ಜನಸ್ಪಂದನ ನ್ಯೂಸ್, ಡೆಸ್ಕ್ : ನಾಯಿಯ ಇನ್ನೊಂದು ಹೆಸರೆ ನಿಯತ್ತು. ಈ ನಾಯಿಗಳಿಗಿರುವ ನಿಯತ್ತು ಮತ್ಯಾವ ಪ್ರಾಣಿಗಳಲ್ಲೂ ಅಷ್ಟೊಂದು ಕಾಣಲು ಸಾಧ್ಯವಿಲ್ಲ. ನಾಯಿ ತನ್ನನ್ನು ಸಾಕಿದ ಮಾಲೀಕನಿಗಾಗಿ ತನ್ನ ಪ್ರಾಣವನ್ನು ಕೊಟ್ಟ ಅನೇಕ ಉದಾಹರಣೆಗಳಿವೆ. ಅದಕ್ಕಾಗಿಯೇ ಸ್ವಾಮಿ ನಿಷ್ಠೆಯನ್ನು ನೋಡುವುದಾದರೆ ಅದನ್ನು ನಾಯಿಯಲ್ಲಿ ನೋಡಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಅದೆಷ್ಟೋ ನಾಯಿಯ ನಿಯತ್ತಿ ವಿಡಿಯೋಗಳು ವೈರಲ್ ಆಗಿವೆ. ಇದೀಗ ಮತ್ತೆ ನಿಯತ್ತಿನ ನಾಯಿಯ ಒಂದು ವಿಡಿಯೋ ಸದ್ಯ ವೈರಲ್ ಆಗಿದೆ.
ಇದನ್ನು ಓದಿ : ನಿಮಗೆ ಗೊತ್ತಿಲ್ಲದೇ ಯಾರಾದರೂ ನಿಮ್ಮ ಆಧಾರ್ Card ಬಳಸುತ್ತಿದ್ದಾರೆಯೇ.?
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮನೆ ಮಾಲೀಕನು ಮೃತ ಪಟ್ಟಿದ್ದಾನೆ. ಹೀಗಾಗಿ ಕುಟುಂಬ ಸದಸ್ಯರೆಲ್ಲರು ಮೃತದೇಹದ ಮುಂದೆ ಕುಳಿತು ರೋಧಿಸುತ್ತಿದ್ದಾರೆ. ಇದು ಸ್ವಾಭಾವಿಕ ಅಂತ ನಿಮಗೆ ಅನಿಸಬಹುದು. ಆದರೆ ಆ ಕುಟುಂಬ ಸದಸ್ಯರ ಜೊತೆ ನಾಯಿಯು ಸಹ ಮೃತ ವ್ಯಕ್ತಿಯ ಕಾಲುಗಳಲ್ಲಿ ತನ್ನ ಮುಖ ಸೇರಿಸಿ ರೋಧಿಸುತ್ತಿರುವುದನ್ನು ನೋಡಿದರೆ ನಿಮ್ಮ ಹೃದಯ ತುಂಬಿ ಬರುವುದಲ್ಲಿ ಸಂಶಯವೇ ಇಲ್ಲ.
ನಾಯಿ ಅತ್ಯಂತ ದುಃಖದಲ್ಲಿ ಮುಖ ಕೆಳಗೆ ಮಾಡಿ ಜೋರಾಗಿ ಅಳುತ್ತಿರಬೇಕಾದರೆ ಅಲ್ಲಿ ಇದ್ದ ಓರ್ವ ವ್ಯಕ್ತಿ ಅದನ್ನು ಸಮಾಧಾನಪಡಿಸಲು ಶ್ವಾನದ ತಲೆ ಸವರುವ ಮೂಲಕ ಪ್ರಯತ್ನಿಸುತ್ತಿದ್ದಾರೆ. ಸದ್ಯ ಇಂತಹ ಹೃದಯಸ್ಪರ್ಶಿ ನಾಯಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ಇದನ್ನು ಓದಿ : Belagavi : ನರ್ಸಿಂಗ್ ಓದುತ್ತಿದ್ದ ಯುವತಿಯ ಕಿಡ್ನ್ಯಾಪ್ ಮಾಡಿದ ಯುವಕ.?
ಇಂದಿನ ಆಧುನಿಕ ಯುಗದಲ್ಲಿ ಸಂಬಂಧಗಳು, ಭಾವನೆಗಳು ಮತ್ತು ಮನುಷ್ಯತ್ವ ಸತ್ತೆ ಹೋಗಿದೆ. ಯಾರು ಬಿದ್ದರೇನು, ಸತ್ತರೇನು ನಮಗೇನು ಆಗಬೇಕು ನಾವೂ ಚನ್ನಾಗಿದ್ದರೆ ಸಾಕು ಎಂಬ ಭಾವನೆಯಲ್ಲಿ ಮನುಷ್ಯರಾದ ನಾವೂ ಬದುಕುತ್ತಿದ್ದೆವೆ.
ಆದರೆ ಆ ಮುಖ ಪ್ರಾಣಿ ತನಗೆ ಒಂದು ತುತ್ತು ಅನ್ನ ಕೊಟ್ಟವನು ಸಾವಿಗೀಡಾದಾಗ ಎಷ್ಟು ರೋಧಿಸುತ್ತಿದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಆ ಮುಖ ಪ್ರಾಣಿಗೆ ತನ್ನ ಮಾಲೀಕ ಮರಳಿ ಬಾರದ ಲೋಕಕ್ಕೆ ಹೋಗಿದ್ದಾನೆ ಎಂಬ ಅರಿವು ಅದಕ್ಕೆ ಇಲ್ಲದೆ ಇರಬಹುದು. ಆದರೆ ಆತನ ಸಾವು ನಾಯಿಗೆ ಎಷ್ಟೊಂದು ದುಃಖವನ್ನು ತಂದಿದೆ ಅನ್ನುವುದನ್ನು ಅದು ಅಳುತ್ತಿರುವುದನ್ನು ನೋಡಿ ನಾವು ತಿಳಿದುಕೊಳ್ಳಬಹುದು.
ಇದನ್ನು ಓದಿ : ಬೆಳಗಾವಿ : KSRTC ಬಸ್‌ನಲ್ಲಿಯೇ ಸಾವಿಗೆ ಶರಣಾದ ಬಸ್ ಮೆಕ್ಯಾನಿಕ್.!
ಈ ವಿಡಿಯೋವನ್ನು rakibul hasan rashel ಹೆಸರಿನ Instagram ಖಾತೆಯಲ್ಲಿ ಮಾರ್ಚ್ 08 ರಂದು ಹಂಚುಕೊಳ್ಳಲಾಗಿದ್ದು, ಸುಮಾರು 8,000 ಕ್ಕಿಂತ ಹೆಚ್ಚು likes ಪಡೆದುಕೊಂಡಿದೆ. ಈ ವಿಡಿಯೋ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ಇಲ್ಲದೆ ನೋಡಿ ಹೃದಯಸ್ಪರ್ಶಿ ವಿಡಿಯೋ :
View this post on Instagram
ಹಿಂದಿನ ಸುದ್ದಿ : ಪಾಕಿಸ್ತಾನದಲ್ಲಿರುವ ಶ್ರೀರಾಮನ ಪುತ್ರ ಲವನ ಸಮಾಧಿಗೆ ಭೇಟಿ ನೀಡಿದ Rajeev Shukla.!
ಜನಸ್ಪಂದನ ನ್ಯೂಸ್, ಡೆಸ್ಕ್ : ಪಾಕಿಸ್ತಾನದಲ್ಲಿರುವ ಶ್ರೀರಾಮನ ಪುತ್ರ ಲವನ ಸಮಾಧಿಗೆ ಬಿಸಿಸಿಐ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಭೇಟಿ ನೀಡಿದ್ದಾರೆ.
ಬಿಸಿಸಿಐ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಅವರು ಮಾರ್ಚ್ 6, ಗುರುವಾರ ಲಾಹೋರ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (ICC Champions Trophy) ದಕ್ಷಿಣ ಆಫ್ರಿಕಾ-ನ್ಯೂಜಿಲೆಂಡ್ 2ನೇ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಹೋಗಿದ್ದರು.
ಲಾಹೋರ್ ಭೇಟಿ ಸಂದರ್ಭದಲ್ಲಿ ರಾಜೀವ್ ಶುಕ್ಲಾ ಅವರು ಶ್ರೀರಾಮನ ಪುತ್ರ (Son of Lord Rama) ಲವ (LAVA) ಅವರ ಸಮಾಧಿಗೆ ಭೇಟಿ ನೀಡಿದ್ದಾರೆ. ರಾಜೀವ್ ಶುಕ್ಲಾ ಅವರೊಂದಿಗೆ ಪಾಕಿಸ್ತಾನದ ಗೃಹ ಸಚಿವ (Pakistan Home Minister) ಮೊಹ್ಸಿನ್ ನಖ್ವಿ ಕೂಡ ಇದ್ದರು.
ಇದನ್ನು ಓದಿ : ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ.!
ಬಿಸಿಸಿಐ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ತಮ್ಮ ಎಕ್ಸ್ (formerly known as Twitter) ಖಾತೆಯಲ್ಲಿ ಭೇಟಿಯ ಬಗ್ಗೆ ಹಂಚಿಕೊಂಡಿದ್ದಾರೆ. “ಪುರಸಭೆಯ ದಾಖಲೆಗಳಲ್ಲಿ ಲಾಹೋರ್ (Lahore) ನಗರಕ್ಕೆ ಶ್ರೀರಾಮನ ಪುತ್ರ ಲವ ಅವರ ಹೆಸರಿಡಲಾಗಿದೆ ತಿಳಿದು ಬರುತ್ತದೆ.
ಹಾಗೆಯೇ ಕಸೂರ್ (Kasur) ನಗರಕ್ಕೆ ಅವರ ಮತ್ತೊಬ್ಬ ಪುತ್ರ ಕುಶ್ ಅವರ ಹೆಸರಿಡಲಾಗಿದೆ ಎಂದು ಪುರಸಭೆಯ ದಾಖಲೆಗಳಲ್ಲಿ ದಾಖಲಿಸಲಾಗಿದೆ. ಪಾಕಿಸ್ತಾನ ಸರ್ಕಾರವೂ (Pakistani government) ಈ ಸಂಗತಿಯನ್ನು ಒಪ್ಪಿಕೊಳ್ಳುತ್ತದೆ” ಎಂದು ರಾಜೀವ್ ಶುಕ್ಲಾ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ : ಕಣ್ಣಿನ Shape ಹೇಳುತ್ತೆ ನಿಮ್ಮ ನಿಗೂಢ ಸ್ವಭಾವ.!
“ಲಾಹೋರ್‌ನ ಪ್ರಾಚೀನ ಕೋಟೆಯಲ್ಲಿ ಶ್ರೀರಾಮನ ಪುತ್ರ ಲವ ಅವರ ಪ್ರಾಚೀನ ಸಮಾಧಿ (ancient tomb) ಇದೆ. ಲಾಹೋರ್‌ಗೆ ಅವರ ಹೆಸರಿಡಲಾಗಿದೆ. ಅಲ್ಲಿ ಪ್ರಾರ್ಥನೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿತು. ನನ್ನೊಂದಿಗೆ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ (Mohsin Naqvi) ಕೂಡ ಇದ್ದರು, ಅವರು ಈ ಸಮಾಧಿಯನ್ನು ನವೀಕರಿಸುತ್ತಿದ್ದಾರೆ. ಮೊಹ್ಸಿನ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಕೆಲಸವನ್ನು ಪ್ರಾರಂಭಿಸಿದ್ದರು” ಎಂದು ಟ್ವೀಟ್ ಹೇಳಿಕೊಂಡಿದ್ದಾರೆ.