ಶುಕ್ರವಾರ, ಜನವರಿ 2, 2026

Janaspandhan News

HomeGeneral NewsVande-Bharat : ಬೆಳಗಾವಿ - ಬೆಂಗಳೂರು ವಂದೇ ಭಾರತ್ ರೈಲಿಗೆ ಆ.10 ರಂದು ಪ್ರಧಾನಿಯಿಂದ ಚಾಲನೆ.!
spot_img
spot_img
spot_img

Vande-Bharat : ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಆ.10 ರಂದು ಪ್ರಧಾನಿಯಿಂದ ಚಾಲನೆ.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಕೊನೆಗೂ ಬೆಳಗಾವಿ – ಬೆಂಗಳೂರು ವಂದೇ ಭಾರತ್ (Vande-Bharat) ರೈಲಿಗೆ ಆ.10 ರಂದು ಪ್ರಧಾನಿಯಿಂದ ಚಾಲನೆ ದೊರೆಯುವ ಮೂಲಕ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಬೆಳಗಾವಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ (Vande-Bharat) ರೈಲು ಆರಂಭಿಸಲು ಶತ ಪ್ರಯತ್ನ ನಡೆಸಿದ್ದರು. ಕೊನೆಗೂ ಅದಕ್ಕೆ ದಿನ ನಿಗದಿಯಾಗಿದೆ. ಈ ಬಗ್ಗೆ ಜಗದೀಶ್ ಶೆಟ್ಟರ್ ಹಾಗೂ ಈರಣ್ಣ ಕಡಾಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನು ಓದಿ : ನಿಯಂತ್ರಣ ತಪ್ಪಿದ bolero ಕಾರು : ರಸ್ತೆಯ ಬದಿ ನಿಂತಿದ್ದ ಜನರಿಗೆ ಡಿಕ್ಕಿ ; 5 ಜನರಿಗೆ ಗಾಯ.!

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ದಕ್ಷಿಣ ಬೆಂಗಳೂರನ್ನು (ಎಲೆಕ್ಟ್ರಾನಿಕ್ ಸಿಟಿ) ನಗರದ ಕೇಂದ್ರಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ (ಆ‌ರ್.ವಿ. ರಸ್ತೆ-ಬೊಮ್ಮಸಂದ್ರ) ಚಾಲನೆ ನೀಡಲಿದ್ದಾರೆ. ಇದೇ ವೇಳೆ ಮೂರು ವಂದೇ ಭಾರತ್ ರೈಲುಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ.

ಕರ್ನಾಟಕ ಪ್ರವಾಸದಂದು ಮೋದಿ ಅವರು ಬೆಂಗಳೂರು-ಬೆಳಗಾವಿ, ನಾಗ್ಪುರದ ಅಜ್ನಿ-ಪುಣೆ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೊ ದೇವಿ ಕಟ್ರಾ ಮಧ್ಯೆ ಸಂಚರಿಸಲಿರುವ ನೂತನ ವಂದೇ ಭಾರತ್ (Vande-Bharat) ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಬೆಳಗಾವಿ – ಬೆಂಗಳೂರು Vande-Bharat ರೈಲಿನ ವೇಳಾ ಪಟ್ಟಿ :

ಸಂಸದರ ಕೋರಿಕೆಯ ಮೇರೆಗೆ ಬೆಂಗಳೂರು-ಬೆಳಗಾವಿ ವಂದೇ ಭಾರತ್ (Vande-Bharat) ರೈಲಿಗೆ ಅನುಮೋದನೆ ನೀಡಲಾಗಿತ್ತು. ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 1.50ಕ್ಕೆ ಆಗಮಿಸಲಿದೆ.

ಇದನ್ನು ಓದಿ : Rape ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಬೇಲ್ ಮೇಲೆ ಹೊರ ಬಂದ ಆರೋಪಿ.!

ಬೆಂಗಳೂರಿನಿಂದ ವಾಪಸ್ಸು ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಳಗಾವಿಗೆ ತಲುಪಲಿದೆ. ಈ ಮೂಲಕ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯ ನಡುವೆ ಸಂಪರ್ಕ ಹೆಚ್ಚಿಸಲಿದೆ’ ಎಂದು ಜೋಶಿ ತಿಳಿಸಿದ್ದಾರೆ.

ರೈಲು ಯೋಜನೆ ಜಾರಿಗೆ ಸಹಕರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದ ಎಂದು ಜೋಶಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.


CCRAS ನಲ್ಲಿ 394 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ.!

CCRAS

ಜನಸ್ಪಂದನ ನ್ಯೂಸ್‌,ನೌಕರಿ : ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿ (CCRAS) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ದೇಶದಾದ್ಯಂತ ಒಟ್ಟು 394 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ CCRAS ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

ಇದನ್ನು ಓದಿ : Love-Case : ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ murder.!
CCRAS ನಲ್ಲಿ ಲಭ್ಯವಿರುವ ಹುದ್ದೆಗಳು :

ಅನುವಾದಕ (ಹಿಂದಿ ಸಹಾಯಕ), ಸಂಶೋಧನಾ ಸಹಾಯಕ (ಸಸ್ಯಶಾಸ್ತ್ರ, ಔಷಧಶಾಸ್ತ್ರ, ಫಾರ್ಮಸಿ, ರಸಾಯನಶಾಸ್ತ್ರ), ಲೋವರ್ ಡಿವಿಷನ್ ಕ್ಲರ್ಕ್ (LDC), ಸ್ಟೆನೋಗ್ರಾಫರ್ ಗ್ರೇಡ್-I ಮತ್ತು II, ಸ್ಟಾಫ್ ನರ್ಸ್, ಗ್ರಂಥಾಲಯ ಗುಮಾಸ್ತ, ಭದ್ರತಾ ಅಧಿಕಾರಿ, ಸಂಶೋಧನಾ ಅಧಿಕಾರಿ (ಆಯುರ್ವೇದ, ರೋಗಶಾಸ್ತ್ರ), ಸಹಾಯಕ ಸಂಶೋಧನಾ ಅಧಿಕಾರಿ, ಬಹು ಕಾರ್ಯ ಸಿಬ್ಬಂದಿ (MTS), ಅಪ್ಪರ್ ಡಿವಿಷನ್ ಕ್ಲರ್ಕ್ (UDC), ಸಹಾಯಕ, ಔಷಧಿಕಾರ, ಪ್ರಯೋಗಾಲಯದ ಪರಿಚಾರಕ, ಸಾಮಾನ್ಯ ದರ್ಜೆಯ ಚಾಲಕ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ, ಸಂಖ್ಯಾಶಾಸ್ತ್ರೀಯ ಸಹಾಯಕ, ಆಫ್ಸೆಟ್ ಮೆಷಿನ್ ಆಪರೇಟರ್ ಸೇರಿದಂತೆ ಹಲವು ಹುದ್ದೆಗಳು ಒಳಗೊಂಡಿವೆ.

ವೇತನ ಶ್ರೇಣಿ :
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.37,000 ರಿಂದ ರೂ.42,000 ವರೆಗೆ ವೇತನ ನೀಡಲಾಗುತ್ತದೆ.
ವಯೋಮಿತಿ  :
  • ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷ ಮೀರಬಾರದು.
ವಿದ್ಯಾರ್ಹತೆ :
  • ಶೈಕ್ಷಣಿಕ ಅರ್ಹತೆಯಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿ, ಐಟಿಐ, ಪದವಿ, ಎಂಡಿ/ಎಂಎಸ್, ಎಂ. ಫಾರ್ಮ್ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
ಇದನ್ನು ಓದಿ : Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ CCRAS ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಅಧಿಸೂಚನೆಯನ್ನು ಓದಿ, ಅರ್ಹತೆ ಪರಿಶೀಲಿಸಿ.
  3. ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ.
  4. ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
  5. ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  6. ವಿವರಗಳನ್ನು ಪರಿಶೀಲಿಸಿ, ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆ ಪ್ರಾರಂಭ : 01 ಜುಲೈ 2025.
  • ಅರ್ಜಿ ಸಲ್ಲಿಕೆ ಕೊನೆ : 31 ಆಗಸ್ಟ್ 2025.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಅಧಿಕೃತ CCRAS ವೆಬ್‌ಸೈಟ್‌ಗೆ ಭೇಟಿ ನೀಡಿ.

Disclaimer : The above given information is available On online, candidates should check it properly before applying. This is for information only.

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments