Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ನಾಲಿಗೆಯ ಬಣ್ಣವೇ ಹೇಳುತ್ತೆ ನಿಮ್ಮ ಆರೋಗ್ಯದ ಬಗ್ಗೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಪ್ರತಿಯೊಂದು ರೋಗವು ತನ್ನದೇ ಆದ ಕೆಲವು ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಅವುಗಳನ್ನು ಮೊದಲೇ ಪತ್ತೆಹಚ್ಚಿದರೆ ಚಿಕಿತ್ಸೆ ಪಡೆಯಲು ಸುಲಭವಾಗುತ್ತದೆ.

ಆದರೆ ಕೆಲವೊಂದು ಸಂದರ್ಭಗಳಲ್ಲಿ ಆ ಲಕ್ಷಣಗಳನ್ನು ಪತ್ತೆಹಚ್ಚುವುದು ತುಂಬಾ ಕಷ್ಟ. ಇಲ್ಲಿ ನಾವು ನಾಲಗೆಯ ಬಗ್ಗೆ ಹೇಳುತ್ತಿದ್ದೇವೆ. ಕೆಲವು ಕಾಯಿಲೆಗಳ ಲಕ್ಷಣಗಳನ್ನು ನಾಲಗೆಯಿಂದ ತಿಳಿಯಬಹುದಂತೆ. ಈ ರೋಗಗಳು ತೀವ್ರವಾದಾಗ ಮಾರಣಾಂತಿಕ ಪರಿಣಾಮಗಳನ್ನು ಬೀರಬಹುದು. ನಿಮ್ಮ ನಾಲಿಗೆಯ ಬಣ್ಣವು ನಿಮ್ಮ ಆರೋಗ್ಯವನ್ನು ಸೂಚಿಸುತ್ತದೆ.

ಇದನ್ನು ಓದಿ : ಹಾಸ್ಟೆಲ್‌ನಲ್ಲಿ ನೀಡಿದ ಚಟ್ನಿಯಲ್ಲಿ ಜೀವಂತ ಇಲಿ ಕಂಡು ಅಸಹ್ಯಪಟ್ಟ ವಿದ್ಯಾರ್ಥಿಗಳು ; ಶಾಕಿಂಗ್ video ವೈರಲ್.!

ಬಿಳಿ ಬಣ್ಣ :
ನಾಲಿಗೆಯ ಬಣ್ಣವು ಸಂಪೂರ್ಣವಾಗಿ ಬಿಳಿಯಾಗಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಇದರರ್ಥ ದೇಹದಲ್ಲಿ ನಿರ್ಜಲೀಕರಣದ (Dehydration) ಸಮಸ್ಯೆ ಇದೆ. ಆಗಾಗ್ಗೆ ಈ ಸಮಸ್ಯೆ ಧೂಮಪಾನದಿಂದಲೂ ಉಂಟಾಗುತ್ತದೆ.

ಈ ರೀತಿ ಒಂದು ವೇಳೆ ನಾಲಗೆಯ ಬಣ್ಣ ಬಿಳಿಯಾಗಿದ್ದಾರೆ ಅದು ಲ್ಯುಕೋಪ್ಲಾಕಿಯಾ (Leukoplakia) ಕೂಡ ಇರಬಹುದು. ಹೇಗಾದರೂ, ಕೆಲವೊಮ್ಮೆ ಜ್ವರವಿದ್ದಾಗಲೋ ಕೂಡ ನಾಲಿಗೆ ಒಣಗಲು ಪ್ರಾರಂಭಿಸಿದಾಗ, ಬಣ್ಣವು ಈ ರೀತಿ ಆಗುತ್ತದೆ.

ಕಪ್ಪು ಬಣ್ಣ :
ನಾಲಿಗೆಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆಗಾಗ್ಗೆ ಚೈನ್ ಸ್ಮೋಕರ್ ಗಳಲ್ಲಿ ನಾಲಿಗೆಯ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ಸ್ಥಿತಿಯಲ್ಲಿ ಕ್ಯಾನ್ಸರ್ ನಂತಹ (Cancer) ಮಾರಕ ಕಾಯಿಲೆಯ ಸಂಕೇತವಿರುತ್ತದೆ. ಹುಣ್ಣು (Ulcer) ಅಥವಾ ಶಿಲೀಂಧ್ರ ಸೋಂಕು (Fungal Infection) ಇದ್ದರೂ, ನಾಲಿಗೆ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ನೀಲಿ ಬಣ್ಣ :
ನಾಲಿಗೆಯ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದರೆ, ನಿಮಗೆ ಹೃದಯದ ತೊಂದರೆಗಳು (Heart problems) ಉಂಟಾಗಬಹುದು. ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡದೆ ಹೋದಲ್ಲಿ ಅಥವಾ ರಕ್ತದಲ್ಲಿನ ಆಮ್ಲಜನಕವು ಕಡಿಮೆಯಾಗಲು ಪ್ರಾರಂಭಿಸಿದಾಗ ನಾಲಿಗೆಯ ಬಣ್ಣ ನೀಲಿ ಬಣ್ಣಕ್ಕೆ ತಿರುಗುತ್ತದೆ. ಈ ಪರಿಸ್ಥಿತಿಯು ಎಚ್ಚರಿಕೆಯ ಗಂಟೆಯಾಗಿದೆ.

ಹಳದಿ ಬಣ್ಣ :
ಅಕಸ್ಮಾತ್ತಾಗಿ ನಾಲಿಗೆ ಬಣ್ಣ ಹಳದಿ ಬಣ್ಣದ್ದಾಗಿದ್ದರೂ ಕೂಡ ಅದನ್ನು ಸಾಮಾನ್ಯ ಎಂದು ಪರಿಗಣಿಸಬಾರರು. ದೇಹದಲ್ಲಿ ಪೌಷ್ಟಿಕ ಅಂಶಗಳ (Nutritious Elements) ಕೊರತೆಯಿದ್ದಾಗ ಆಗಾಗ್ಗೆ ಇದು ಸಂಭವಿಸುತ್ತದೆ. ಇದಲ್ಲದೆ, ಜೀರ್ಣಾಂಗ ವ್ಯವಸ್ಥೆಯಲ್ಲಿನ (Digestive System) ಅಡಚಣೆಯಿಂದಾಗಿ, ನಾಲಿಗೆ ಬಣ್ಣ ಹಳದಿ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯಕೃತ್ತು ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.

ಕೆಂಪು ಬಣ್ಣ :
ಪ್ರಕಾಶಮಾನವಾದ ಕೆಂಪು ನಾಲಿಗೆಯು ಸಾಮಾನ್ಯವಾಗಿ ಊದಿಕೊಂಡಿರುತ್ತದೆ. ಇದನ್ನು ವೈದ್ಯರು “ಸ್ಟ್ರಾಬೆರಿ ನಾಲಿಗೆ” ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ರಕ್ತ ಅಸ್ವಸ್ಥತೆಗಳು ಅಥವಾ ಹೃದಯ ಸಮಸ್ಯೆಗಳನ್ನು ಸೂಚಿಸುತ್ತದೆ. ಇದು ವಿಟಮಿನ್ ಬಿ ಕೊರತೆ ಅಥವಾ ಸ್ಕಾರ್ಲೆಟ್ ಜ್ವರದ ಸೂಚನೆಯಾಗಿರಬಹುದು.

ಇದನ್ನು ಓದಿ : ಈ ಗಿಡದಲ್ಲಿ ಸಂಗ್ರಹವಾದ ನೀರು Kidney stone ಗೆ ರಾಮಬಾಣ ; ಕುಡಿದ ತಕ್ಷಣ ಮೂತ್ರದ ಮೂಲಕ ಹೊರಬರುತ್ತೆ ಕಲ್ಲು.!

ತಿಳಿ ಗುಲಾಬಿ :
ಸಾಮಾನ್ಯವಾಗಿ ನಾಲಿಗೆಯ ಬಣ್ಣ ತಿಳಿಗುಲಾಬಿ ಬಣ್ಣದ್ದಾಗಿರುತ್ತದೆ. ಅದರ ಮೇಲೆ ಸಣ್ಣ ಪ್ರಮಾಣದ ಬಿಳಿ ಬಣ್ಣದ ಲೇಪವಿದ್ದರೂ ಕೂಡ ಚಿಂತಿಸುವ ಅವಶ್ಯಕತೆ ಇಲ್ಲ. ಆದರೆ, ನಿಮ್ಮ ಆಹಾರದ ಕುರಿತು ಗಮನ ಹರಿಸಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img