ಜನಸ್ಪಂದನ ನ್ಯೂಸ್, ತುಮಕೂರು : ತುಮಕೂರು ಜಿಲ್ಲೆಯ ತಿಪಟೂರು (Tipatur in Tumkur district) ತಾಲೂಕಿನ ರಂಗಾಪುರ ಗ್ರಾಮದಲ್ಲಿ (village of Rangapur) ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಯುವಕನೊಬ್ಬ ಬರಿಗೈಲಿ ಹಿಡಿದು ಸಾಹಸ (He took a bare -handed adventure) ಮೆರೆದ ಘಟನೆ ನಡೆದಿದೆ.
ಆನಂದ್ ಎಂಬ ಯುವಕನ ಧೈರ್ಯ, ಸಾಹಸವನ್ನು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲ ಕೊಂಡಾಡುತ್ತಿದ್ದಾರೆ.
ಇದನ್ನು ಓದಿ : Video : ಗಾಳಿಪಟ ಹಾರಿಸುತ್ತಿರುವ ಮಂಗ : “ಇದು ಭಾರತದಲ್ಲಿ ಮಾತ್ರ ಸಾಧ್ಯ” ಎಂದ ನೆಟ್ಟಿಗರು.!
ಇಂದು ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಸಮೀಪ ಚಿರತೆ ಕಾಣಿಸಿಕೊಂಡಿದೆ.
ಇದರಿಂದ ಆತಂಕಗೊಂಡ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ (Forest Department staff) ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಸಕಲ ಸಲಕರಣೆಗಳೊಂದಿಗೆ ಬಂದಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗದೇ ತಮ್ಮ ಪ್ರಯತ್ನ ಮುಂದುವರೆಸಿದ್ದರು.
ಇದನ್ನು ಓದಿ : ಕಡಲೆ ಕಾಯಿ (ಶೇಂಗಾ) ಸೇವನೆಯಿಂದ ಆಗುವ ನಂಬಲಾರ್ಹ ಪ್ರಯೋಜನಗಳಿವು.!
ಈ ವೇಳೆ ಯುವಕ ಆನಂದ್, ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ್ದಾರೆ (Hold the tail and put it in the cage). ಇತ್ತ ಯುವಕ ಚಿರತೆ ಹಿಡಿದ ಕೂಡಲೇ ಅರಣ್ಯ ಇಲಾಖೆಯವರು ಚಿರತೆ ಮೇಲೆ ಬಲೆ ಹಾಕಿದ್ದು, ಅದನ್ನು ರಕ್ಷಿಸಿ ಬೇರೆ ಕಡೆ ತೆಗೆದುಕೊಂಡು ಹೋಗಿದ್ದಾರೆ.
ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗುತ್ತಿದೆ.
ವೈರಲ್ ಆಗಿರುವ ಯುವಕನ ವಿಡಿಯೋ ಇಲ್ಲಿದೆ ವೀಕ್ಷಿಸಿ :
Indeed, a filmy capture of a leopard in Karnataka. pic.twitter.com/0tKtRqKlFF
— Ajay Kumar (@ajay_kumar31) January 7, 2025
ಹಿಂದಿನ ಸುದ್ದಿ : ಕಡಲೆ ಕಾಯಿ (ಶೇಂಗಾ) ಸೇವನೆಯಿಂದ ಆಗುವ ನಂಬಲಾರ್ಹ ಪ್ರಯೋಜನಗಳಿವು.!
ಜನಸ್ಪಂದನ ನ್ಯೂಸ್, ಆರೋಗ್ಯ : ಬಡವರ ಬಾದಾಮಿ ಎಂದು ಕರೆಯುವ ಕಡಲೆ ಕಾಯಿಯನ್ನು (ನೆಲಗಡಲೆ) ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಇಷ್ಟಪಟ್ಟು ತಿನ್ನುತ್ತಾರೆ. ಈ ಕಡಲೆಕಾಯಿಯಲ್ಲಿ ಫೋಲಿಕ್ ಆಮ್ಲವು (Folic acid) ಹೆಚ್ಚಾಗಿರುತ್ತದೆ.
ಇದನ್ನು ಓದಿ : ವಿಲ್ ಬರೆದು Register ಮಾಡಿದ್ರೆ ಸಾಲದು ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
100 ಗ್ರಾಂ ಕಡಲೆಕಾಯಿಯಲ್ಲಿ 24 ಗ್ರಾಂ ಮೊನೊಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. 16 ಗ್ರಾಂ ಪಾಲಿಅನ್ ಸ್ಯಾಚುರೇಟೆಡ್’ಗಳನ್ನು (Polyunsaturated) ಹೊಂದಿರುತ್ತದೆ.
ಇನ್ನೂ ಚೀನಾ ಬಳಿಕ ಭಾರತವು ವಿಶ್ವದ ಎರಡನೇ ಅತಿದೊಡ್ಡ ನೆಲಗಡಲೆ ಉತ್ಪಾದನೆ ಮಾಡುವ ರಾಷ್ಟ್ರ (India is the second largest groundnut producer in the world) ಎನ್ನುವುದು ಹೆಮ್ಮೆಯ ಸಂಗತಿ.
ಇದನ್ನು ಓದಿ : Shocking ಘಟನೆ : ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದವನ ಜೊತೆ ಓಡಿಹೋದ 10ರ ಬಾಲಕಿ.!
* ಕಡಲೆಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಲು ಸಹಾಯಕವಾಗಿದೆ.
* ರಕ್ತ ಪರಿಚಲನೆ (blood circulation) ಸುಧಾರಿಸಲು ಇದು ಉಪಯುಕ್ತ.
* ಹೃದಯ ಸಂಬಂಧಿ ಮತ್ತು ಹೃದಯಾಘಾತ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
ಇದನ್ನು ಓದಿ : ರೊಮ್ಯಾಂಟಿಕ್ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!
* ಹಲವು ರೀತಿಯ ಸೋಂಕುಗಳು ಮತ್ತು ರೋಗಗಳನ್ನು ನಿಯಂತ್ರಿಸಬಹುದು (Diseases and infections can be controlled).
* ಕಡಲೆಕಾಯಿ ಮೆದುಳಿನ ಬೆಳವಣಿಗೆ ಮತ್ತು ಸ್ಮರಣೆಗೆ ತುಂಬಾ ಒಳ್ಳೆಯದು.
* ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ಗಳಿದ್ದು, ದೃಷ್ಟಿ ಸುಧಾರಣೆಗೆ (Vision improvement) ಇವು ಸಹಾಯ ಮಾಡುತ್ತವೆ.
ಇದನ್ನು ಓದಿ : ಮನೆಯ ಟೆರಸ್ ಮೇಲೆ lover ಜೊತೆ ಸಿಕ್ಕಿಬಿದ್ದ ಪತ್ನಿ; ಡಿಸೈನ್ ಡಿಸೈನಾಗಿ ಹೊಡೆದ ಪತಿ.!
* ಉತ್ಕರ್ಷಣ ನಿರೋಧಕಗಳ (Antioxidants) ಉತ್ತಮ ಮೂಲವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಉಪಯುಕ್ತವಾಗಿದೆ.
* ನಮ್ಮನ್ನು ಅನಾರೋಗ್ಯಕ್ಕೆ ಒಳಗಾಗದಂತೆ ತಡೆದು, ಯೌವನವನ್ನು ಕಾಪಾಡಿಕೊಳ್ಳಲು (To preserve youth) ಸಹಾಯ ಮಾಡುತ್ತದೆ.
* ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳು (Gas, indigestion, constipation and acidity problems) ಸಹ ಕಡಿಮೆಯಾಗುತ್ತವೆ.
ಇದನ್ನು ಓದಿ : ಸಂಚಲನ ಸೃಷ್ಟಿಸಿದ ಒಂದೇ ಕೆರೆಯಲ್ಲಿ PSI, ಲೇಡಿ ಕಾನ್ಸ್‌ಟೇಬಲ್ ಮತ್ತು ಓರ್ವ ಯುವಕನ ಶವ ಪತ್ತೆ ಪ್ರಕರಣ.!
* ಕಡಲೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಒತ್ತಡವು ಕಡಿಮೆಯಾಗುವುದು (Less stress).
* ಶೇಂಗಾದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ (calcium and magnesium) ಸಮೃದ್ಧವಾಗಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಳೆಗಳನ್ನು ಬಲಪಡಿಸಬಹುದು.
* ಪ್ರತಿದಿನ 30 ಗ್ರಾಂ ಕಡಲೆ ಕಾಯಿ ತಿನ್ನುವುದರಿಂದ ಪಿತ್ತಕೋಶದ ಕಲ್ಲುಗಳನ್ನು ಜ ತಡೆಯಬಹುದೆಂಬ ಅಂಶ 20 ವರ್ಷಗಳ ಸುದೀರ್ಘ ಅಧ್ಯಯನದಲ್ಲಿ ಬಹಿರಂಗವಾಗಿದೆ.