Sunday, September 8, 2024
spot_img
spot_img
spot_img
spot_img
spot_img
spot_img
spot_img

ಸಂಪೂರ್ಣವಾಗಿ ಹಾವನ್ನೇ ನುಂಗಿ ಹೊರಹಾಕಿದ ನಾಗರಹಾವು ; ಮೈ ಜುಮ್ಮೆನಿಸುವ ವಿಡಿಯೋ Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಎಲ್ಲರಿಗೂ ಹಾವುಗಳೆಂದರೆ ತುಂಬಾ ಭಯವಾಗುವುದು ಸಹಜ, ಹೀಗಾಗಿ ಹಾವುಗಳು ಬಂತೆಂದರೆ ದೂರ ಓಡುವವರೇ ಹೆಚ್ಚು. ಈ ಹಾವುಗಳು ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿಗಳಲ್ಲಿ ಒಂದು.

ಇದನ್ನು ಓದಿ : 3 ಅಡಿ ಕುಳ್ಳನಿಗೆ 7 ಅಡಿ ಎತ್ತರದ ಗರ್ಲ್‌ಫ್ರೆಂಡ್.! ಇವರ ಪ್ರಣಯದ ವಿಡಿಯೋ ಪುಲ್‌ Viral.!

ಅನಾದಿ ಕಾಲದಿಂದಲೂ ಹಾವನ್ನು ಪೂಜಿಸುತ್ತ ಬಂದಿರುವ ಭಾರತೀಯರು ಅವುಗಳ ಬಗ್ಗೆ ಆಳ ಅಧ್ಯಯನ ಮಾಡಿಲ್ಲ. ಪರಿಸರ ಸಮತೋಲನದಲ್ಲಿ ಈ ಹಾವುಗಳ ಪಾತ್ರವು ಬಹಳ ದೊಡ್ಡದು.

ಸದ್ಯ ಬೃಹತ್ ನಾಗರಹಾವೊಂದು ಹಾವನ್ನು ನುಂಗಿ ಮತ್ತೆ ಆ ಇಡೀ ಹಾವನ್ನು ಹೊರಹಾಕುವ ವಿಡಿಯೋವನ್ನು ಸೆರೆಹಿಡಿಯಲಾಗಿದೆ.

ಇದನ್ನು ಓದಿ : ನಡು ಬೀದಿಯಲ್ಲೇ ಪುಟ್ಟ ಬಾಲಕನ ಮೇಲೆ ಮಂಗಗಳ ದಾಳಿ : ಸಹಾಯಕ್ಕೆ ಬಾರದ ಮಹಿಳೆಯರ ನಡೆಗೆ ನೆಟ್ಟಿಗರ ಆಕ್ರೋಶ ; Video ವೈರಲ್.!

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ.​ ಟ್ವಿಟರ್‌ನಲ್ಲಿ 1,12,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿರುವ ಈ ವಿಡಿಯೋ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡ ಈ ವಿಡಿಯೋ ಕ್ಲಿಪ್ ಜನರನ್ನು ಅಚ್ಚರಿಗೊಳಿಸಿದೆ. ದೊಡ್ಡ ನಾಗರಹಾವು ಸಣ್ಣ ಹಾವೊಂದನ್ನು ನುಂಗಿದ್ದು, ನಂತರ ಬಲವಂತವಾಗಿ ತನ್ನ ಬಾಯಿಯಿಂದ ಸಂಪೂರ್ಣವಾಗಿ ಜೀವಂತ ಹಾವನ್ನು ಹೊರಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ಓದಿ : ಹಳೆಯ ಹಾಡಿಗೆ 90 ವರ್ಷದ ಅಜ್ಜಿಯ ಮಸ್ತ್‌ ಮಸ್ತ್ ಸ್ಟೆಪ್ಸ್ ; ವಿಡಿಯೋ ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ.!

ಬೃಹದಾಕಾರದ ಹಾವು ಮಧ್ಯಮ ಗಾತ್ರದ ಹಾವನ್ನು ಗುಳುಂ ಸ್ವಾಹಾ ಮಾಡಿದೆ. ಬಳಿಕ ಅದು ನುಂಗಿದ ಹಾವನ್ನು ಸಂಪೂರ್ಣವಾಗಿ ಹೊರಗೆ ಕಕ್ಕಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಬಹುಶಃ ಹಾವಿನ ಹೊಟ್ಟೆ ತುಂಬಿರಬಹುದು. ಹಾಗಾಗಿಯೇ ಅದು ಆ ಹಾವನ್ನು ವಾಪಾಸ್ ಬಾಯಿಯಿಂದ ಹೊರಹಾಕಿದೆ ಎಂದಿದ್ದಾರೆ. ಇನ್ನೊಬ್ಬರು, ಸುತ್ತಲೂ ಜನರು ನೆರೆದಿದ್ದರಿಂದ ಈ ರೀತಿ ಮಾಡಿರಬಹುದು ಎಂದಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img