Tuesday, September 17, 2024
spot_img
spot_img
spot_img
spot_img
spot_img
spot_img
spot_img

ಡೆಂಗ್ಯೂಗೆ ಮಕ್ಕಳೇ ಹೆಚ್ಚು ಟಾರ್ಗೆಟ್‌ ; ಮಕ್ಕಳಿರುವ ಪಾಲಕರೇ be alert.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಮಳೆಗಾಲ ಬಂದಿದೆ. ಮಳೆಗಾಲದ ಜೊತೆಗೆ ಸಹಜವಾಗಿ, ಜ್ವರ, ಶಿತ, ನೆಗಡಿ, ಕೆಮ್ಮುಗಳೂ ಬಂದಿವೆ. ಮುಖ್ಯವಾಗಿ, ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿರುವ ಡೆಂಗ್ಯೂ ಜ್ವರ ಕೂಡಾ ದಿನೇ ದಿನೇ ಹೆಚ್ಚಾಗುತ್ತಿವೆ.

ಈಗಾಗಲೇ, ಕರ್ನಾಟಕದಲ್ಲಿ ಡೆಂಗ್ಯೂನಿಂದ ಸಾವಿರಾರು ಮಂದಿ ಬಳಲುತ್ತಿದ್ದು, ಅದರಲ್ಲೂ ಈ ಮಹಾಮಾರಿ ಮಕ್ಕಳಿಗೆ ಹೆಚ್ಚು ವಕ್ಕರಿಸಿಕೊಳ್ಳುತ್ತಿದೆ.

ಇದನ್ನು ಓದಿ : SSLC ಪಾಸಾಗಿದ್ದೀರಾ.? ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಒಟ್ಟು ಜನವರಿಯಿಂದ ಇಲ್ಲಿಯವರೆಗೆ 1 ರಿಂದ 18 ವರ್ಷ ವಯಸ್ಸಿನ 2395 ಮಕ್ಕಳಿಗೆ ಡೆಂಗ್ಯೂ ಬಾಧಿಸಿದೆ. 24 ಗಂಟೆಯಲ್ಲಿ 1 ವರ್ಷದೊಳಗಿನ ಏಳು ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಒಂದು ವಾರದ ಹಿಂದೆ ನಾಲ್ಕು ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಜನೆವರಿಯಿಂದ ಒಟ್ಟು 150 ಮಕ್ಕಳಿಗೆ ಡೆಂಗ್ಯೂ ಪಾಸಿಟಿವ್ ಬಂದಿಸಿದೆ.

ಕಳೆದ 24 ಗಂಟೆಯಲ್ಲಿ 1 ವರ್ಷದಿಂದ 18 ವರ್ಷದೊಳಗಿನ 154 ಮಕ್ಕಳಿಗೆ ಡೆಂಗ್ಯೂ ಬಂದಿದೆ. ಒಂದು ವಾರದ ಹಿಂದೆ 1 ವರ್ಷದಿಂದ 18 ವರ್ಷದೊಳಗಿನ 44 ಮಕ್ಕಳಿಗೆ ಡೆಂಗ್ಯೂ ಬಾಧಿಸಿತ್ತು. ಜನವರಿಯಿಂದ ಇಲ್ಲಿಯವರೆಗೆ ಒಟ್ಟು 2395 ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ ಎಂದು ಕೆಸಿ ಜನರಲ್ ಆಸ್ಪತ್ರೆ ವೈದ್ಯೆ ರಶ್ಮಿ ತಿಳಿಸಿದ್ದಾರೆ.

ಆರಂಭದಲ್ಲಿ ಮಕ್ಕಳಿಗೆ ಸಣ್ಣ ಪ್ರಮಾಣದಲ್ಲಿ ಜ್ವರದ ರೂಪದಲ್ಲಿ ಕಾಣಿಸಿಕೊಂಡು ನಂತರ ತೀವ್ರ ಸ್ವರೂಪಕ್ಕೆ ತಿರುಗುತ್ತಿದೆ. ಪೋಷಕರು ನಿರ್ಲಕ್ಷ್ಯ ವಹಿಸಿದರೆ ಮಕ್ಕಳು ಡೆಂಗ್ಯೂ ವಾರಗಟ್ಟಲೇ ತೀವ್ರ ಜ್ವರ, ವಿಪರೀತ ತಲೆನೋವು, ಮೈ-ಕೈ ನೋವು, ಗಂಟುಗಳಲ್ಲಿ ನೋವು, ಒಸಡು ಹಾಗೂ ಮೂಗಿನಿಂದಲೂ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ : Health : ಹೃದಯಾಘಾತಕ್ಕೂ 1 ತಿಂಗಳ ಮುಂಚೆಯೆ ದೇಹ ನೀಡುತ್ತೆ ಈ 6 ಎಚ್ಚರಿಕೆ ಸೂಚನೆಗಳನ್ನು.!

ಡೆಂಗ್ಯೂನಿಂದ ಮಕ್ಕಳಲ್ಲಿ ತೀವ್ರ ದೀರ್ಘಕಾಲಿಕ ಜ್ವರ, ಉಸಿರಾಟದ ಸಮಸ್ಯೆ, ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದ್ದು ಯಾವುದೇ ಕಾರಣಕ್ಕೂ ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇನ್ನು ಡೆಂಗ್ಯೂ ಜ್ವರವು ಏಡಿಸ್‌ ಈಜಿಪ್ಟಿ ಎಂಬ ಸೋಂಕುಪೀಡಿತ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್‌ ಮೂಲಕ ಬರುವ ಸೋಂಕು. ಡೆಂಗ್ಯೂ ಜ್ವರ ಇರುವ ರೋಗಿಯ ರಕ್ತ ಹೀರಿದ ಸೊಳ್ಳೆಯು ಬೇರೆ ವ್ಯಕ್ತಿಗಳಿಗೆ ಕಚ್ಚುವುದರಿಂದ ಈ ವೈರಸ್‌ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಡೆಂಗ್ಯೂ ಜ್ವರ ಹರಡುವ ಸೊಳ್ಳೆಗಳು ಸಾಮಾನ್ಯವಾಗಿ ಹಗಲುಹೊತ್ತಿನಲ್ಲಿ ಕಡಿಯುತ್ತವೆ.

ಲಕ್ಷಣಗಳು :
ವಿಪರೀತ ಆಯಾಸ, ಮೈಕೈ ನೋವು, ಮಾಂಸಖಂಡ ಮತ್ತು ಗಂಟುಗಳ ನೋವು, ಸ್ನಾಯು ಸೆಳೆತ, ತಲೆನೋವು, ವಾಂತಿ ಇತ್ಯಾದಿ ಸಾಮಾನ್ಯ ಜ್ವರದ ಲಕ್ಷಣಗಳು ಮಾತ್ರ ಇದ್ದು, ಒಂದೆರಡು ವಾರಗಳಲ್ಲಿ ಗುಣಮುಖರಾಗಬಹುದು.

ಇದನ್ನು ಓದಿ : ಫೋಸ್ಟ್‌ ಆಫೀಸ್‌ ನಲ್ಲಿ 30,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಭರ್ತಿ ; 10ನೇ ತರಗತಿ ಪಾಸಾಗಿದ್ದರೆ ಸಾಕು.!

ಆದರೆ ಕೆಲ ಜನರಲ್ಲಿ ಮಾತ್ರ ಜ್ವರವು ಉಲ್ಬಣಿಸಿ ತೀವ್ರವಾದ ಹೊಟ್ಟೆನೋವು, ಭೇದಿ, ರಕ್ತಸ್ರಾವ, ಉಸಿರಾಟದ ಲಕ್ಷಣಗಳು, ಅಂಗಾಂಗಗಳ ವೈಫಲ್ಯ ಮತ್ತು ಆಘಾತ ಕಾಣಿಸಿಕೊಳ್ಳಬಹುದು.

ಮುನ್ನೆಚ್ಚರಿಕೆ :
• ಮನೆ, ಶಾಲೆ ಸುತ್ತಮುತ್ತ ಸ್ವಚ್ಛವಾಗಿಡಬೇಕು.
• ಸೊಳ್ಳೆ ಉತ್ಪತ್ತಿಯನ್ನು ತಡೆಯಬೇಕು.
• ಸೊಳ್ಳೆ ಕಚ್ಚದಂತೆ ಮನೆಯಲ್ಲಿ ಸೊಳ್ಳೆ ಪರದೆ ಹಾಕಬೇಕು.
• ಮಕ್ಕಳ ಬಳಿ ಸೊಳ್ಳೆ ಸುಳಿಯದಂತೆ ಎಚ್ಚರ ವಹಿಸಬೇಕು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img