿಕ ಹಲ್ಲೆ (Abortion and physical assault) ಸಹ ಆಗಿದೆ. ಮಗು ಜನಿಸಿದ ಬಳಿಕ ತಂದೆ ನಾನಲ್ಲ ಎಂದೂ ಹೇಳಿದ್ದಾನೆ. ಇದರಿಂದ ತೀವ್ರ ಮನನೊಂದ ಸಂತ್ರಸ್ತೆ 2019ರ ಮೇ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬಳಿಕ ಆರೋಪಿಯನ್ನು ಅರೆಸ್ಟ್ ಮಾಡಿದರು.

ಇದನ್ನು ಓದಿ : Job : ಪಿಯುಸಿ ಪಾಸಾದವರಿಗೆ ಲೋಕಾಯುಕ್ತದಲ್ಲಿ ಉದ್ಯೋಗಾವಕಾಶ.!

ಸಂತ್ರಸ್ತೆ ನನ್ನ ಹೆಂಡತಿ ಎಂದ ಆರೋಪಿ, ತಮ್ಮಿಬ್ಬರ ಲೈಂಗಿಕತೆಯು ಒಪ್ಪಿಗೆಯಿಂದ ಕೂಡಿತ್ತು ಎಂದು ಪ್ರತಿವಾದದಲ್ಲಿ (counterargument) ಆರೋಪಿ ಹೇಳಿಕೊಂಡಿದ್ದಾನೆ. ಈ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ, ಅಪರಾಧದ ದಿನದಂದು (day of crime) ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಎಂದು ಸಾಬೀತಾಗಿದೆ ನ್ಯಾಯಮೂರ್ತಿ ಸನಪ್ ಅವರು ತಿಳಿಸಿದರು.

ಇನ್ನೂ ಡಿಎನ್‌ಎ ವರದಿಯು ಆರೋಪಿ ಮತ್ತು ಸಂತ್ರಸ್ತೆ ಸಂಬಂಧದಿಂದ ಜನಿಸಿದ ಮಗುವಿನ ಜೈವಿಕ ಪೋಷಕರು (biological parents) ಅವರೇ ಎಂಬುದನ್ನು ದೃಢಪಡಿಸಿದೆ (confirm) ಎಂದು ಇದೇ ಸಂದರ್ಭದಲ್ಲಿ ಪೀಠ ತಿಳಿಸಿದೆ.

 

ಹಿಂದಿನ ಸುದ್ದಿ ಓದಿ : ಹಳೆಯ ಮೊಬೈಲ್ ಮಾರಿ ನೀವು ಗಳಿಸಬಹುದು 80 ಸಾವಿರ ರೂ.; ಹೇಗೆ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಕೈಯಲ್ಲಿರುವ ಸ್ಮಾರ್ಟ್‌ ಫೋನಿನಲ್ಲಿ ನೆಟ್ ವರ್ಕ್ ಸ್ಲೋ ಆಗಿದ್ದರೆ, ಅಥವಾ ಏನಾದರೂ ಪ್ರಾಬ್ಲಂಆದರೆ ಆ ಫೋನ್ ಬಿಟ್ಟು ಹೊಸ ಸ್ಮಾರ್ಟ್ ಫೋನ್ (new smartphone) ಖರೀದಿಗೆ ಮುಂದಾಗುತ್ತೇವೆ.

ಹಬ್ಬಗಳಲ್ಲಿಯೂ ಸಹ ಕೆಲ ಶೋರೂಮ್‌ಗಳು ಹಳೆ ಫೋನ್ ಸ್ವೀಕರಿಸುವ ಆಫರ್ ನೀಡುತ್ತಿರುತ್ತವೆ.

ಆದರೆ ನೀವು ಯಾವ ಶೋರೂಮ್‌ಗಳಲ್ಲಿ ಈ ಆಫರ್ ಇದೆ ಎಂದು ಹುಡುಕುವ ಅಗತ್ಯವಿಲ್ಲ. ಆನ್ಲೈನ್ ಮೂಲಕ ಮನೆಯಲ್ಲಿಯೇ ಕುಳಿತು ಸ್ಮಾರ್ಟ್ ಫೋನ್ ಮಾರಿ 80 ಸಾವಿರ ರೂಪಾಯಿವರೆಗೂ ಹಣ ಪಡೆಯಬಹುದು.

ಇದನ್ನು ಓದಿ : ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!

ದಿನದಿಂದ ದಿನಕ್ಕೆ ಹಳೆಯ ಸ್ಮಾರ್ಟ್‌ಫೋನ್ ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಬಹಳಷ್ಟು ಜನರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಹಳೆಯ (old) ಫೋನ್ ಮಾರಾಟ ಮಾಡಬಹುದು ಎಂಬ ವಿಷಯ ಗೊತ್ತಿಲ್ಲ.

ನೀವು ಮೊದಲು ಆನ್‌ಲೈನ್‌ನಲ್ಲಿ request ಮಾಡಿ, ನಿಮ್ಮ ಹಳೆಯ ಫೋನ್ ವಿವರಗಳನ್ನು entry ಮಾಡಿ. ಫ್ಲಿಪ್‌ಕಾರ್ಟ್ ಎಲ್ಲಾ ಮಾಹಿತಿಯನ್ನು ಪರಿಗಣಿಸಲಾಗುತ್ತದೆ. ಬಳಿಕ ಒಂದು ಬೆಲೆ ನಿಗದಿ ಮಾಡಿ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಖರೀದಿಸುತ್ತದೆ. ಫೋನ್‌ ಸ್ಥಿತಿಗೆ ಅನುಗುಣವಾಗಿ ಬೆಲೆ ಫಿಕ್ಸ್ ಮಾಡಲಾಗುತ್ತದೆ.

ಇದನ್ನು ಓದಿ : Health : ಬೆಳಿಗ್ಗೆ ಗೋಡಂಬಿಯನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

ಈ ರೀತಿ ಮಾರಾಟ ಮಾಡಬಹುದು :
Flipkart reset for instant cash service ಎಂಬ ಹೆಸರಿನಲ್ಲಿ ಡೆಡಿಕೇಟೆರಡ್ ಎಂಬ ಪೇಜ್ ಇದೆ. Flipkart Reset ಪೇಜ್‌ಗೆ (https://www.flipkart.com/reset-sell-store) ಭೇಟಿ ಕೊಡಿ. ಬಳಿಕ ಇಲ್ಲಿಯ ಕೆಲವು ಸ್ಟೆಪ್ಸ್ ಗಳನ್ನು ನೀವು follow ಮಾಡಿ.

ಮೊದಲು ನಿಮ್ಮ ಹಳೆಯ ಫೋನ್ details ಎಂಟ್ರಿ ಮಾಡಬೇಕು. ಫೋನ್ ಹೆಸರು, model ಸೇರಿದಂತೆ ಅಲ್ಲಿ ಇರುವ ಎಲ್ಲಾ ಮಾಹಿತಿಯನ್ನು ನಮೂದಿಸಿ. ಬಳಿಕ ಫೋನ್ ಮಾರಾಟ ಮಾಡುವ request ನೀಡಬೇಕು. ಆಬಳಿಕ ಫ್ಲಿಪ್‌ಕಾರ್ಟ್ ಸಿಬ್ಬಂದಿ ನೀವು ನಮೂದಿಸಿರುವ ಸ್ಥಳಕ್ಕೆ ಬರುತ್ತಾರೆ.

ನಂತರ ನಿಮ್ಮ ಸ್ಮಾರ್ಟ್‌ಫೋನ್ ನ್ನು ಅವರು ಪರಿಶೀಲನೆ ಮಾಡಿ, ಅಸೆಸ್ಮೆಂಟ್ ಮಾಡಿ ಅದರ ಗುಣಮಟ್ಟ (quality) ಆಧಾರಿಸಿ ಬೆಲೆ ನಿಗದಿ ಮಾಡುತ್ತಾರೆ. ನಂತರ ಫೋನ್ ತೆಗೆದುಕೊಂಡು ಹೋಗುವದರ ಬಗ್ಗೆ ನಿರ್ಧರಿಸಲಾಗುತ್ತದೆ.

ಇದನ್ನು ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!

Mobile pickup ಆದ ಬಳಿಕ ನಿಮಗೆ ಯಾವ ರೂಪದಲ್ಲಿ ಪೇಮೆಂಟ್ ಬೇಕು ಎಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಹಣವನ್ನು ವರ್ಗಾಯಿಸಲಾಗುತ್ತದೆ.

ಮನೆ ಬಾಗಿಲಿಗೆ ಬಂದು Mobile pickup ಮಾಡಿ ತೆಗೆದುಕೊಂಡು ಹೋಗಲಾಗುತ್ತದೆ. ಫ್ಲಿಪ್‌ಕಾರ್ಟ್ ಸಹ ಹಳೆಯ ಫೋನ್‌ಗಳನ್ನು ಮಾರಾಟ ಮಾಡುವ ಈ ಸೇವೆ ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದೆ. ಫ್ಲಿಪ್‌ಕಾರ್ಟ್ ನಿಮ್ಮ ಹಳೆಯ ಫೋನ್‌ನ್ನು ಗರಿಷ್ಠ 80,000 ರೂಪಾಯಿಗಳ ತನಕ ಖರೀದಿಸುತ್ತದೆಯಂತೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments