Wednesday, March 12, 2025
HomeCrime Newsಲಾರಿಗೆ ಗುದ್ದಿದ ಕಾರು : ಸ್ಥಳದಲ್ಲಿಯೇ ಐವರು ಸಾ*.!
spot_img
spot_img
spot_img
spot_img
spot_img

ಲಾರಿಗೆ ಗುದ್ದಿದ ಕಾರು : ಸ್ಥಳದಲ್ಲಿಯೇ ಐವರು ಸಾ*.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಚಿತ್ರದುರ್ಗ : ಲಾರಿಗೆ ಇನ್ನೋವಾ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಸಿಬಾರಾ ಗ್ರಾಮದ ಬಳಿ ನಡೆದಿದೆ.

ಇದನ್ನು ಓದಿ : ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಇಂದು (ಮಾ.​ 09) ಈ ದುರ್ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಮೃತಪಟ್ಟ ಕಾರಿನವರ ಗುರುತು ಪತ್ತೆಯಾಗಿಲ್ಲ.

ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಇನ್ನೋವಾ ಕಾರು ವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಇದನ್ನು ಓದಿ : ಮಾಲೀಕ ತೀರಿಕೊಂಡಾಗ ಈ ನಾಯಿ ಅಳು ನೋಡಿದರೆ ನೀವೂ ಭಾವುಕರಾಗುತ್ತಿರಿ ; ನೋಡಿ ಹೃದಯಸ್ಪರ್ಶಿ Video.!

ಡಿಕ್ಕಿ ರಬ್ಬಸಕ್ಕೆ ಕಾರಿನಲ್ಲಿದ್ದ ಆರು ಜನರ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ಈ ದುರ್ಘಟನೆಯಲ್ಲಿ ಸಾವಗೀಡಾದ ದುರ್ದೈವಿಗಳನ್ನು  ಬೆಂಗಳೂರು ಮೂಲದ ಬಿಎಂಟಿಸಿ ನಿವೃತ್ತ ನೌಕರ ಶಾಂತಮೂರ್ತಿ(60), ವಿದ್ಯಾರಣ್ಯಪುರದ ರುದ್ರಸ್ವಾಮಿ(52), ಬೆಂಗಳೂರು ಉತ್ತರದ ಈರಣ್ಣ ಬಡಾವಣೆಯ ಮಲ್ಲಿಕಾರ್ಜುನ(50) ಎಂದು ಮೃತರ ಗುರುತು ಪತ್ತೆಯಾಗಿದೆ.

ಇದನ್ನು ಓದಿ : Airportನಲ್ಲಿ ಗುಂಡು ಹಾರಿಸಿಕೊಂಡು ಮಹಿಳಾ ಹೆಡ್ ಕಾನ್ಸ್‌ಟೇಬಲ್ ಆತ್ಮಹ*!

ಮೃತರಾದ ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಹಿಂದಿನ ಸುದ್ದಿ : Railway Gate ಮುಚ್ಚಿತು ಎಂದು ಬೈಕ್ ಸವಾರ ಮಾಡಿದ್ದೇನು ಗೊತ್ತಾ.? ವಿಡಿಯೋ ನೋಡಿದ್ರೆ ಬೆರಗಾಗ್ತೀರಾ.!

ಜನಸ್ಪಂದನ ನ್ಯೂಸ್, ಡೆಸ್ಕ್ : ರೈಲ್ವೆ ಕ್ರಾಸಿಂಗ್‌ ಬಳಿ ರೈಲು ಬರುವ ಸಮಯ ಒಂದಷ್ಟು ಹೊತ್ತುಗಳ ಕಾಲ ರೈಲ್ವೆ ಗೇಟ್‌ ಮುಚ್ಚುತ್ತಾರೆ. ಆದರೆ ಹೆಚ್ಚು ಹೊತ್ತು ರೈಲ್ವೆ ಗೇಟ್‌ ಮುಚ್ಚಿದಾಗ ಒಂದಷ್ಟು ವಾಹನ ಸವಾರರಿಗೆ ಕಿರಿಕಿರಿ ಅನಿಸುತ್ತದೆ.

ಇಲ್ಲೊಬ್ಬ ವ್ಯಕ್ತಿಗೂ ಹಾಗೆ ಆಗಿದೆ. ರೈಲ್ವೆ ಗೇಟ್‌ ಮುಚ್ಚಿದ್ದ ಸಂದರ್ಭದಲ್ಲಿ ಆ ಕಡೆಯಿಂದ ಈ ಕಡೆಗೆ ಹೋಗಲು ಸಾಧ್ಯವಾಗದೆ ಇನ್ನೂ ಎಷ್ಟು ಹೊತ್ತು ಅಂತ ಇಲ್ಲೇ ಕಾಯುತ್ತ ನಿಲ್ಲೋದು ಎಂದು ತನ್ನ ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್‌ ದಾಟಿದ್ದಾನೆ (He crossed the railway crossing carrying his bike on his shoulders).

ಇದನ್ನು ಓದಿ : ಪಾಕಿಸ್ತಾನದಲ್ಲಿರುವ ಶ್ರೀರಾಮನ ಪುತ್ರ ಲವನ ಸಮಾಧಿಗೆ ಭೇಟಿ ನೀಡಿದ Rajeev Shukla.!

ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈತನ ದುಸ್ಸಾಹಸ ಕಂಡು ನೆಟ್ಟಿಗರು ತಬ್ಬಿಬ್ಬು ಆಗಿದ್ದಾರೆ.

ರೈಲ್ವೆ ಗೇಟ್‌ ಮುಚ್ಚಿತ್ತು ಎಂದು ವ್ಯಕ್ತಿಯೊಬ್ಬ ತನ್ನ ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್‌ ದಾಟಿ ಆ ಕಡೆ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನು ಓದಿ : ಮೇಲಾಧಿಕಾರಿಯ ನೋಟಿಸ್‌ಗೆ ಅದ್ಬುತ ಉತ್ತರ : ನನ್ನ ಹೆಂಡತಿ ಎದೆಯ ಮೇಲೆ ಕುಳಿತು ರಕ್ತ ಕುಡಿಯುತ್ತಾಳೆಂದ Constable.!

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋ 5.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.

ಓರ್ವ ‘ಬಹುಶಃ ಈತ ಭಾರತದ ಐರನ್‌ ಮ್ಯಾನ್‌ ಇರ್ಬೇಕು’ (Perhaps he should be the Iron Man of India) ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬ ‘ಆತನಿಗೆ ಸಮಯ ವ್ಯರ್ಥ ಮಾಡುವುದು ಇಷ್ಟವಿಲ್ಲ ಎಂದು ಕಾಣಿಸುತ್ತದೆ’ ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಿ:

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!