ಜನಸ್ಪಂದನ ನ್ಯೂಸ್, ಡೆಸ್ಕ್ : ತಾವು ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್, ಮೋದಿ ಮೋದಿ ಘೋಷಣೆ ಕೂಗುವ ವಿಡಿಯೋಗಳು ವೈರಲ್ ಆಗುತ್ತಿವೆ.
ಈ ಹಿಂದೆ ರಾಹುಲ್ ಗಾಂಧಿ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರಿಗೆ ಶೇಕ್ ಹ್ಯಾಂಡ್ ಮಾಡಿದ್ದರು. ಆದರೆ, ಈ ಸಲ ರಾಹುಲ್ ಗಾಂಧಿಗೆ ಬಿಜೆಪಿ ಕಾರ್ಯಕರ್ತರು ಆಲೂಗಡ್ಡೆ ಕೊಟ್ಟಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗುತ್ತಿದೆ.
ಇದನ್ನು ಓದಿ : ಟ್ರೋಲರ್ಗಳಿಗೆ ಟ್ರೋಲ್ SONG ಡೆಡಿಕೇಟ್ ಮಾಡಿದ ಉಪ್ಪಿ ; ಸಖತ್ ವೈರಲ್.!
ವಿಡಿಯೋದಲ್ಲಿರುವ ದೃಶ್ಯ :
ರಾಹುಲ್ ಗಾಂಧಿ ತೆರೆದ ವಾಹನದಲ್ಲಿ ಪ್ರಚಾರ (promotion) ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ.
ಕೂಡಲೇ ವಾಹನವನ್ನು ನಿಲ್ಲಿಸುವಂತೆ ಹೇಳಿದ ರಾಹುಲ್ ಗಾಂಧಿ, ವಾಹನದಿಂದ ಇಳಿದು ನೇರವಾಗಿ ಬಿಜೆಪಿ ಕಾರ್ಯಕರ್ತರ ಹೋಗಿ ಹಸ್ತಲಾಘವ ಮಾಡಿದರು. ಈ ವೇಳೆ ಕೆಲವು ಕಾರ್ಯಕರ್ತರು ರಾಹುಲ್ಗೆ ಚಿನ್ನ (gold) ತಯಾರಿಸಲು ಆಲೂಗಡ್ಡೆಯನ್ನು (potatoes) ನೀಡಿದರು.
ಇದನ್ನು ಓದಿ : LS – 2024 : ಇಂದೇ ರಾಜ್ಯದ 28 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.?
2017 ರಲ್ಲಿ ಚುನಾವಣಾ ಪ್ರಚಾರದ ಸಂದರ್ಭ ರಾಹುಲ್ ಗಾಂಧಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ವಿಡಿಯೋದಲ್ಲಿ, ಮೆಷೀನ್ನ (machine) ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಆಕಡೆಯಿಂದ ಚಿನ್ನ ಬರುತ್ತದೆ ಎಂದು ಹೇಳಿದ ಮಾತು ಸಖತ್ ಸೌಂಡ್ ಮಾಡಿತ್ತು.
ಅಂಡ್ ಭಕ್ತರು ಎರಡು ನಿಮಿಷದಲ್ಲಿ #RahulGandhi ಅವರನ್ನು ಕಂಡು ಬದಲಾಗುವ ಸನ್ನಿವೇಶ 🤩 pic.twitter.com/hvyajIUslS
— Goudrusarkar – ಗೌಡ್ರುಸರ್ಕಾರ್ (@Gs_0107) March 5, 2024