Sunday, December 8, 2024
HomeState NewsLokayukta Raid : ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆ ಮುಖ್ಯಾಧಿಕಾರಿ.!
spot_img

Lokayukta Raid : ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆ ಮುಖ್ಯಾಧಿಕಾರಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal) ಪುರಸಭೆ ಮುಖ್ಯಾಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಭಟ್ಕಳ ಪುರಸಭೆ ಮುಖ್ಯಾಧಿಕಾರಿ (Chief Officer) ನೀಲಕಂಠ ಮೇಸ್ತಾ ಹಾಗೂ ಚಾಲಕ ಶಂಕರ್ ನಾಯ್ಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇದನ್ನು ಓದಿ : ಈ blood ಗುಂಪು ಇರುವವರು ಅದೃಷ್ಟವಂತರು; ಇವರಿಗೆ ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆ.!

ಮುಖ್ಯಾಧಿಕಾರಿ ನೀಲಕಂಠ ಒಳಚರಂಡಿ ಕಾಮಗಾರಿಗಾಗಿ 50 ಸಾವಿರ ರೂ. ಲಂಚ (bribe) ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಹಮದ್ ಇದ್ರೀಸ್ ಎಂಬುವವರು ನಿರಾಪೇಕ್ಷಣಾ ಪತ್ರ (letter of reluctance) ಪಡೆಯಲು ಪುರಸಭೆಗೆ (municipality) ಅಲೆದಾಟ ನಡೆಸಿದ್ದರು. ಈ ವೇಳೆ ಮುಖ್ಯಾಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಇದನ್ನು ಓದಿ : ಶಾಸಕ ಮುನಿರತ್ನಗೆ ಸಹಕಾರ ಆರೋಪ : ಪೊಲೀಸ್ ಇನ್ಸ್‌ಪೆಕ್ಟರ್ Arrest.!

ಹೀಗಾಗಿ ಇದ್ರೀಸ್ ಲೋಕಾಯುಕ್ತರನ್ನು ಸಂಪರ್ಕಿಸಿ ದೂರು (complaint) ನೀಡಿದ್ದರು. ಇಂದು ಲಂಚದ ಹಣವನ್ನು ಮುಖ್ಯಾಧಿಕಾರಿಯ ವಾಹನ ಚಾಲಕನ ಮುಖಾಂತರ ಹಣ ಪಡೆಯುತ್ತಿದ್ದ ವೇಳೆ ತಕ್ಷಣ ಲೋಕಾಯುಕ್ತರು ದಾಳಿ (raid) ಮಾಡಿ, ವಾಹನ ಚಾಲಕ ಹಾಗೂ ಮುಖ್ಯಾಧಿಕಾರಿಯನ್ನು ವಶಕ್ಕೆ (custody) ಪಡೆದು ತನಿಖೆ ಆರಂಭಿಸಿದ್ದಾರೆ‌.

 

ಹಿಂದಿನ ಸುದ್ದಿ ಓದಿ : ಹಿಂದೂ ಸಂಪ್ರದಾಯದ ಪ್ರಕಾರ, ಯಾರು ಯಾವ ಬೆರಳಿನಿಂದ ತಿಲಕವನ್ನು ಧರಿಸಬೇಕು?

ಜನಸ್ಪಂದನ ನ್ಯೂಸ್, ಡೆಸ್ಕ್ : ತಿಲಕ ಇಟ್ಟ ವ್ಯಕ್ತಿಯ ಮುಖವು ಅತಿ ಸುಂದರವಾಗಿ ಕಾಣುತ್ತದೆ. ಇದು ಹಿಂದೂ ಸಂಪ್ರದಾಯದಲ್ಲಿ ಕೇವಲ ಸಂಕೇತವಲ್ಲ. ಧೈರ್ಯ, ಸಕಾರಾತ್ಮಕತೆ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ.

ಪ್ರತಿಯೊಂದು ಬೆರಳಿನ ಮೂಲಕ ಕುಂಕುಮ ಹಚ್ಚಿಕೊಳ್ಳಲು ಒಂದು ವಿಭಿನ್ನ ಅರ್ಥವಿದೆ. ಅದು ಏನಂತಾ ಮುಂದೆ ಓದಿ.

ಇದನ್ನು ಓದಿ : Job : ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಗುಡ್ ನ್ಯೂಸ್.!

ಉಂಗುರ ಬೆರಳು :
ಭಕ್ತಿ ಮತ್ತು ಬದ್ಧತೆಗೆ ಸಂಬಂಧಿಸಿದ ಉಂಗುರದ ಬೆರಳಿನಿಂದ ತಿಲಕವನ್ನು ಹಚ್ಚುವಾಗ ಅದು ಶಾಂತಿ, ಮಾನಸಿಕ ಸ್ಥಿರತೆ, ಬುದ್ಧಿವಂತಿಕೆಯ ಬಿಂದುಗಳನ್ನು ಸುಧಾರಿಸುತ್ತದೆ. ಅಲ್ಲದೇ ಬೌದ್ಧಿಕ ಯಶಸ್ಸಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ

ಈ ಬೆರಳಿನ ಸಹಾಯದಿಂದ ದೇವರಿಗೆ ತಿಲಕವನ್ನು ಇಟ್ಟರೆ ಜೀವನದಲ್ಲಿ ಸಮೃದ್ಧಿ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಹಣೆಗೆ ತಿಲಕ ಅಥವಾ ಕುಂಕುಮ ಇಡುವ ವೇಳೆ ಉಂಗುರದ ಬೆರಳನ್ನು ಉಪಯೋಗಿಸಿದರೆ ಒಳ್ಳೆಯದು.

ಇದನ್ನು ಓದಿ : ನಗ್ನ ಪೋಟೋ ಕಳುಹಿಸುವಂತೆ ವೈದ್ಯೆಗೆ ಕಿರುಕುಳ ನೀಡಿದ PSI.!

ಮಧ್ಯದ ಬೆರಳು :
ಶನಿ ಗ್ರಹವನ್ನು ಪ್ರತಿನಿಧಿಸುವ ಮಧ್ಯದ ಬೆರಳು, ನಮ್ಮ ಬದುಕಿನಲ್ಲಿ ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಸಾಮಾನ್ಯವಾಗಿ ತಮ್ಮ ಮನೆಯ ಮಕ್ಕಳಿಗೆ ಹಿರಿಯರು ಮಧ್ಯದ ಬೆರಳಿನಿಂದ ತಿಲಕವನ್ನು ಹಚ್ಚುತ್ತಾರೆ. ಈ ಬೆರಳಿನಿಂದ ಹಚ್ಚಿದರೆ ದೀರ್ಘಾಯುಷ್ಯ ಮತ್ತು ಸುರಕ್ಷತೆ ದೊರೆಯುತ್ತದೆ ಎಂಬ ನಂಬಿಕೆ ಅವರದ್ದು.

ತೋರು ಬೆರಳು :
ತೋರು ಬೆರಳನ್ನು ಬದುಕಿದವರಿಗೆ ಕುಂಕುಮ ಅಥವಾ ತಿಲಕ ಹಚ್ಚಲು ಎಂದಿಗೂ ಬಳಸುವುದಿಲ್ಲ. ಅಗಲಿದ ಅಥವಾ ಮರಣ ಹೊಂದಿದ ಜನರನ್ನು ಗೌರವಿಸುವ ವೇಳೆ ತೋರು ಬೆರಳನ್ನು ಮಾತ್ರ ಬಳಸಲಾಗುತ್ತದೆ. ಈ ತೋರುಬೆರಳು ಮೋಕ್ಷಕ್ಕೆ ಸಂಬಂಧಿಸಿದೆ. ಸಾಮಾನ್ಯವಾಗಿ ಮರಣದ ಆಚರಣೆಗಳನ್ನು ಮಾಡುವಾಗ ಅಥವಾ ತರ್ಪಣ ವಿಧಿಯಲ್ಲಿ ಇದನ್ನು ಬಳಸುತ್ತಾರೆ.

ಇದನ್ನು ಓದಿ : ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!

ಹೆಬ್ಬೆರಳು :
ಯಶಸ್ಸು, ವಿಜಯ ಮತ್ತು ಶಕ್ತಿಯ ಆಶೀರ್ವಾದವನ್ನು ಸ್ವೀಕರಿಸಲು ಅಥವಾ ನೀಡಲು ಅತ್ಯುತ್ತಮ ಬೆರಳು ಎಂದರೆ ಅದು ಹೆಬ್ಬೆರಳು. ಹಿಂದೆ ರಾಜರ ಕಾಲದಲ್ಲಿ ವಿಜಯ ಸಾಧಿಸಿ ಬರಲು ಈ ಹೆಬ್ಬೆರಳನ್ನು ಬಳಸಿ ಹಣೆಯ ಮೇಲೆ ತಿಲಕವನ್ನು ಹಚ್ಚುತ್ತಿದ್ದರು. ಜನರು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಹೋಗುವ ಸಂದರ್ಭ ಈ ಹೆಬ್ಬೆರಳಿನಿಂದ ಕುಂಕುಮ ಹಚ್ಚಿಕೊಂಡು ತೆರಳುವರು. ಹಿಂದೂ ಸಂಪ್ರದಾಯವು ವ್ಯಕ್ತಿಯ ಹಣೆಗೆ ಈ ಬೆರಳಿನಿಂದ ತಿಲಕವಿಟ್ಟರೆ ತುಂಬಾ ಒಳ್ಳೆಯದು ಎಂದು ನಂಬಿಕೆ ಇಟ್ಟಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments