ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಡಿಪೋ – 1 ರ ಮೆಕ್ಯಾನಿಕ್ (mechanic) ಓರ್ವರು KSRTC ಬಸ್‌ನಲ್ಲಿಯೇ ನೇಣು ಬೀಗಿದುಕೊಂಡು ಸಾವಿಗೆ ಶರಣಾದ ದುರ್ಘಟನೆ ನಡೆದಿದೆ.
ಸಾವಿಗೆ ಶರಣಾದ ಬಸ್ ಮೆಕ್ಯಾನಿಕ್ ಕೇಶವ ಕಮಡೊಳಿ (57) ಎಂದು ತಿಳಿದು ಬಂದಿದೆ.
ಮೃತ ಕೇಶವ ಕಮಡೊಳಿ ಬೆಳಗಾವಿಯ ಹಳೇ ಗಾಂಧಿನಗರದ ನಿವಾಸಿಯಾಗಿದ್ದು, ಕೆಎಸ್ಆರ್ಟಿಸಿ ಬಸ್ ವಾಶಿಂಗ್ (washing) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನು ಓದಿ : 10Th/PUC/Degree ಪಾಸಾದವರಿಗೆ ಪಶು ಸಂಗೋಪನಾ ನಿಗಮದಲ್ಲಿ ಉದ್ಯೋಗವಕಾಶ.!
ಮೃತ ಕೇಶವ್ ಅವರಿಗೆ ಬೆನ್ನು ನೋವು ಇತ್ತು ಎಂದು ಹೇಳಲಾಗುತ್ತಿದ್ದು, ಆದಾಗ್ಯೂ ಅವರನ್ನು ಅಧಿಕಾರಿಗಳು ಪಂಚರ್ ಕೆಲಸಕ್ಕೆ ಬದಲಾಯಿದ್ದರು ಎನ್ನಲಾಗಿದೆ.
ಬೆನ್ನು ನೋವು ಇದ್ದ ಕಾರಣ ಡ್ಯೂಟಿ ಬದಲಿಸದಂತೆ ಅಧಿಕಾರಿಗಳಿಗೆ ಕೇಶವ ಅವರು ಮನವಿ ಮಾಡಿದ್ದರು. ಅಷ್ಟಾಗಿಯೂ ಕೂಡ ಡ್ಯೂಟಿ ಬದಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನು ಓದಿ : ಪಾಕಿಸ್ತಾನದಲ್ಲಿರುವ ಶ್ರೀರಾಮನ ಪುತ್ರ ಲವನ ಸಮಾಧಿಗೆ ಭೇಟಿ ನೀಡಿದ Rajeev Shukla.!
ಬೆನ್ನು ನೋವು ಇದ್ದ ಹಿನ್ನೆಲೆಯಲ್ಲಿ ಡ್ಯೂಟಿ ಬದಲಿಸಿದ್ದಕ್ಕೆ ಮತ್ತು ಕೆಲಸದ ಒತ್ತಡ ತಡೆದುಕೊಳ್ಳಲು ಆಗದೆ ಕೇಶವ ಶುಕ್ರವಾರ ತಡರಾತ್ರಿ (ಮಾ.07) ಸಾವಿಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ಮೆಕ್ಯಾನಿಕ್ ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಅಧಿಕಾರಿಗಳ ವಿರುದ್ಧ ಮೃತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಭೀ*ರ ರಸ್ತೆ ಅ*ಘಾತ : ನಾಲ್ವರು ಯುವಕರು ಸಾ*.!
ಆತ್ಮಹತ್ಯೆ ವಿಚಾರ ತಿಳಿದು ಸ್ಥಳಕ್ಕೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿಂದಿನ ಸುದ್ದಿ : Railway Gate ಮುಚ್ಚಿತು ಎಂದು ಬೈಕ್ ಸವಾರ ಮಾಡಿದ್ದೇನು ಗೊತ್ತಾ.? ವಿಡಿಯೋ ನೋಡಿದ್ರೆ ಬೆರಗಾಗ್ತೀರಾ.!
ಜನಸ್ಪಂದನ ನ್ಯೂಸ್, ಡೆಸ್ಕ್ : ರೈಲ್ವೆ ಕ್ರಾಸಿಂಗ್ ಬಳಿ ರೈಲು ಬರುವ ಸಮಯ ಒಂದಷ್ಟು ಹೊತ್ತುಗಳ ಕಾಲ ರೈಲ್ವೆ ಗೇಟ್ ಮುಚ್ಚುತ್ತಾರೆ. ಆದರೆ ಹೆಚ್ಚು ಹೊತ್ತು ರೈಲ್ವೆ ಗೇಟ್ ಮುಚ್ಚಿದಾಗ ಒಂದಷ್ಟು ವಾಹನ ಸವಾರರಿಗೆ ಕಿರಿಕಿರಿ ಅನಿಸುತ್ತದೆ.
ಇಲ್ಲೊಬ್ಬ ವ್ಯಕ್ತಿಗೂ ಹಾಗೆ ಆಗಿದೆ. ರೈಲ್ವೆ ಗೇಟ್ ಮುಚ್ಚಿದ್ದ ಸಂದರ್ಭದಲ್ಲಿ ಆ ಕಡೆಯಿಂದ ಈ ಕಡೆಗೆ ಹೋಗಲು ಸಾಧ್ಯವಾಗದೆ ಇನ್ನೂ ಎಷ್ಟು ಹೊತ್ತು ಅಂತ ಇಲ್ಲೇ ಕಾಯುತ್ತ ನಿಲ್ಲೋದು ಎಂದು ತನ್ನ ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಟಿದ್ದಾನೆ (He crossed the railway crossing carrying his bike on his shoulders).
ಇದನ್ನು ಓದಿ : ಪಾಕಿಸ್ತಾನದಲ್ಲಿರುವ ಶ್ರೀರಾಮನ ಪುತ್ರ ಲವನ ಸಮಾಧಿಗೆ ಭೇಟಿ ನೀಡಿದ Rajeev Shukla.!
ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈತನ ದುಸ್ಸಾಹಸ ಕಂಡು ನೆಟ್ಟಿಗರು ತಬ್ಬಿಬ್ಬು ಆಗಿದ್ದಾರೆ.
ರೈಲ್ವೆ ಗೇಟ್ ಮುಚ್ಚಿತ್ತು ಎಂದು ವ್ಯಕ್ತಿಯೊಬ್ಬ ತನ್ನ ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಟಿ ಆ ಕಡೆ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : ಮೇಲಾಧಿಕಾರಿಯ ನೋಟಿಸ್‌ಗೆ ಅದ್ಬುತ ಉತ್ತರ : ನನ್ನ ಹೆಂಡತಿ ಎದೆಯ ಮೇಲೆ ಕುಳಿತು ರಕ್ತ ಕುಡಿಯುತ್ತಾಳೆಂದ Constable.!
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋ 5.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಓರ್ವ ‘ಬಹುಶಃ ಈತ ಭಾರತದ ಐರನ್ ಮ್ಯಾನ್ ಇರ್ಬೇಕು’ (Perhaps he should be the Iron Man of India) ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬ ‘ಆತನಿಗೆ ಸಮಯ ವ್ಯರ್ಥ ಮಾಡುವುದು ಇಷ್ಟವಿಲ್ಲ ಎಂದು ಕಾಣಿಸುತ್ತದೆ’ ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ:
A guy Lifted his bike on his shoulders to Cross the Railway barrier: pic.twitter.com/ki4dx5BmZZ
— Ghar Ke Kalesh (@gharkekalesh) March 6, 2025